Hassan News: ಹಾಸನ :ಬೇಲೂರು: ಚೆಸ್ಕಾಂ ಕಚೇರಿ ಆವರಣದಲ್ಲಿ ನಡೆದ ಜನ ಸಂಪರ್ಕ ಸಭೆಯಲ್ಲಿ ಶಾಸಕರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
“ಚೆಸ್ಕಾಂ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದ ಬೇಲೂರು ಶಾಸಕ”
ರೈತರೊಂದಿಗೆ ಉಡಾಫೆ ವರ್ತನೆ, ಗ್ರಾಹಕರಿಗೆ ಕಿರುಕುಳ ನೀಡುತ್ತಿರುವ ಅಧಿಕಾರಿಗಳನ್ನು ತಕ್ಷಣವೇ ಅಮಾನತು ಮಾಡಬೇಕು ಇಲ್ಲವಾದರೆ ಚೆಸ್ಕಾಂ ಕಚೇರಿ ಮುಂದೆ ಧರಣಿ ನಡೆಸಲಾಗುತ್ತದೆ ಎಂದು ಬೇಲೂರು ಶಾಸಕ ಸುರೇಶ್ ಚೆಸ್ಕಾಂ ಅಧಿಕಾರಿಗಳಿಗೆ ಮೈ ಚಳಿ ಬಿಡಿಸಿದ ಘಟನೆ ನಡೆದಿದೆ.
ಚೆಸ್ಕಾಂ ಇಲಾಖೆಯಿಂದ ಪ್ರತಿ ಮಾಸಿಕ ನಡೆಯುವ ಜನ ಸಂಪರ್ಕ ಸಭೆಗೆ ಚುನಾಯಿತ ಜನಪ್ರತಿನಿಧಿಗಳಿಗೆ ಮತ್ತು ರೈತರಿಗೆ ಮತ್ತು ಗ್ರಾಹಕರಿಗೆ ವಿಷಯ ತಿಳಿಸಿದರೆ ನೆಪ ಮಾತ್ರಕ್ಕೆ ಜನ ಸಂಪರ್ಕ ಸಭೆ ನಡೆಸುತ್ತಿದ್ದಾರೆ ಎಂದು ದಿಢೀರ್ ಶಾಸಕ ಸ್ಥಳಕ್ಕೆ ಆಗಮಿಸಿದ ಸಂದರ್ಭದಲ್ಲಿ ಚೆಸ್ಕಾಂ ಅಧಿಕಾರಿಗಳು ಶಾಸಕರನ್ನು ವೇದಿಕೆ ಮೇಲೆ ಬರುವಂತೆ ಆಹ್ವಾನ ನೀಡಿದ ಸಂದರ್ಭದಲ್ಲಿ ಶಾಸಕ ಸುರೇಶ್ ಸಾರ್ವಜನಿಕರ ಸಾಲಿನಲ್ಲಿ ಕುಳಿತು ಅಧಿಕಾರಿಗಳ ವಿರುದ್ಧ ತಿರುಗಿ ಬಿದ್ದರು.
ಬೇಲೂರಿನ ಜಿಇ ಕುಮಾರ್ ರೈತರಿಂದ ಹಣ ಪಡೆಯುತ್ತಿದ್ದಾರೆ ಅದನ್ನು ಇಲ್ಲಿನ ಉನ್ನತ ಅಧಿಕಾರಿಗಳಾದ ಚಂದ್ರಮ್ಮ ಮತ್ತು ಸುನೀಲ್ ಕುಮಾರ್ ಹಾಗೂ ಮಂಜುನಾಥ ರಕ್ಷಣೆ ಮಾಡುತ್ತಿದ್ದಾರೆ ಎಂದು ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಇದೇ ಸಂದರ್ಭದಲ್ಲಿ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಳ್ಳುರು ಸ್ವಾಮೀಗೌಡ ಮತ್ತು ರೈತರಾದ ಚೀಕನಹಳ್ಳಿ ರಮೇಶ ಮತ್ತು ಜಬ್ಬಾರ್ ಶಾಸಕರಿಗೆ ಸಹಮತ ನೀಡಿದಲ್ಲದೆ ಬೇಲೂರು ಚೆಸ್ಕಾಂ ಇಲಾಖೆಯಲ್ಲಿ ಇತ್ತೀಚಿನ ದಿನದಿಂದ ಮದ್ಯವರ್ತಿಗಳ ಹಾವಳಿ ಹೆಚ್ಚಾಗಿ ಭ್ರಷ್ಟಾಚಾರದ ಕೂಪವಾಗಿದೆ ಕೂಡಲೇ ಚಂದ್ರಮ್ಮ ಮತ್ತು ಕುಮಾರ್ ಇವರನ್ನು ತಕ್ಷಣವೇ ಬೇರೆ ಕಡೆ ವರ್ಗಾಹಿಸಬೇಕು ಎಂದು ಪಟ್ಟು ಹಿಡಿದರು.
ಚೆಸ್ಕಾಂ ಇಲಾಖೆಯಲ್ಲಿನ ಭ್ರಷ್ಟಾಚಾರದಿಂದ ಉಳ್ಳವರಿಗೆ ಮಾತ್ರ ಸೀಮಿತವಾಗಿದೆ.ರೈತರಿಗೆ ವಿದ್ಯುತ್ ಇಲಾಖೆಯಿಂದ ದ್ರೋಹ ಮಾಡುತ್ತಿದ್ದಾರೆ. ಒಂದು ವಾರದಲ್ಲಿ ಪರಿಹಾರ ನೀಡಬೇಕು ಇಲ್ಲವಾದರೆ ವಾರದ ಗಡುವು ಮುಕ್ತಾಯವಾದ ಬಳಿಕ ಧರಣಿ ನಡೆಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ನಾಗರಾಜ್, ಕರ್ನಾಟಕ ಟಿವಿ ಹಾಸನ
ಬಿಜೆಪಿ ರಾಜ್ಯಾಧ್ಯಕ್ಷ ರೇಸ್ ನಲ್ಲಿ ವಿಜಯೇಂದ್ರ ಇರುವ ವಿಚಾರದ ಬಗ್ಗೆ ವಿಜಯೇಂದ್ರ ಹೇಳಿದ್ದಿಷ್ಟು..
ಎಂಪಿ ಚುನಾವಣೆಯಲ್ಲಿ ಜೆಡಿಎಸ್ ಜೊತೆ ಮೈತ್ರಿ ವಿಚಾರದ ಬಗ್ಗೆ ವಿಜಯೇಂದ್ರ ಏನಂದ್ರು..?
‘ಮುಂದಿನ ಚುನಾವಣೆಯಲ್ಲಿ ಸ್ಪಷ್ಟ ಬಹುಮತ ಬರೋದಕ್ಕೆ ಈಗಿನಿಂದಲೇ ಕಾರ್ಯಪ್ರವೃತ್ತರಾಗ್ತೇವೆ’