ಆಂಧ್ರಪ್ರದೇಶ: ಏಳುಬೆಟ್ಟದ ಒಡೆಯ ತಿರುಪತಿ ತಿಮ್ಮಪ್ಪನ ದರ್ಶನವೇ ಕಣ್ಣಿಗೆ ಹಬ್ಬ. ಸರತಿ ಸಾಲಿನಲ್ಲಿ ಗಂಟೆಗಟ್ಟಲೆ ನಿಂತು ವೆಂಕಟೇಶ್ವರ ಆ ಒಂದೇ ಒಂದು ಕ್ಷಣದ ದರ್ಶನಕ್ಕೆ ಭಕ್ತರು ಕಾತುರರಾಗಿರ್ತಾರೆ. ಆದ್ರೆ ತಿಮ್ಮಪ್ಪನ ಈ ದಿವ್ಯ ಸನ್ನಿಧಿಯ ಬಳಿ ಫೋಟೋಗಳೂ ಮಾತನಾಡುತ್ತವೆ. ಆಶ್ಚರ್ಯವಾದ್ರೂ ಇದು ಸತ್ಯ.
ತಿರುಪತಿಯಿಂದ 15 ಕಿ.ಮೀ ದೂರವಿರೋ ತಿರುಚಾನೂರು ಪದ್ಮಾವತಿ ಅಮ್ಮನವರ ದೇವಸ್ಥಾನದ ಎದುರಿಗಿರುವ ಫ್ರೈಡೇ ಪಾರ್ಕ್ ನಲ್ಲಿ ಈ ಅದ್ಬುತವನ್ನು ಕಣ್ತುಂಬಿಕೊಳ್ಳಬಹುದಾಗಿದೆ. ಈ ಉದ್ಯಾನವನದಲ್ಲಿ ತಿಮ್ಮಪ್ಪನ ಲೀಲೆಗಳನ್ನು ಸಾರಿ ಹೇಳೋ ಚಿತ್ರಗಳನ್ನು ಪ್ರದರ್ಶಿಸಲಾಗಿದೆ. ನಿಮ್ಮ ಮೊಬೈಲ್ ನ ಮೂಲಕ ಫೋಟೋ ನೋಡಿದ್ರೆ ತಿರುಪತಿ ತಿಮ್ಮಪ್ಪನ ಆ ಫೋಟೋಗೆ ಸಂಬಂಧಪಟ್ಟ ಕಥೆ ವಿಡಿಯೋ ಮೂಲಕ ಪ್ಲೇ ಆಗುತ್ತದೆ. ಶ್ರೀನಿವಾಸನ ಲೀಲೆಗಳು, ಶ್ರೀನಿವಾಸ ಪದ್ಮಾವತಿ ಕಲ್ಯಾಣ ಸೇರಿದಂತೆ ತಿಮ್ಮಪ್ಪನ ಕುರಿತಾದ ಕಥೆಗಳ ವಿಡಿಯೋಗಳು ಕಣ್ಣಿಗೆ ಕಟ್ಟಿದಂತೆ ಪ್ಲೇ ಆಗುತ್ತವೆ.
ಈ ವಿಡಿಯೋ ನೋಡೋದಕ್ಕಾಗಿ ನಿಮ್ಮ ಆಂಡ್ರಾಯ್ಡ್ ಮೊಬೈಲ್ ನಿಂದ ಆ್ಯಪ್ ಸ್ಟೋರ್ ನಲ್ಲಿ ‘ಪದ್ಮಾವತಿ ಪರಿಣಯ’ ಆ್ಯಪ್ ಡೌನ್ ಲೋಡ್ ಮಾಡಬೇಕು. ಬಳಿಕ ಪಾರ್ಕ್ ನಲ್ಲಿನ ಒಂದೊಂದು ಫೋಟೋವನ್ನು ಆ್ಯಪ್ ಮೂಲಕ ಓಪನ್ ಮಾಡಿದಾಗ ಫೋಟೋಗೆ ಸಂಬಂಧಿಸಿದ ಕಥೆ ತನಾಗೇ ಪ್ಲೇ ಯಾಗುತ್ತೆ.
ಅಡ್ವಾನ್ಸ್ಡ್ಅಗುಮೆಂಟೆಡ್ ರಿಯಾಲಿಟಿ ಟೆಕ್ನಾಲಜಿ ಮೂಲಕ ಈ ರೀತಿಯ ಅದ್ಬುತ ವ್ಯವಸ್ಥೆ ಕಲ್ಪಿಸಲಾಗಿದ್ದು, ಯಾಥ್ರಿಗಳನ್ನು ಕೈಬೀಸಿ ಕರೆಯುತ್ತಿದೆ.
ನಿಖಿಲ್ ಕುಮಾರ್, ಆಂಧ್ರ ಸಿಎಂ ಭೇಟಿಯಾದ ಉದ್ದೇಶವಾದ್ರೂ ಏನು..?? ಮಿಸ್ ಮಾಡದೇ ಈ ವಿಡಿಯೋ ನೋಡಿ