Hubli News: ಸಾಮಾಜಿಕ ಜಾಲತಾಣಗಳಲ್ಲಿ ಓಡಾಡಿದ ಲೇಟರ್ ಅನ್ ಸೈನಡ್..ಆ ಪತ್ರವನ್ನು ಮಾಧ್ಯಮದವರೇ ವೈರಲ್ ಮಾಡಿದ್ದಾರೆ. ರಾಜ್ಯಪಾಲರು, ಮಂತ್ರಿಗಳು, ಸಾಹಿತಿಗಳು ನನ್ನ ಜೊತೆಗೆ ಮಾತನಾಡಿ, ರಾಜಿನಾಮೆ ನೀಡೋದು ಬೇಡ ಅಂದಿದ್ದಾರೆ ಹೀಗಾಗಿ, ರಾಜಿನಾಮೆ ತೀರ್ಮಾನದಿಂದ ಹೊರ ಸರಿದಿದ್ದೆನೆ ಅಂತ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಸ್ಪಷ್ಟನೆ ನೀಡಿದ್ದಾರೆ..
ಈ ಬಗ್ಗೆ ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, 27ನೇ ತಾರೀಕು ಕೂತು ಮಾತನಾಡಿ ತೀರ್ಮಾನ ಮಾಡೋಣ ಅಂದಿದ್ದಾರೆ.ಹೀಗಾಗಿ ಅದನ್ನ ಅಲ್ಲಿಗೆ ಕೈ ಬಿಟ್ಟಿದ್ದೇನೆ,ಬೆಂಗಳೂರಲ್ಲಿ ಸಭೆ ಮಾಡೋದಾಗಿ ಅಂದು ಕೊಂಡಿದ್ದೇವೆ, ಎಲ್ಲರೂ ಸಹ ನೀವ ರಾಜೀನಾಮೆ ಕೊಡಬೇಡಿ ಅಂತ ಹೇಳ್ತಾ ಇದ್ದಾರೆ. ನಾನು ಮಾಡಿದ ತೀರ್ಮಾನಕ್ಕೆ ವಿರೋಧ ಬಂತು.
ನಮ್ಮ ಶಾಸನ ಸಭೆ ಸದಸ್ಯರು ನೋಡೋಣಬೇಡ ಅಂದ್ರು, ಪುಟ್ಟಣ್ಣ ಕರೆ ಮಾಡಿ ರಾಜೀನಾಮೆ ವಿಷಯದಲ್ಲಿ ಮುಂದುವರಿಬೇಡಿ ಅಂದ್ರು, ಸಾರ್ವಜನಿಕ ವಲಯದಲ್ಲಿ ನನಗೆ ಇಷ್ಟೊಂದು ಗೌರವ ಕೊಡ್ತಾ ಇರೋದಕ್ಕೆ ನಾನು ಹಿಂದೆ ಸರಿದ್ದೇನೆ.
ಈ ಹಿಂದೆ ಇಂತಹ ಘಟನೆ ಆಗಿಲ್ಲ 19,20,21 ಕ್ಕೆ ಸದನ ಮುಂದುವರೆಸಲಾಗದಂತೆ ಆಯ್ತು. ಬಜೆಟ್ ಮೇಲೆ ಸಿಎಂ ಉತ್ತರ ಕೊಟ್ಟ ನಂತರ ಹನಿಟ್ರ್ಯಾಪ್ ಉತ್ತರ ಕೊಡಸ್ತೇನೆ ಅಂದಿದ್ದೆ, ತಪ್ಪಿಗಸ್ತರ ಮೇಲೆ ಕ್ರಮ ಕೈಗೊಳ್ತೆನೆ ಅಂತ ಸಿಎಂ ಹೇಳಿದ್ರು. ಆದರೂ ಅದೇ ಗದ್ದಲದಲ್ಲಿ ಬಿಲ್ ಕೂಡ ಪಾಸ್ ಆಯ್ತು. ಚರ್ಚೆ ಆಗದೆ ಈ ರೀತಿ ಗದ್ದಲದಲ್ಲಿ ಬಿಲ್ ಪಾಸ್ ಆಗಬಾರದು,ಅದು ಜನರಿಗೆ ಮೋಸ ಮಾಡಿದ್ದಂತೆ, ನಾನು ಅಲ್ಲಿ ಇದ್ರು ಕೂಡ ಈ ರೀತಿ ಮಾಡಿದ್ರು ಮನಸ್ಸಿಗೆ ಬೇಜಾರ್ ಆಯ್ತು. ಹಲವು ನಾಯಕರು ರಾಜೀನಾಮೆ ಕೊಡೋದ್ರಿಂದ್ರ ಎಲ್ಲಾ ಬಗೆ ಹರಿಯೋದಿಲ್ಲ ಅಂದ್ರು, ರಾಜೀನಾಮೆ ನೀಡಬಾರದು ಅಂತ ಈಗಾಗಲೇ ತೀರ್ಮಾನ ಮಾಡಿದ್ದೇನೆ. 27ರ ನಂತರ ಎಲ್ಲಾ 75 ಸದಸ್ಯರಿಗೆ ಪತ್ರ ಕಳಸ್ತೀನಿ, ಯಾರು ನನ್ನ ಮಾತು ಮೀರಲ್ಲ ಅನ್ನೋ ನಂಬಿಕೆ ಇದೆ.
ಈಗಿನ ದಿನಮಾನಗಳಲ್ಲಿ ವನ ಪ್ರತಿಷ್ಠೆನೇ ಜಾಸ್ತಿ ಆಗಿದೆ.ಜನರ ಅಭಿವೃದ್ಧಿ ಬಗ್ಗೆ ಯಾವ ಚರ್ಚೆ ಕೂಡ ಆಗಿಲ್ಲ, ಹನಿಟ್ರ್ಯಾಪ್ ಬಗ್ಗೆ ಮುಖ್ಯಮಂತ್ರಿ ಕ್ರಮ ಕೈಗೊಳ್ತೆವೆ ಅಂದ್ರೆ ಮುಗಿದೋಯ್ತು ಮುಂದಿನ ಅಧಿವೇಶನಕ್ಕೆ ಸದನ , ಉತ್ತಮಗೊಳಿಸುವ ಕೆಲಸ ಮಾಡ್ತೇವೆ. ಈ ಘಟನೆ ಆಗಿದ್ದು ಒಳ್ಳೆದಾಯ್ತು, ಸುಧಾರಣೆಗೆ ಒಂದು ದಾರಿ ಆದಂತಾಗಿದೆ. ನಾನು ಸ್ವಲ್ಪ ಭಾವುಕನಾಗೋದು ಸಹಜವಾಗಿ ಕಣ್ಣಲ್ಲಿ ನೀರು ಬರುತ್ತೆ. ವ್ಯವಸ್ಥೆ ಸರಿ ಪಡಿಸಲು ಏನಾದರೂ ಮಾಡಬೇಕು ಜನರ ನಂಬಿಕೆ ಉಳಿಸಿಕೊಳ್ಳುವ ಕೆಲಸ ಮಾಡ್ತೇನೆಂದರು..