Hubli News: ಹುಬ್ಬಳ್ಳಿ: ಬೆಳಗಾವಿ ಕ್ಷೇತ್ರದ ಲೋಕಸಭೆ ಚುನಾವಣೆಗೆ ಜಗದೀಶ್ ಶೆಟ್ಟರ್ ಅವರಿಗೆ ಟಿಕೇಟ್ ಘೋಷಣೆ ಮಾಡಿದ ಹಿನ್ನೆಲೆ, ಮಾಜಿ ಸಿಎಂ ಶೆಟ್ಟರ್ ಸಂತಸ ಹೊರಹಾಕಿದ್ದಾರೆ.
ಈ ಹಿನ್ನೆಲೆ ಶೆಟ್ಟರ್ ಅಭಿಮಾನಿಗಳು, ಸಿಹಿ ತಿನ್ನಿಸಿ ಸಂಭ್ರಮಿಸಿದ್ದಾರೆ. ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಶೆಟ್ಟರ್, ಬೆಳಗಾವಿ ಕ್ಷೇತ್ರದಿಂದ ಸ್ಪರ್ದೀಸಲು ಟಿಕೆಟ್ ಸಿಗುವ ವಿಶ್ವಾಸವಿತ್ತು. ಟಿಕೆಟ್ ನೀಡುವ ಮೂಲಕ ಹೆಚ್ಚಿನ ಸೇವೆ ಮಾಡಲು ಅವಕಾಶ ನೀಡಿದ್ದಾರೆ. ಜೆಪಿ ನಡ್ಡಾ, ಅಮಿತ್ ಶಾ, ಪ್ರಧಾನಿ ಮೋದಿ ಮತ್ತು ಯಡಿಯೂರಪ್ಪ, ವಿಜಯೆಂದ್ರ ಅವರಿಗೆ ಧನ್ಯವಾದಗಳನ್ನು ತಿಳಿಸುವೆ. ವಿಶೇಷವಾಗಿ ಸ್ಥಳೀಯ ನಾಯಕರಿಗೆ ಧನ್ಯವಾದಗಳು ಅವರು ನಂಬಿಕೆ ಉಳಿಸಿಕೊಳ್ಳಲು ಪ್ರಯತ್ನ ಮಾಡುವೆ. ಸುರೇಶ್ ಅಂಗಡಿ ಅವರು ರೈಲ್ವೆ ಸಚಿವರಾಗಿ ಸಾಕಷ್ಟು ಅಭಿವೃದ್ಧಿ ಮಾಡಿದ್ದಾರೆ. ಅದನ್ನು ಮುಂದುವರಿಸಿಕೊಂಡು ಹೋಗುವೆ. ಟಿಕೆಟ್ ಸಿಗಲು ಕಾರಣವಾದ ಬೆಳಗಾವಿ ಎಲ್ಲಾ ಸ್ಥಳೀಯ ನಾಯಕರಿಗೆ ಧನ್ಯವಾದ ಎಂದು ಶೆಟ್ಟರ್ ಹೇಳಿದ್ದಾರೆ.
ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಎಲ್ಲರನ್ನೂ ಕೂಡಿಸಿಕೊಂಡು ಬೆಳಗಾವಿ ಅಭಿವೃದ್ಧಿ ಮಾಡಬೇಕಿದೆ. ನನಗೆ ಇನ್ನೂ ಹುಮ್ಮಸ್ಸು ಬಂದಿದೆ. ಎಲ್ಲರ ಜೊತೆಗೂಡಿ ಚುನಾವಣಾ ಎದುರಿಸುವೆ. ನಾನು ಬೆಳಗಾವಿ ಸ್ಥಳೀಯ ಮಟ್ಟದಲ್ಲಿ ಪಕ್ಷ ಸಂಘಟನೆ ಮಾಡಿದ್ದೇನೆ. ಹಣದ ಮೇಲೆ ಚುನಾವಣಾ ನಡೆಯುವುದಿಲ್ಲ. ಇದು ರಾಷ್ಟ್ರೀಯ ಚುನಾವಣೆ. ಮೋದಿಯವರು ಮತ್ತೊಮ್ಮೆ ಪ್ರಧಾನಿ ಮಾಡುವ ನಿಟ್ಟಿನಲ್ಲಿ ಚುನಾವಣೆ ನಡೆಯುತ್ತಿದೆ. ಬೆಳಗಾವಿಯಲ್ಲಿ ಯಾವುದೇ ವಿರುದ್ಧ ವಾತಾವರಣ ಇದ್ದರೂ ಅದನ್ನು ಶಮನ ಮಾಡುವೆ. ಲೋಕಸಭಾ ಚುನಾವಣೆ ಹೊಸದಿರಬಹುದು. ಆದರೆ ಅಪಾರ ರಾಜಕೀಯ ಅನುಭವ ಇದೆ. ಯಾವುದೇ ಪದವಿಗೆ, ಸಚಿವ ಸ್ಥಾನಕ್ಕೆ ಆಸೆಪಡುವುದಿಲ್ಲ ತಾನಾಗಿಯೇ ಒಲಿದು ಬರಬೇಕು ಎಂದು ಜಗದೀಶ್ ಶೆಟ್ಟರ್ ಹೇಳಿದ್ದಾರೆ.
ಮೋದಿಯವರು ಪ್ರಧಾನಮಂತ್ರಿ ಆಗಲಿ ಎಂದು ಲಕ್ಷ್ಮೀನರಸಿಂಹ ಸ್ವಾಮಿಯಲ್ಲಿ ಕೇಳಿದ್ದೇನೆ: ಹೆಚ್.ಡಿ.ರೇವಣ್ಣ
ಹತ್ತು ವರ್ಷ ಮೋದಿ ಹೇಳಿದ ಸುಳ್ಳುಗಳಿವೆ. ಅದನ್ನು ಜನರಿಗೆ ತಿಳಿಸುತ್ತೇವೆ: ಸಚಿವ ಸಂತೋಷ್ ಲಾಡ್
ಇನ್ಮುಂದೆ ಈ ನಿರ್ದೇಶಕರನ್ನು ಭೇಟಿಯಾಗಬೇಕು ಅಂದ್ರೆ ಲಕ್ಷ ಲಕ್ಷ ಕೊಡಬೇಕಂತೆ..