ಬಿಜೆಪಿಯಿಂದ ಪ್ರತಿಭಟನಾ ರ್ಯಾಲಿ: ಟ್ರಾಫಿಕ್‌ನಿಂದ ಬೇಸತ್ತು ಸಚಿವರಿಗೆ ತರಾಟೆ ತೆಗೆದುಕೊಂಡ ಮಹಿಳೆ

Mumbai Political News: ಬಿಜೆಪಿ ಪ್ರತಿಭಟನೆ ವೇಳೆ ಟ್ರಾಫಿಕ್ ಜಾಮ್ ಉಂಟಾಗಿ, ವಾಹನ ಚಲಿಸಲು ಅಡೆತಡೆಯಾದ ಪರಿಣಾಮ ಓರ್ವ ಯುವತಿ, ಸಚಿವರನ್ನೇ ಗೆಟ್ ಔಟ್ ಫ್ರಂ ಹಿಯರ್ ಎಂದು ಬೈದ ಘಟನೆ ನಡೆದಿದೆ.

ಮಹಿಳಾ ಮಸೂದೆಯನ್ನು ವಿರೋಧಿಸಿದ ಕಾರಣ, ವಿಪಕ್ಷಗಳ ವಿರುದ್ಧ ಮಹಾರಾಷ್ಟ್ರ ಬಿಜೆಪಿ ಪ್ರತಿಭಟನಾ ರ್ಯಾಲಿ ಹಮ್ಮಿಕ`ಂಡಿತ್ತು. ಮುಂಬೈನ ವರ್ಲಿಯಲ್ಲಿ ಈ ಪ್ರತಿಭಟನಾ ರ್ಯಾಲಿ ನಡೆಯುತ್ತಿತ್ತು. ಈ ಕಾರಣದಿಂದ ಸ್ಥಳದಲ್ಲಿ ಟ್ರಾಫಿಕ್ ಜಾಮ್ ಉಂಟಾಗಿ, ಜನರು ಕಂಗಾಲಾಗಿದ್ದರು. ಅದರಲ್ಲಿ ಓರ್ವ ಮಹಿಳೆ ತನ್ನ ಮಗುವನ್ನು ಕರೆತರಲು ಹೋಗುತ್ತಿದ್ದು, ಅದಕ್ಕೆ ತಡವಾಗುತ್ತಿದ್ದ ಕಾರಣ, ಕೋಪಗ“ಂಡ ಆಕೆ, ಸಚಿವರ ಬಳಿ ಬಂದು, ದಬಾಯಿಸಿದ್ದಾಳೆ.

ಮಹಾರಾಷ್ಟ್ರ ಸಚಿವ ಗಿರೀಶ್ ಮಹಾಜನ್ ಅವರನ್ನು ಮಹಿಳೆ ತರಾಟೆ ತೆಗೆದುಕ“ಂಡಿದ್ದಾಳೆ. ಇಲ್ಲಿಂದ ಹೋಗಿ, ನಿಮ್ಮಿಂದಾಗಿ ಇಲ್ಲಿ ಟ್ರಾಫಿಕ್ ಜಾಮ್ ಉಂಟಾಗಿ ಜನಸಾಮಾನ್ಯರಿಗೆ ಸಮಸ್ಯೆ ಆಗುತ್ತಿದೆ ಎಂದಿದ್ದಾಳೆ. ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಸಚಿವರು ಕ್ಷಮೆಯಾಚಿಸಿದ್ದಾರೆ.

ಆಕೆ ಬೇಡದ ಪದ ಬಳಕೆ ಮಾಡಿದ್ದರು. ಮತ್ತು ನಾವು ಹೇಳುವ ಮಾತು ಕೇಳುವಷ್ಟು ತಾಳ್ಮೆ ಅವಳಲ್ಲಿರಲಿಲ್ಲ. ಸಮಾಧಾನಪಡಿಸುವ ಪ್ರಯತ್ನ ಮಾಡಿದರೂ ಆಕೆ ಸಮಾಧಾನವಾಗಲಿಲ್ಲ ಎಂದಿದ್ದರೆ. ಆದರೆ ಸೋಶಿಯಲ್ ಮೀಡಿಯಾದಲ್ಲಿ ಮಹಿಳೆಯ ಧೈರ್ಯಕ್ಕೆ ಎಲ್ಲರೂ ಭೇಷ್ ಎಂದಿದ್ದಾರೆ.

About The Author