ಆ್ಯಲೋವೆರಾ… ತ್ವಚೆಯ ಸೌಂದರ್ಯ, ಕೂದಲಿನ ಸೌಂದರ್ಯ, ದೇಹದ ತಂಪು ಕಾಪಾಡುವಲ್ಲಿ ಸಹಕಾರಿಯಾದ ವಸ್ತು. ಆದ್ರೆ ಇದು ಬೊಜ್ಜು ಕೂಡಾ ಕರಗಿಸುತ್ತೆ ಅನ್ನೋದನ್ನ ನಂಬ್ತೀರಾ..? ಹೌದು ಆ್ಯಲೋವೇರಾ ಜ್ಯೂಸ್ ಕುಡಿಯುವ ಮೂಲಕ ನೀವು ನಿಮ್ಮ ದೇಹದ ಬೊಜ್ಜನ್ನ ಕರಗಿಸಬಹುದು.

ಆಯುರ್ವೇದದ ಪ್ರಕಾರ, ಆ್ಯಲೋವೆರಾ ಜ್ಯೂಸ್ ದೇಹದ ತೂಕ ಇಳಿಸುವುದಷ್ಟೇ ಅಲ್ಲದೇ, ತ್ವಚೆಯ ಸಮಸ್ಯೆ, ಕೂದಲು ಉದುರುವಿಕೆಯ ಸಮಸ್ಯೆ, ಅಲರ್ಜಿ, ಮುಟ್ಟಿನ ಸಮಸ್ಯೆ, ಮುಂತಾದ ಸಮಸ್ಯೆಗೆ ರಾಮಬಾಣವಾಗಿದೆ. ಹಾಗಾದ್ರೆ ಆ್ಯಲೋವೇರಾ ಜ್ಯೂಸ್ ತಯಾರಿಸೋಕ್ಕೆ ಏನೇನು ಬೇಕು..? ಹೇಗೇ ತಯಾರಿಸೋದು ಅನ್ನೋದನ್ನ ನೋಡೋಣ ಬನ್ನಿ..
ದೊಡ್ಡದಾದ ಆ್ಯಲೋವೆರಾ ತುಂಡನ್ನ ತೆಗೆದುಕೊಂಡು, ಅದು ಕಹಿ ಇದೆಯಾ ಇಲ್ಲವಾ ಎಂದು ನೋಡಿಕೊಳ್ಳಿ. ಕಹಿ ಇಲ್ಲದಿದ್ದರೆ ಜ್ಯೂಸ್ ಮಾಡಲು ಅದನ್ನು ಬಳಸಿ. ಮುಖ್ಯವಾಗಿ ಆ್ಯಲೋವೇರಾ ಸಿಪ್ಪೆ ತೆಗೆಯುವಾಗ ಎಚ್ಚರಿಕೆಯಿಂದ ತೆಗೆಯಬೇಕು. ಜ್ಯೂಸ್ ಮಾಡಿದಾಗ ಸಿಪ್ಪೆ ಬಳಸಿದಲ್ಲಿ ದಪಷ್ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ.
ಸಿಪ್ಪೆ ತೆಗೆದ ಬಳಿಕ ಜೆಲ್ ರೀತಿಯಲ್ಲಿ ಕಾಣಿಸಿಕೊಳ್ಳುವ ಪಾರ್ಟನ್ನ ಚೆನ್ನಾಗಿ ತೊಳೆದುಕೊಳ್ಳಿ. ಈ ಆ್ಯಲೋವೆರಾ ತುಂಡುಗಳನ್ನ ನೀರಿನ ಜೊತೆ ಮಿಕ್ಸಿಯಲ್ಲಿ ಹಾಕಿ ರುಬ್ಬಿ, ಸೋಸಿಡಿ.
ಈಗ ಪಾತ್ರೆಯಲ್ಲಿ ನೀರು ಕಾಯಲು ಇಡಿ, ನೀರು ಸ್ವಲ್ಪ ಕುದಿಯಲು ಶುರುವಾದಾಗ, ಸೋಸಿಟ್ಟ ಆ್ಯಲೋವೆರಾ ಪೇಸ್ಟ್ ಹಾಕಿ ಮಿಕ್ಸ್ ಮಾಡಿ. ಆದರೆ ನೀರನ್ನ ಕುದಿಸುವಾಗ ಮಂದ ಉರಿಯಲ್ಲಿ ಕುದಿಸಬೇಕು. 5-10ನಿಮಿಷದವರೆಗೆ ಈ ಆ್ಯಲೋವೆರಾ ನೀರನ್ನ ಕಾಯಿಸಿ. ಈ ನೀರು ಕುದಿಯುವಾಗ ಬರುವ ನೊರೆಯನ್ನು ತೆಗೆಯಬೇಕು. ಅಲ್ಲದೇ ಇದರಲ್ಲಿರುವ ಲೋಳೆ ಅಂಶ ಹೋಗುವವರೆಗೂ ಕಾಯಿಸಬೇಕು. ಈಗ ಆ್ಯಲೋವೆರಾ ಜ್ಯೂಸ್ ರೆಡಿ.
ಕುದಿಸಿದ ಆ್ಯಲೋವೆರಾ ಜ್ಯೂಸ್ ಕುಡಿಯದಿರಲು ಸೂಚನೆ ಇದ್ದರೆ. ಈ ಬಗ್ಗೆ ವೈದ್ಯರಲ್ಲಿ ವಿಚಾರಿಸಿ, ಆ್ಯಲೋವೆರಾ ಜ್ಯೂಸ್ ಸೇವಿಸಬಹುದು. ಇನ್ನು ಮುಖ್ಯವಾದ ಸೂಚನೆ ಎಂದರೆ, ಆ್ಯಲೋವೆರಾ ಜ್ಯೂಸ್ ಮಾಡುವಾಗ ಅದರ ಜೊತೆ, ಶುಂಠಿ, ನೆಲ್ಲಿಕಾಯಿ ಇತ್ಯಾದಿಗಳನ್ನ ಬಳಸುವಂತಿಲ್ಲ.
ಶ್ರಾವಣಿ ಸೋಮಯಾಜಿ, ಕರ್ನಾಟಕ ಟಿವಿ

ಶ್ರೀ ಸಾಯಿ ಕೃಷ್ಣ ಜ್ಯೋತಿಷ್ಯಾಲಯ, ಪಂಡಿತ್ ಡಿ.ಎಸ್ ಜೋಷಿ – 9731355538
ನಿಮ್ಮ ಸಮಸ್ಯೆಗಳಾದ ಉದ್ಯೋಗ, ಸತಿ-ಪತಿ ಕಲಹ, ಮದುವೆ, ಪ್ರೇಮ ವಿಚಾರ, ವಶೀಕರಣ ಯಾವುದೇ ಕಠಿಣ-ಕ್ಲಿಷ್ಟ ಸಂಕಷ್ಟಗಳಿಗೆ ಸಂಪರ್ಕಿಸಿ.
ವಿಳಾಸ : ಸಾಯಿಬಾಬಾ ದೇವಸ್ಥಾನ ಎದುರು, 15ನೇ ಕ್ರಾಸ್, ಬಸ್ ನಿಲ್ದಾಣದ ಪಕ್ಕ, ಸಂಪಿಗೆ ರೋಡ್, ಮಲ್ಲೇಶ್ವರಂ, ಬೆಂಗಳೂರು
ನಿಮ್ಮ ಸಮಸ್ಯೆಗಳಿಗೆ ಕಾಶಿ ತಾಂತ್ರಿಕ ಅಘೋರಿ, ನಾಗಸಾಧುಗಳ ವಿಶೇಷ ಪ್ರಯೋಗಗಳಾದ ಮಹಾರುದ್ರ ಪೂಜೆ, ಮಂಡಲ ಪೂಜೆ, ಅಷ್ಟ ದಿಗ್ಬಂಧನೆಯ ಪೂಜೆಯಿಂದ 11 ದಿನಗಳಲ್ಲಿ ಪರಿಹಾರ ಶತಸಿದ್ಧ.
ಹೆಸರಾಂತ ವಂಶಪಾರಂಪರ್ಯ ಜ್ಯೋತಿಷ್ಯರು ಪಂಡಿತ್ ಡಿ.ಎಸ್ ಜೋಷಿ ತಮ್ಮ 25 ವರ್ಷಗಳ ಅನುಭವದಲ್ಲಿ 20,000 ಕ್ಕೂ ಹೆಚ್ಚು ಸಮಸ್ಯೆಗಳನ್ನ ಇತ್ಯರ್ಥ ಮಾಡಿ ಸಾವಿರಾರು ಕುಟುಂಬಗಳ ನೆಮ್ಮದಿಯ ಬದುಕಿಗೆ ನೆರವಾಗಿದ್ದಾರೆ.

