ಬೆಂಗಳೂರು : ಆಸ್ತಿಗಾಗಿ ತಂದೆಯನ್ನೇ ಮಗ ಕೊಲೆ ಮಾಡಿರುವ ಪ್ರಕರಣ ಬೆಂಗಳೂರಿನ ಹೊರ ಹೊಲೆಯದ ಬನ್ನೇರುಘಟ್ಟದಲ್ಲಿ (Bannerughatta) ಬೆಳಕಿಗೆ ಬಂದಿದೆ. ಕೊರಟಗೆರೆ (Koratagere) ಮೂಲದ ಚನ್ನಿಗರಾಯಪ್ಪ ಕೊಲೆಯಾದ ವ್ಯಕ್ತಿ. 21 ಗುಂಟೆ ಜಮೀನಿಗಾಗಿ ತಂದೆಯನ್ನೇ ಮಗ ಕೊಲೆ ಮಾಡಿದ್ದಾನೆ. ಇದಕ್ಕೆ ತಾಯಿಯೇ ಸಪೋರ್ಟ್ ಮಾಡಿದ್ದಾಳೆ. ಚನ್ನಿಗರಾಯಪ್ಪ ಎರಡು ಮದುವೆಯಾಗಿದ್ದು (marriage of the two), ಆಸ್ತಿ ಹಂಚಿಕೆ ವೇಳೆ ಇಬ್ಬರು ಮಡದಿಯರ ನಡುವೆ ಮನಸ್ತಾಪ ಉಂಟಾಗಿತ್ತು. ಈ ಕಾರಣಕ್ಕೆ ಪತ್ನಿ ಯಶೋಧ ಮತ್ತು ಮಗ ನಿಖಿಲ್ ಕೊಲೆಯ ಸಂಚು ರೂಪಿಸಿ, ಅಪಹರಣ ಮಾಡಿ ಕೈಕಾಲು ಕಟ್ಟಿ 22 ಬಾರಿ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾರೆ (He was stabbed to death with a knife 22 times). ತದನಂತರ ದೇಹವನ್ನು ಗುರುತುಸಿಗದ ರೀತಿಯಲ್ಲಿ ಸುಟ್ಟು ಪರಾರಿಯಾಗಿದ್ದರು. ಬಳಿಕ ಪ್ರಕರಣ ದಾಖಲಿಸಿಕೊಂಡಿದ್ದ ಬನ್ನೇರುಘಟ್ಟ ಪೊಲೀಸರು (Bannerghatta police) ಆರೋಪಿಗಳಾದ ಪತ್ನಿ ಯಶೋಧ, ಮಗ ನಿಖಿಲ್, ಮಂಜುನಾಥ್, ಹಾಗೂ ವಿಶ್ವಾಸ್ ನನ್ನ ಬಂದಿಸಿ. ಪ್ರಕರಣ ದಾಖಲು ಮಾಡಿಕೊಂಡು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.