ಮಕ್ಕಳನ್ನು ಬಾಡಿಗೆ ಪಡೆದು ಬಿಕ್ಷಾಟನೆ..!   

ಬಳ್ಳಾರಿ: ಮಕ್ಕಳನ್ನು ಬಾಡಿಗೆ ಪಡೆದು ಭಿಕ್ಷಾಟನೆ ಮಾಡುತ್ತಿರುವಂತಹ ಕ್ರೌರ್ಯ ಬಳ್ಳಾರಿ ಜಿಲ್ಲೆಯ ಸಿರಿಗೇರಿ ಕ್ರಾಸ್ ಬಳಿ  ಬೆಳಕಿಗೆ ಬಂದಿದೆ. ಕರ್ನಾಟಕ ಪ್ರೋಹಿಬಿಷನ್ ಆಫ್ ಬೆಗ್ಗರಿ ಆಕ್ಟ್ 1975 ರಲ್ಲಿ ಜಾರಿಗೆ ತಂದಿದ್ದರು  ಭಿಕ್ಷಾಟನೆ ನಿಲ್ಲದಿರುವುದು ಅವಮಾನಕಾರಿಯಾದ ವಿಷಯ.ಮಕ್ಕಳನ್ನ ಪೋಷಕರಿಂದ 50 ರಿಂದ 100 ರೂಪಾಯಿ ಕೊಟ್ಟು  ಬಾಡಿಗೆ ಪಡೆದು ಅವರಿಗೆ ಮತ್ತು ಬರಿಸಿ ಭಿಕ್ಷೆ ಎತ್ತುವ ಕೃತ್ಯ ಬೆಳಕಿಗೆ ಬಂದಿರುವುದು ಅತ್ಯಂತ ಆತಂಕಕಾರಿ ಬೆಳವಣಿಗೆಯಾಗಿದೆ. ಬಾಡಿಗೆಗಾಗಿ ಪೋಷಕರು ಮಕ್ಕಳನ್ನು ಭಿಕ್ಷಾಟನೆಗೆ ನೀಡುತ್ತಿರುವುದು ಅವಮಾನಕಾರಿಯಾದ ವಿಷಯ. ಮಾಧ್ಯಮಗಳಲ್ಲಿ ಈ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಭೇಟಿ ನೀಡಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಡಿ ಡಿ ನಾಗರಾಜ್ ಸ್ಥಳೀಯರನ್ನು ಮಾತನಾಡಿಸಿ ಮಾಹಿತಿಯನ್ನು ಪಡೆದರು. ಹಾಗೂ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ  ಇದೊಂದು ಆತಂಕಕಾರಿ ಬೆಳವಣಿಗೆ ಇದಕ್ಕೆ ಸಂಬಂಧಪಟ್ಟಂತೆ ಅಧಿಕಾರಿಗಳ ಜೊತೆ ಮಾತನಾಡಿದ್ದೇನೆ, ಈ ರೀತಿ ಮಾಡುತ್ತಿರುವವರ ಮೇಲೆ ಕ್ರಮಕೈಗೊಳ್ಳುವಂತೆ ಸೂಚಿಸಿದ್ದೇನೆ ಎಂದು ತಿಳಿಸಿದ್ದಾರೆ.

About The Author