Hubballi Political News: ಹುಬ್ಬಳ್ಳಿ: ಬಸನಗೌಡ ಪಾಟೀಲ್ ಯತ್ನಾಳ್ ಮಾನಸಿಕ ಅಸ್ವಸ್ಥರಂತೆ ವರ್ತಿಸುತ್ತಿದ್ದಾರೆ. ಈ ವಿಷಯ ಕೇಳಿ ನನಗೆ ಬಹಳ ಆಶ್ಚರ್ಯ ಆಗಿದೆ ಎಂದು ಹುಬ್ಬಳ್ಳಿಯಲ್ಲಿ ಮಾಜಿ ಸಚಿವ ಮತ್ತು ಮುಸ್ಲಿಂ ಧರ್ಮಗುರುಗಳ ಸಮಾವೇಶದ ಉಸ್ತುವಾರಿ ಎ.ಎಮ್.ಹಿಂಡಸಗೇರಿ ಕಿಡಿಕಾರಿದ್ದಾರೆ.
ಯತ್ನಾಳ ಅವರ ಹೇಳಿಕೆ ಸಣ್ಣ ವಿಷಯ ಅಲ್ಲ. ಸರ್ಕಾರದ ಎಲ್ಲಾ ಜನ ಪ್ರತಿನಿಧಿಗಳು ಬಂದಿದ್ರು.
ಯತ್ನಾಳ ಅವರ ಮನಸ್ಸು ಸ್ಥಿರವಾಗಿಲ್ಲ. ಅವರ ಪಕ್ಷದ ವಿರುದ್ದವೇ ಯತ್ನಾಳ ಅವರು ಮನಸ್ಸಿಗೆ ಬಂದ ಹಾಗೆ ಮಾತನಾಡುತ್ತಾರೆ. ಐಸಿಸ್ ಉಗ್ರರ ಜೊತೆಗೆ ನಂಟು ಇದ್ದವರು ಕಾರ್ಯಕ್ರಮದಲ್ಲಿ ಭಾಗಿಯಾಗಿಡ್ಡರೆಂಬುದು ಸತ್ಯಕ್ಕೆ ದೂರವಾದದ್ದು. ಯತ್ನಾಳ್ ಹೇಳಿಕೆಯನ್ನು ನಾನು ಖಂಡಿಸುತ್ತೇನೆ. ಅವರಿಗೆ ಒಳ್ಳೆ ಬುದ್ಧಿ ಕೊಡಲಿ ಅಂತ ದೇವರಲ್ಲಿ ಪ್ರಾರ್ಥನೆ ಮಾಡ್ತೇನಿ ಎಂದು ಹೇಳಿದರು.
ರಾಜಕೀಯವಾಗಿ ಮಾತನಾಡಲಿ, ಆದ್ರೆ ಧಾರ್ಮಿಕವಾಗಿ ಮಾತನಾಡೋದು ಸರಿಯಲ್ಲ. ಅಲ್ಲಿ ಅನೇಕ ಗುರುಗಳು ಬಂದು ಎಲ್ಲಾ ಧರ್ಮಗಳಲ್ಲಿ ಶಾಂತಿ ನೆಲೆಸಬೇಕು ಅನ್ನೋ ಉದ್ದೇಶದಿಂದ ಮಾಡಿದ್ವಿ. ನಮ್ಮಲ್ಲಿ ಶೈಕ್ಷಣಿಕವಾಗಿ ಅಲ್ಪಸಂಖ್ಯಾತರೂ ಹಿಂದುಳಿದಿದ್ದಾರೆ. ಯಾರೇ ಆಗಲಿ ಧಾರ್ಮಿಕವಾಗಿ ಮಾತನಾಡಬಾರದು. ಸಾವಿರಾರು ಮಂದಿ ಎಲ್ಲಾ ಧರ್ಮದವರು ಸೇರಿ ಸಮಾವೇಶ ಮಾಡಿದ್ದೇವೆ. ನಾವೆಲ್ಲಾ ಅದಕ್ಕೆ ಪ್ರೋತ್ಸಾಹ ಕೊಡಬೇಕು, ಇಂತಹ ಮಾತನ್ನು ಆಡಬಾರದು. ಉದ್ದೇಶಪೂರ್ವಕರಿಗೆ ಈ ರೀತಿ ಮಾಡಲಾಗುತ್ತಿದೆ. ಐಸಿಸ್ ನಂಟಿದ್ದವರು ಯಾರು ಭಾಗಿಯಾಗಿದ್ದರು ಎಂಬುದನ್ನು ಯತ್ನಾಳ್ ಬಹಿರಂಗಪಡಿಸಲಿ ಎಂದು ಅವರು ಆಗ್ರಹಿಸಿದರು.
ನಾನು ಸಿಎಂ ಸಿದ್ಧರಾಮಯ್ಯನವರ ವಕ್ತಾರನಲ್ಲ: ಹರಿಪ್ರಸಾದ್ ಪರೋಕ್ಷ ಅಸಮಾಧಾನ..!
ಸಿಎಂ ಹೇಳಿದ್ದು, ನೂರಕ್ಕೆ ನೂರು ಸತ್ಯ, ಇಲ್ಲಿರುವ ಮುಸ್ಲಿಂಮರು ಪಾಕಿಸ್ತಾನದವರಾ..?: ಸಚಿವ ತಿಮ್ಮಾಪೂರ
ಎರಡು ದಿನಗಳ ಕಾಲ ಉತ್ತರ ಕರ್ನಾಟಕದ ಬಗ್ಗೆ ಚರ್ಚೆ ನಡೆಯುತ್ತದೆ: ಸಚಿವ ಜಾರಕಿಹೊಳಿ