Political News : ಬಾಗಲಕೋಟೆ ಲೋಕಸಭೆ ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತಾ ಪಾಟೀಲ್ , ಪ್ರಚಾರದ ನಡುವೆ ರೊಟ್ಟಿ ಮುಟಗಿ ಊಟ ಸವಿದು , ಸಚಿವ ಶಿವಾನಂದ ಪಾಟೀಲ ಪುತ್ರಿ ಎಲ್ಲರ ಗಮನ ಸೆಳೆದರು. ರೊಟ್ಟಿ ಮುಟಗಿಗೆ ಫೇಮಸ್ ಇರುವ ಊಟದ ಮನೆಯಾದ ಬಾಗಲಕೋಟೆ ವಿದ್ಯಾಗಿರಿಯ ಅನ್ನಪೂರ್ಣೇಶ್ವರ ಊಟದ ಮನೆಯಲ್ಲಿ ರೊಟ್ಟಿ ಸವಿದರು.
ಬೀಳಗಿ, ಬಾಗಲಕೋಟೆಯಲ್ಲಿ ಪ್ರಚಾರ ನಡೆಸಿ ನಂತರ ಸಂಯುಕ್ತ ಪಾಟೀಲ ಮಧ್ಯಾಹ್ನ ರಣಬಿಸಿಲಿನಲ್ಲಿ ರೊಟ್ಟಿ ಮುಟಗಿ ಸವಿದು ತದ ನಂತರ ಮತ್ತೆ ಪ್ರಚಾರಕ್ಕೆ ತೆರಳಿದರು. ನಂತರ ಖಾನಾವಳಿ ಮಾಲಕಿ ಅವರಿಗೆ ಮೆಚ್ಚುಗೆ ವ್ಯಕ್ತಪಡಿಸಿದರು ಸಂಯುಕ್ತಾ . ಇದೇ ವೇಳೆ ಮಗನ ಅಕಾಲಿಕ ಮರಣ ನೆನೆದು ಭಾವುಕಳಾದ ಮಾಲಕಿಯನ್ನು ನೋಡಿ ಸಂಯುಕ್ತಾ ಖಾನಾವಳಿ ಮಾಲಕಿಗೆ ಸಮಾಧಾನ ಹೇಳಿದರು.
ಕಾಂಗ್ರೆಸ್‌ನವರು ಉದರಿ ಭಾಗ್ಯಗಳ ಬಗ್ಗೆ ಪ್ರಚಾರ ಮಾಡಿದ್ರೆ ನಡೆಯುತ್ತಾ..?: ಲಾಡ್‌ಗೆ ಜೋಶಿ ತಿರುಗೇಟು..
ನಿಮ್ದು ಲಿಂಗಾಯತರನ್ನು ಒಡೆದು ಆಳೋ ನೀತಿ- ದಿಂಗಾಲೇಶ್ವರ ಸ್ವಾಮೀಜಿ ಆರೋಪ..