ಬೆಂಗಳೂರು: ನಿನ್ನೆಯಷ್ಟೇ ಡಿಸಿಎಂ ಡಿ.ಕೆ.ಶಿವಕುಮಾರ್, ಪೊಲೀಸ್ ಅಧಿಕಾರಿಗಳ ಜೊತೆ, ಸಭೆ ನಡೆಸಿದ್ದು, ಪೊಲೀಸ್ ಇಲಾಖೆ ಕೇಸರಿಕರಣ ಮಾಡಲು ಹೊರಟಿದ್ದೀರಾ..? ಈ ಸರ್ಕಾರದಲ್ಲಿ ಅದೆಲ್ಲಾ ನಡೆಯುವುದಿಲ್ಲ. ಮಂಗಳೂರಿನಲ್ಲಿ ಪೊಲೀಸರೇ ಕೇಸರಿ ಶಾಲ್ ಹಾಕುತ್ತಾರೆ ಅಂದರೆ ಹೇಗೆ..? ನಮ್ಮ ಸರ್ಕಾರದಲ್ಲಿ ಹೀಗೆಲ್ಲ ಕೇಸರಿಕರಣ ಮಾಡೋಕ್ಕೆ ನಾವು ಬಿಡಲ್ಲ, ಎಂದು ಕ್ಲಾಸ್ ತೆಗೆದುಕೊಂಡಿದ್ದರು. ಇದಕ್ಕೆ ಸಂಬಂಧಿಸಿದಂತೆ, ಬಿಜೆಪಿ ನಾಯಕರು ಡಿಕೆಶಿ ವಿರುದ್ಧ ಕಿಡಿ ಕಾರಿದ್ದಾರೆ.
ಬಿ.ವೈ.ವಿಜಯೇಂದ್ರ ಈ ಬಗ್ಗೆ ಟ್ವೀಟ್ ಮಾಡಿದ್ದು, ಮಾನ್ಯ ಡಿ.ಕೆ.ಶಿವಕುಮಾರ್ ರವರೇ ಕೇಸರೀಕರಣವೆಂದರೆ ಕೆಂಡಕಾರುವಿರೇಕೆ? ದಕ್ಷ ಪೋಲೀಸ್ ಅಧಿಕಾರಿಗಳ ಮೇಲೆ ನಿಮಗ್ಯಾಕಿಷ್ಟು ಅಸಹನೆ ? ‘ಕೇಸರಿ ‘ಸರ್ವತ್ರ ಸಾಧಕ ಕನ್ನಡಿಗ ಹನುಮನ ಸಂಕೇತ. ಸಂತರು, ಸಾತ್ವಿಕರು, ತಪಸ್ವಿಗಳ ಪ್ರತೀಕ, ಭಾರತೀಯ ಸಂಸ್ಕೃತಿಯ ಹೆಮ್ಮೆಯ ದ್ಯೋತಕ. ಪಾಕೀಕರಣ ಬಿತ್ತುವ ವಿದ್ರೋಹಿಗಳಿಗೆ ‘ ಕೇಸರಿ’ ದುಃಸ್ವಪ್ನದ ಅಸ್ತ್ರ ಎಂದು ಬರೆದುಕೊಂಡಿದ್ದಾರೆ.
ಮಾನ್ಯ@DKShivakumar ರವರೇ
ಕೇಸರೀಕರಣವೆಂದರೆ ಕೆಂಡಕಾರುವಿರೇಕೆ?
ದಕ್ಷ ಪೋಲೀಸ್ ಅಧಿಕಾರಿಗಳ ಮೇಲೆ ನಿಮಗ್ಯಾಕಿಷ್ಟು ಅಸಹನೆ ?
‘ಕೇಸರಿ ‘ಸರ್ವತ್ರ ಸಾಧಕ ಕನ್ನಡಿಗ ಹನುಮನ ಸಂಕೇತ. ಸಂತರು, ಸಾತ್ವಿಕರು, ತಪಸ್ವಿಗಳ ಪ್ರತೀಕ, ಭಾರತೀಯ ಸಂಸ್ಕೃತಿಯ ಹೆಮ್ಮೆಯ ದ್ಯೋತಕ. ಪಾಕೀಕರಣ ಬಿತ್ತುವ ವಿದ್ರೋಹಿಗಳಿಗೆ ‘ ಕೇಸರಿ’ ದುಃಸ್ವಪ್ನದ ಅಸ್ತ್ರ. pic.twitter.com/PRKQ6Wrg9V— Vijayendra Yeddyurappa (@BYVijayendra) May 24, 2023
ಸಿಎಂ ಸಿದ್ದರಾಮಯ್ಯ ಸೇರಿ ಹಲವು ಕಾಂಗ್ರೆಸ್ ನಾಯಕರನ್ನು ಭೇಟಿ ಮಾಡಿದ ಎಸ್.ಆರ್.ಪಾಟೀಲ್..