Thursday, October 17, 2024

Latest Posts

Baby Food: ಒಂದು ವರ್ಷದೊಳಗಿನ ಮಕ್ಕಳಿಗಾಗಿ ಬೇಬಿ ಫುಡ್ ರೆಸಿಪಿ..

- Advertisement -

ತಮ್ಮ ಮಕ್ಕಳು ಮುದ್ದು ಮುದ್ದಾಗಿ, ಗುಂಡು ಗುಂಡಾಗಿ ಇರಬೇಕು. ಆರೋಗ್ಯವಾಗಿರಬೇಕು ಅನ್ನೋದು ಎಲ್ಲ ತಾಯಂದಿರ ಆಸೆ. ಆದ್ರೆ ಅದಕ್ಕೆ ಯಾವ ರೀತಿಯ ತಿಂಡಿ ಕೊಡಬೇಕು ಅನ್ನೋದು ಹಲವರಿಗೆ ಗೊತ್ತಿರುವುದಿಲ್ಲ. ಹಾಗಾಗಿ ನಾವಿಂದು ಬೇಬಿ ಫುಡ್ ರೆಸಿಪಿ ತಂದಿದ್ದೇವೆ. ಆ ರೆಸಿಪಿ ಮಾಡೋದು ಹೇಗೆ..? ಅದನ್ನ ಮಾಡೋಕ್ಕೆ ಯಾವ ಸಾಮಗ್ರಿ ಬೇಕು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..

ಎರಡು ಹಸಿ ಖರ್ಜೂರ, ಎರಡು ಬಾದಾಮ್, 4 ಕಾಜು, 4 ಒಣದ್ರಾಕ್ಷಿ, 4 ಪಿಸ್ತಾ, ಒಂದು ಅಖ್ರೂಟ್, ಮೂರು ಸ್ಪೂನ್ ಅವಲಕ್ಕಿ, ಅರ್ಧ ಕಪ್ ಹಾಲು, ಅರ್ಧ ಸ್ಪೂನ್ ಬೆಲ್ಲ, ಅರ್ಧ ಸ್ಪೂನ್ ತುಪ್ಪ. ಇವಿಷ್ಟು ಬೇಬಿ ಫುಡ್ ತಯಾರಿಸೋಕ್ಕೆ ಬೇಕಾಗಿರುವ ಸಾಮಗ್ರಿ.

ಮೊದಲು ಖರ್ಜೂರದ ಬೀಜವನ್ನು ತೆಗೆದು, ಬಾದಾಮ್, ಪಿಸ್ತಾ, ಕಾಜು, ಅಖ್ರೂಟ್, ಒಣದ್ರಾಕ್ಷಿಯನ್ನು ಆರು ಗಂಟೆ ನೀರಿನಲ್ಲಿ ನೆನೆಸಿಡಿ. ಅದಕ್ಕೂ ಮುನ್ನ ಇವುಗಳನ್ನ ನೀರಿನಲ್ಲಿ ಚೆನ್ನಾಗಿ ತೊಳೆದುಕೊಳ್ಳಿ. 6 ಗಂಟೆ ಬಳಿಕ, ಅವಲಕ್ಕಿಯನ್ನು ಚೆನ್ನಾಗಿ ತೊಳೆದು, 10 ನಿಮಿಷ ನೀರಿನಲ್ಲಿ ನೆನೆಸಿಡಿ. ಈಗ ಅವಲಕ್ಕಿ, ನೆನೆಸಿದ ಡ್ರೈಫ್ರೂಟ್ಸ್ ಸೇರಿಸಿ, ಪೇಸ್ಟ್ ತಯಾರಿಸಿಕೊಳ್ಳಿ.

ಈ ಪೇಸ್ಟ್‌ನ್ನ ಹಾಲಿನೊಟ್ಟಿಗೆ ಸೇರಿಸಿ, ಬೆಲ್ಲ ಹಾಕಿ ಕುದಿಸಿ, ಮಣ್ಣಿ ತಯಾರಿಸಿಕೊಳ್ಳಿ. ನಿಮ್ಮ ಮಗುವಿಗೆ ತುಪ್ಪವನ್ನು ಜೀರ್ಣಿಸಿಕೊಳ್ಳುವ ಶಕ್ತಿ ಇದ್ದಲ್ಲಿ, ಇದಕ್ಕೆ ತುಪ್ಪ ಬೆರೆಸಿ ತಿನ್ನಿಸಿ. ನಿಮ್ಮ ಮಗು ಈ ಆಹಾರವನ್ನು ತಿಂದು ಜೀರ್ಣಿಸಿಕೊಂಡರೆ, ನೀವು ಬೇಬಿ ಫುಡ್‌ನ ನಿಮ್ಮ ಮಗುವಿಗೆ ನೀಡಬಹುದು. ಇದರೊಟ್ಟಿಗೆ ಕುದಿಸಿ, ತಣಿಸಿದ ನೀರನ್ನ ಕುಡಿಸಿದರೂ ಉತ್ತಮ. ಆದ್ರೆ ಈ ತಿಂಡಿ ತಿಂದು ಮಗುವಿಗೆ ಜೀರ್ಣವಾಗದಿದ್ದಲ್ಲಿ, ಈ ಬಗ್‌ಗೆ ವೈದ್ಯರ ಬಳಿ ವಿಚಾರಿಸಿ, ನಂತರ ನೀಡುವುದು ಉತ್ತಮ.

- Advertisement -

Latest Posts

Don't Miss