ಒಡಿಶಾ: ಪ್ಲಾಸ್ಟಿಕ್ ಬಾಟಲಿಯಲ್ಲಿದ್ದ ಡೀಸೆಲನ್ನು ನೀರೆಂದು ಕುಡಿದು, ಒಂದೂವರೆ ವರ್ಷದ ಮಗು ಸಾವನ್ನಪ್ಪಿರುವ ಘಟನೆ ಒಡಿಶಾದ ಬಾಲಸೋರ್ ಜಿಲ್ಲೆಯಲ್ಲಿ ನಡೆದಿದೆ. ಮೃತ ಮಗುವಿನ ತಂದೆ, ಪ್ಲಾಸ್ಟಿಕ್ ಬಾಟಲಿಯಲ್ಲಿ ಡಿಸೇಲ್ ತುಂಬಿಸಿ ತಂದಿದ್ದರು. ಗಾಡಿ ರಿಪೇರಿ ಮಾಡುವಾಗ, ಡಿಸೇಲ್ ಬಾಟಲಿಯನ್ನ ತನ್ನ ಬಳಿಯೇ ಇಟ್ಟುಕೊಂಡಿದ್ದ. ಆದ್ರೆ ಅಲ್ಲೇ ಆಟವಾಡುತ್ತಿದ್ದ ಮಗು, ಅಪ್ಪನ ಕಣ್ಣು ತಪ್ಪಿಸಿ, ಬಾಟಲಿಯಲ್ಲಿದ್ದ ಡಿಸೇಲ್ ಕುಡಿದಿದೆ.
ಈ ವಿಷಯ ಅಪ್ಪನ ಗಮನಕ್ಕೆ ಬರುವ ಹೊತ್ತಿಗೆ, ಮಗುವಿಗೆ ವಾಂತಿ ಶುರುವಾಗಿದೆ. ಮಗುವಿನ ನರಳಾಟ ಶುರುವಾದಾಗ, ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದ್ರೆ ಅಲ್ಲಿಂದ ಹೆಚ್ಚಿನ ಚಿಕಿತ್ಸೆಗೆ ಏಮ್ಸ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿಯೂ ಚಿಕಿತ್ಸೆ ಸರಿಯಾಗಿ ಸಿಗಲಿಲ್ಲ. ಮುಂದೆ ಮತ್ತೊಂದು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಲು ಹೋದಾಗ, ಅಲ್ಲಿ ಚಿಕಿತ್ಸೆ ಫಲಿಸದೇ, ಮಗು ಸಾವನ್ನಪ್ಪಿದೆ.
ಕೆ.ಜಿ.ಎಫ್ ತಾತನ ಆರೋಗ್ಯದಲ್ಲಿ ಏರುಪೇರು, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ
‘ಹೊಳೆನರಸಿಪುರದವರನ್ನ ಹಾಸನಕ್ಕೆ ಕರೆತಂದು ಗೆಲ್ಲಿಸ್ತೀವಿ ಅನ್ನೋ ಭ್ರಮೆಯಲ್ಲಿದ್ರೆ, ಹೊರಬನ್ನಿ’