Monday, December 23, 2024

Latest Posts

Jain Milan : ಬಜಗೋಳಿ ಜೈನ್ ಮಿಲನ್ ಮಾಸಿಕ ಸಭೆ

- Advertisement -

Karkala News: ಕಾರ್ಕಳ : ಸಂಘ ಸಂಸ್ಥೆಗಳನ್ನು ನಡೆಸಿಕೊಂಡು ಹೋಗುವಾಗ ಎಷ್ಟೇ ಒಳ್ಳೆಯ ರೀತಿಯಲ್ಲಿ ಕಾರ್ಯನಿರ್ವಹಿಸಿದರೂ ಪ್ರಶಂಸೆಯ ಜೊತೆಗೆ ಟೀಕೆಗಳು ಬರುವುದು ಸಹಜ. ಜೈನ್   ಮಿಲನ್ ಕೂಡ ಇದಕ್ಕೆ ಹೊರತಲ್ಲ. ಸೃಜನಾತ್ಮಕ ಟೀಕೆಗಳಿಗೆ ಮಾನ್ಯತೆ ಕೊಟ್ಟು ಉಳಿದ ಟೀಕೆಗಳನ್ನು ಕಡೆಗಣಿಸಿ ಮುನ್ನಡೆದಾಗ ಯಶಸ್ಸು ನಿಶ್ಚಿತ ಎಂದು ಬಾರತೀಯ ಜೈನ್ ಮಿಲನ್ ವಲಯ 8ರ ಮಂಗಳೂರು ವಿಭಾಗದ ಜೊತೆ ಕಾರ್ಯದರ್ಶಿ ವೀರಾಂಗನಾ ಶಶಿಕಲಾ ಕೆ.ಹೆಗ್ಡೆ ಹೇಳಿದರು.

ಅವರು ಬಜಗೋಳಿ ಜೈನ ಮಿಲನ್ ಮತ್ತು ಯುವ ಜೈನ್ ಮಿಲನ್ ನ ಇತ್ತಿಚೆಗೆ ನಡೆದ ಜುಲೈ ತಿಂಗಳ ಮಾಸಿಕ ಸಭೆಯ ಮುಖ್ಯ ಅತಿಥಿಯಾಗಿ ಆಗಮಿಸಿ ಮಾತನಾಡಿದರು. ಮಿಲನ್ ಎಂದರೆ ಕೇವಲ ಅಧ್ಯಕ್ಷರು ಕಾರ್ಯದರ್ಶಿ ಮಾತ್ರವಲ್ಲ, ಎಲ್ಲಾ ಪದಾಧಿಕಾರಿಗಳು ಸೇರಿಕೊಂಡು ಏಕ ಭಾವದಿಂದ ದುಡಿದಾಗ ಮಾತ್ರ ಜೈನ್ ಮಿಲನ್ ಯಶಸ್ವಿಯಾಗಲು ಸಾಧ್ಯ. ನಮ್ಮ ಜೈನ್ ಮಿಲನ್ ಎಂಬುದು ಕೇವಲ ರಾಜ್ಯಕ್ಕೆ ರಾಷ್ಟ್ರಕ್ಕೆ ಸೀಮಿತವಾಗಿರದೆ ಅಂತಾರಾಷ್ಟ್ರೀಯ ಮಟ್ಟದಲ್ಲೂ ತನ್ನ ಛಾಪು ಮೂಡಿಸುತ್ತಿದೆ. ಮಿಲನ್ ಜೈನ ಸಮಾಜವನ್ನು ಒಂದುಗೂಡಿಸುವಲ್ಲಿ ಪ್ರಮುಖ ಪಾತ್ರ ವಹಿಸಬೇಕು. ಜೈನ ಯುವಜನತೆ ಮಿಲನ್ ಕಾರ್ಯಗಳಲ್ಲಿ ತೊಡಗುವಂತೆ ಅವರನ್ನು ಪ್ರೆರೇಪಿಸಬೇಕು ಎಂದರು.

ಮಿಲನ್ ಅಧ್ಯಕ್ಷೆ ಶಕುಂತಲಾ ವರ್ಮ, ಉಪಾಧ್ಯಕ್ಷೆ ವೀರಾಂಗನ ವಿಜಯಲಕ್ಷ್ಮಿ,ಮಂಗಳೂರು ವಿಭಾಗದ ವಲಯ ನಿರ್ದೇಶಕ  ವೀರ್ ಶ್ರೀವರ್ಮ ಅಜ್ರಿ ಅವರ ಗೌರವ ಉಪಸ್ಥಿತಿಯಲ್ಲಿ ಈ ಸಭೆಯು ಜರುಗಿತು. ಬೆಳಗಾವಿಯ ಚಿಕ್ಕೋಡಿಯ ಶ್ರೀ 108 ಕಾಮಕುಮಾರ ನಂದಿ ಮುನಿ ಮಹಾರಾಜರ ಘೋರ ಹತ್ಯೆಯನ್ನು ಖಂಡಿಸಿ, ಸಭೆಯಲ್ಲಿ ಖಂಡನಾ ನಿರ್ಣಯವನ್ನು ಕೈಗೊಳ್ಳಲಾಯಿತು. ಹಾಗೂ ಈ ಸಂಬಂಧ ಕಾರ್ಕಳ ಮತ್ತು ಬಜಗೋಳಿ ಜೈನ ಮಿಲನ್‍ಗಳು ಜಂಟಿಯಾಗಿ ಕಾರ್ಕಳ ತಹಶೀಲ್ದಾರರಿಗೆ ಮನವಿ ಸಲ್ಲಿಸುವುದೆಂದು ಸಭೆಯಲ್ಲಿ ನಿರ್ಧರಿಸಿದರು. ಮುನಿಗಳ ಆತ್ಮಕ್ಕೆ ಮೋಕ್ಷ ಪ್ರಾಪ್ತಿಗಾಗಿ  ಮೂರು ಬಾರಿ ಸಾಮೂಹಿಕ ಪಂಚಣಮೋಕಾರ ಮಂತ್ರ ಪಠಣ ಮಾಡಲಾಯಿತು. ಈ ಸಂದರ್ಭದಲ್ಲಿ  ಮಿಲನ್ ನ ನಿಕಟಪೂರ್ವ ಅಧ್ಯಕ್ಷ ವೀರ್ ಭರತ್ ರಾಜ್ ಜೈನ್ ಅವರು ಪೂಜ್ಯ ಮುನಿಗಳಿಗೆ ನುಡಿ ನಮನ ಸಲ್ಲಿಸಿದರು.

Hareesh Shetty : ಬಸ್ ಚಾಲಕ ಬಾವಿಗೆ ಹಾರಿ ಆತ್ಮಹತ್ಯೆ

 

- Advertisement -

Latest Posts

Don't Miss