ಮುಂಬೈ: ಹಿಂದಿ ಧಾರಾವಾಹಿ ಮತ್ತು ಸಿನಿಮಾಗಳಲ್ಲಿ ನಟಿಯಾಗಿದ್ದ ವೈಭವಿ ಉಪಾಧ್ಯಾಯ(32) ಇಂದು ರಸ್ತೆ ಅಪಘಾತದಲ್ಲಿ ಸಾವಿಗೀಡಾಗಿದ್ದಾರೆ. ಹಿಮಾಚಲ ಪ್ರದೇಶದಲ್ಲಿ, ತಮ್ಮ ಭಾವಿ ಪತಿಯೊಂದಿಗೆ ಪ್ರಯಾಣಿಸುವ ವೇಳೆ, ಕಾರು ಅಪಘಾತವಾಗಿ, ಕಣಿವೆಗೆ ಬಿದ್ದು, ವೈಭವಿ ಸಾವನ್ನಪ್ಪಿದ್ದಾಳೆ.
ಸಾರಾಭಾಯಿ ವರ್ಸಸ್ ಸಾರಾಭಾಯಿ ಎಂಬ ಶೋನಲ್ಲಿ ನಟಿಸುತ್ತಿದ್ದ ವೈಭವಿ, ಜಾಸ್ಮಿನ್ ಎಂದೇ ಪ್ರಸಿದ್ಧರಾಗಿದ್ದರು. ದೀಪಿಕಾ ಪಡುಕೋಣೆ ಅಭಿನಯದ ಛಪಾಕ್ ಸಿನಿಮಾದಲ್ಲೂ ವೈಭವಿ ನಟಿಸಿದ್ದರು. ಈಕೆಯ ಸಾವಿಗೆ ಹಿಂದಿ ಚಿತ್ರರಂಗದವರು ಸಂತಾಪ ಸೂಚಿಸಿದ್ದು, ಮುಂಬೈನಲ್ಲಿ ವೈಭವಿಯ ಅಂತ್ಯಸಂಸ್ಕಾರ ನೇರವೇರಿದೆ.
ಮೇ 6ರಂದು ವೈಭವಿ ತಮ್ಮ ಇನ್‌ಸ್ಟಾಗ್ರಾಂಮಲ್ಲಿ ಹಿಮಾಚಲ ಪ್ರದೇಶದ ಪ್ರವಾಸದ ಬಗ್ಗೆ ಪೋಸ್ಟ್ ಹಂಚಿಕೊಂಡಿದ್ದರು. 2019ರಲ್ಲಿ ನಾನು ಹಿಮಾಚಲ ಪ್ರದೇಶಕ್ಕೆ ಟ್ರಿಪ್ ಹೋಗಿದ್ದು ನೆನಪಿಗೆ ಬಂದು, ಈ ರೀಲ್ಸ್ ಶೇರ್ ಮಾಡಿದ್ದೇನೆ ಎಂದು ಕೂಡ ಅವರು ಬರೆದುಕೊಂಡಿದ್ದರು. ಮತ್ತೊಮ್ಮೆ ಹಿಮಾಚಲ ಪ್ರದೇಶ ನೋಡಬೇಕೆಂದು ಬಯಸಿ ಅವರು ತಮ್ಮ ಭಾವಿ ಪತಿಯೊಂದಿಗೆ, ಪ್ರವಾಸಕ್ಕೆ ತೆರಳಿದ್ದರು. ಆದರೆ ದುರಾದೃಷ್ಟವಶಾತ್, ರಸ್ತೆ ಅಪಘಾತದಲ್ಲಿ ನಟಿ ಸಾವನ್ನಪ್ಪಿದ್ದಾರೆ.
‘ಬೇರ’ ಸಿನಿಮಾ ಟ್ರೈಲರ್ ಲಾಂಚ್ ಮಾಡಿದ ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ