Saturday, July 27, 2024

Latest Posts

ಹೊಟೇಲ್ಗಳಲ್ಲಿ ಉಚಿತ ಊಟ, ತಿಂಡಿ ಕೊಡುವುದಕ್ಕೆ ಬಿಬಿಎಂಪಿ ಬ್ರೇಕ್..

- Advertisement -

ಬೆಂಗಳೂರು: ಮತದಾನ ಮಾಡಿ ಬಂದರೆ, ಹೊಟೇಲ್‌ಗಳಲ್ಲಿ ಉಚಿತ ಊಟ, ತಿಂಡಿ ಕೊಡುವುದಾಗಿ, ಕೆಲ ಹೊಟೇಲ್‌ಗಳು ಘೋಷಿಸಿದ್ದವು. ಆದರೆ ಈಗ ಬಿಬಿಎಂಪಿ ಅದಕ್ಕೆಲ್ಲ ಬ್ರೇಕ್ ಹಾಕಿದ್ದು, ಯಾವುದೇ ಹೊಟೇಲ್‌ಗಳಲ್ಲಿ ಫ್ರೀ ಊಟ, ತಿಂಡಿ ಕೊಡುವಂತಿಲ್ಲವೆಂದು ಹೇಳಿದೆ.

ಬೆಂಗಳೂರಿನಲ್ಲಿ ಮತದಾನದ ಪ್ರಮಾಣ ತೀರಾ ಕಳಪೆಯಾಗಿದ್ದು, ಈ ಬಾರಿ ಹೆಚ್ಚು ಜನ ಮತದಾನ ಮಾಡುವಂತಾಗಬೇಕು, ಎಂದು ಕೇಂದ್ರ ಚುನಾವಣಾ ಆಯೋಗ ಆದೇಶ ಹೊರಡಿಸಿತ್ತು. ಈ ಕಾರಣಕ್ಕೆ ತಾವೂ ಇದಕ್ಕೆ ಸಾಥ್ ನೀಡಬೇಕೆಂದು, ಮತದಾನ ಜಾಗೃತಿ ಮಾಡಬೇಕೆಂಬ ಕಾರಣಕ್ಕೆ, ಕೆಲ ಹೊಟೇಲ್ ಮಾಲೀಕರು, ಮತದಾನ ಮಾಡಿ ಬಂದವರಿಗೆ ಉಚಿತ ಊಟ, ತಿಂಡಿ ನೀಡಬೇಕೆಂದು ನಿರ್ಧರಿಸಿದ್ದರು.

ಆದರೆ ಇದೀಗ, ಯಾವ ಹೊಟೇಲ್‌ನವರೂ ಉಚಿತವಾಗಿ ಊಟ, ತಿಂಡಿ ನೀಡಬಾರದು ಎಂದು ಬಿಬಿಎಂಪಿ ಆದೇಶ ಹೊರಡಿಸಿದೆ. ಯಾರಾದರೂ ಮಾತು ಮೀರಿ ಉಚಿತ ಊಟ ತಿಂಡಿ, ಅಥವಾ ಮತದಾನ ಮಾಡಿದವರಿಗೆ ಡಿಸ್ಕೌಂಟ್‌ನಲ್ಲಿ ಆಹಾರ ವಿತರಿಸಿದರೆ, ಅಂಥವರ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಹೇಳಲಾಗಿದೆ. ಇಷ್ಟೇ ಅಲ್ಲದೇ, ಪ್ರವಾಸಿ ತಾಣಗಳನ್ನ ಸಹ ಬೆಳಿಗ್ಗೆ 5 ಗಂಟೆಯಿಂದ ರಾತ್ರಿ 8 ಗಂಟೆಯವರೆಗೂ ತೆರೆಯಬಾರದೆಂದು ಆದೇಶ ಹೊರಡಿಸಲಾಗಿದೆ. ಮತದಾನಕ್ಕಾಗಿ ಕೊಡುವ ರಜೆಯನ್ನು ಟ್ರಿಪ್ ಹೋಗಲೆಂದು ಕೆಲವರು ಬಳಸಿಕೊಳ್ಳುತ್ತಾರೆ. ಹೀಗಾಗಿ ಈ ರೀತಿ ಪ್ರವಾಸಿ ತಾಣಕ್ಕೆ ಎಂಟ್ರಿಯನ್ನ ನಿರ್ಬಂಧಿಸಲಾಗಿದೆ.

‘ಮಲ್ಲಿಕಾರ್ಜುನ ಖರ್ಗೆಗೆ ನನ್ನ ಹೆಸರಲ್ಲಿ ನಕಲಿ ಪತ್ರ: ಇದು RSSನಂಥ ಕುತಂತ್ರಿಗಳ ಕೆಲಸ’

‘ನಿಜವಾದ ಕಾರ್ಯಕರ್ತ ನಾನು, ಸ್ವರೂಪ್ ಅಲ್ಲ, ಚುನಾವಣೆಯಲ್ಲಿ ಜನರ ತೀರ್ಪಿಗೆ ಬದ್ಧ’

‘ಈ ಮಟ್ಟಕ್ಕೆ ಸಾಧನೆ ಮಾಡಿ ಇತಿಹಾಸ ಸೃಷ್ಟಿಸಿದ ಪಕ್ಷ ಬಿಜೆಪಿ’

- Advertisement -

Latest Posts

Don't Miss