Wednesday, August 20, 2025

Latest Posts

Bangalore : ಇಂದಿನಿಂದ 3 ದಿನಗಳ ಕಾಲ ವಿದ್ಯುತ್ ಕಡಿತ.

- Advertisement -

ಕೊರೊನಾ (Corona) ದಿನದಿಂದ ದಿನಕ್ಕೆ ಅಧಿಕವಾಗಿ ಹಬ್ಬುತ್ತಿರುವುದರಿಂದ ಜನರು ಮನೆಯಿಂದ ಆಚೆ ಬರಲು ಭಯ ಪಡುವಂತ ಪರಿಸ್ಥಿತ್ತಿ ಎದುರಾಗಿದೆ. ಇದರಿಂದ ಕಚೇರಿಗಳಿಗೆ ಹೋಗಿ ಕೆಲಸ ಮಾಡುವವರು ಕೊರೊನಾ (Corona) ಹಾಗೂ ಒಮಿಕ್ರಾನ್ (omicron) ಮಹಾಮಾರಿಯಿಂದ ವರ್ಕ್ ಫ್ರಮ್ ಹೋಮ್ (Work from home) ಕೆಲಸ ಸರಿ ಎಂದು ಮನೆಯಲ್ಲಿಯೇ ಕೆಲಸ ನಿರ್ವಹಿಸುತ್ತಿದ್ದಾರೆ. ಮಕ್ಕಳು ಸಹ ಶಾಲೆಗೆ ಹೋಗದಂತೆ ಆನ್ ಲೈನ್ ಕ್ಲಾಸ್ (Online Class) ಕೇಳಲು ಸರ್ಕಾರ ತಿಳಿಸಿದ್ದೆ. ಕೊರೊನಾ (corona) ಸೋಂಕು ಇರುವಿದರಿಂದ ಮನೆಯಿಂದ ಹೊರಗೆ ಬರಲ್ಲು ಆಗೋದಿಲ್ಲ, ಇದರ ನಡುವೆ ಎಲ್ಲಾ ಕೆಲಸಗಳನ್ನು ಮುಗಿಸಿ ಮನರಂಜನೆಗಾಗಿ ಟಿವಿ ನೋಡೋಣಾ ಎನ್ನುವ ಜನರಿಗೆ ಬೆಸ್ಕಾಂ ಶಾಕ್ ನೀಡಲು ಮುಂದಾಗಿದೆ. ಅನೇಕ ಪ್ರದೇಶಗಳಲ್ಲಿ ತುರ್ತು ಕಾಮಗಾರಿ ಇರುವುದರಿಂದ ಬೆಂಗಳೂರಿನ 4 ಕಡೆಗಳಲ್ಲಿ ಇಂದಿನಿಂದ ಬೆಸ್ಕಾಂ 3 ದಿನಗಳ ಕಾಲ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಮಾಡಲಿದೆ.

ಜನೆವರಿ 13 ರಂದು ಬೆಂಗಳೂರಿನ ದಕ್ಷಿಣ ವಲಯಗಳಾದ ವಿನಾಯಕ ನಗರ, ಜರಗನಹಳ್ಳಿ.ಕೃಷ್ಣ ದೇವರಾಯ ನಗರ, ವಿಟ್ಲ ನಗರ, ಕುಮಾರ ಸ್ವಾಮಿ ಲೇಔಟ್, ಸಿದ್ದಾಪುರ, ಸೋಮೇಶ್ವರ ನಗರ, ಜೆಪಿ ನಗರ 6ನೇ ಹಂತ, ಪುಟ್ಟೇನ ಹಳ್ಳಿ, ಜೆಪಿ ನಗರ 1ನೇ ಹಂತ. ಶಾಕಾಂಬರಿ ನಗರ, ಸಾರಕ್ಕಿ ಮಾರುಕಟ್ಟೆ. ಬನಶಂಕರಿ 2ನೇ ಹಂತ, ಅಯ್ಯೋದ್ಯ ನಗರ, ಜೆಪಿ ನಗರ 5ನೇ ಹಂತ, ಸರ್ವಭೌಮನಗರ, ಅಮರಜ್ಯೋತಿ ವೆಸ್ಟ್ ವಿಂಗ್, ಮಾರತಹಳ್ಳಿ, ಸಂಜಯ್ ನಗರ, ಮಂಜುನಾಥ ನಗರ, ಹೊಂಗಸಂದ್ರ, ಬಿಡಿಎ ಮೊದಲ ಹಂತ, 4ನೇ ಬ್ಲಾಕ್ ಬಿಡಿಎ ಮತ್ತು ನ್ಯಾನಪ್ಪನಹಳ್ಳಿಯಲ್ಲಿ ಬೆಳಗ್ಗೆ 10 ರಿಂದ ಸಂಜೆ 5 ರವರಿಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.

ಜನೆವರಿ 14 ರಂದು ಬೆಂಗಳೂರಿನ ಪೂರ್ವ ವಲಯಗಳಾದ  ಮುನಿಯಪ್ಪ ಲೇಔಟ್, ಉದಯನಗರ, ಕೆಜಿ ಪುರ ಮುಖ್ಯರಸ್ತೆ, ಬಾಣಸವಾಡಿ, ರಾಚೇನಹಳ್ಳಿ, ಶ್ರೀರಾಂಪುರ, ಮೇಸ್ತ್ರಿ ಪಾಳ್ಯ, ಚಾಮುಂಡಿ ಲೇಔಟ್, ಅರ್ಕಾವತಿ ಲೇಔಟ್ ಮತ್ತು ಎಚ್‌ಬಿಆರ್ ಲೇಔಟ್ ಪೀಡಿತ ಪ್ರದೇಶಗಳಲ್ಲಿ ಬೆಳಗ್ಗೆ 10ರಿಂದ ಸಂಜೆ 4ರವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.

ಜನೆವರಿ 15 ರಂದು ಬೆಂಗಳೂರಿನ ಉತ್ತರ ವಲಯಗಳಾದ : ಗಾಯತ್ರಿನಗರ, ರಾಮಮೋಹನಪುರ, ಮತ್ತಿಕೆರೆ ಮುಖ್ಯರಸ್ತೆ, ಎಸ್‌ಬಿಎಂ ಕಾಲೋನಿ, ನಂಜಪ್ಪ ಲೇಔಟ್, ಕುವೆಂಪು ನಗರ, ಎಂಎಲ್‌ಎ ಲೇಔಟ್, ಕಿರ್ಲೋಸ್ಕರ್ ಲೇಔಟ್, ಶಿವಕೋಟೆ, ಮಾವಳ್ಳಿಪುರ, ಕಾವೇರಿ ನಗರ, ಭುವನೇಶ್ವರಿ ನಗರ, ಹೆಗಡೆ ನಗರ, ಜಕ್ಕೂರು ಮುಖ್ಯರಸ್ತೆ, ಸಂಜಯನಗರ ಮುಖ್ಯರಸ್ತೆ, ಸಂಜಯನಗರ ಮುಖ್ಯರಸ್ತೆ , ಜೆಸಿ ನಗರ ಮತ್ತು ಎಂಇಐ ರಸ್ತೆಯಲ್ಲಿ ಬೆಳಗ್ಗೆ 9.30ರಿಂದ ಸಂಜೆ 6ರವರೆಗೆ ವಿದ್ಯುತ್ ಕಡಿತವಾಗಲಿದೆ. ಪಶ್ಚಿಮ ವಲಯ: ಬೆಳಗ್ಗೆ 10ರಿಂದ ಸಂಜೆ 7ರವರೆಗೆ ಟಿಜಿ ಪಾಳ್ಯ ಮುಖ್ಯರಸ್ತೆ, ಪೊಲೀಸ್ ಕ್ವಾರ್ಟರ್ಸ್, ವಿಘ್ನೇಶ್ವರ ನಗರ, ವಿದ್ಯಾಮಾನ ನಗರ, ಹನುಮಂತ ನಗರ, ಬಸವೇಶ್ವರ ನಗರ, ವೆಸ್ಟ್ ಆಫ್ ಕಾರ್ಡ್ ರಸ್ತೆ ಮತ್ತು ಸುತ್ತಮುತ್ತಲಿನ ಪ್ರದೇಶಗಳು, ಟೀಚರ್ಸ್ ಕಾಲೋನಿ, ಜೆಸಿ ನಗರ ಸುತ್ತಮುತ್ತ, ಹೊಸಹಳ್ಳಿ, ವಿಜಯನಗರ, ಹಾವನೂರು ವೃತ್ತ, ಅತ್ತಿಗುಪ್ಪೆ, ಶಾರದ ಕಾಲೋನಿ, ಮಂಜುನಾಥ್ ನಗರ, ಅಗ್ರಹಾರ ದಾಸರಹಳ್ಳಿ, ಕೆಎಚ್ ಬಿ ಕಾಲೋನಿ ಮತ್ತು ಗಂಗೊಂಡನ ಹಳ್ಳಿಯಲ್ಲಿ ವಿದ್ಯುತ್‌ ಕಡಿತವಾಗಲಿದೆ ಎಂದು ಬೆಂಗಳೂರಿನ ಬೆಸ್ಕಾಂ ಮಾಹಿತಿ ನೀಡಿದೆ.

- Advertisement -

Latest Posts

Don't Miss