ರುಚಿಯಾದ, ಸಿಹಿ ಸಿಹಿಯಾದ ಹಣ್ಣುಗಳಲ್ಲಿ ಅನಾನಸ್ ಹಣ್ಣು ಕೂಡಾ ಒಂದು. ಜಾಮ್ ಮಾಡುವಾಗ, ಶೀರಾ, ಕೇಸರಿ ಭಾತ್ ಮಾಡುವಾಗ, ಪಾಯಸ್, ಕೇಕ್ ಮಾಡುವಾಗೆಲ್ಲ ಅನಾನಸ್ ಹಣ್ಣನ್ನ ಬಳಕೆ ಮಾಡ್ತಾರೆ. ಇಂಥ ರುಚಿಕರವಾದ ಅನಾನಸ್ ಹಣ್ಣು ಆರೋಗ್ಯಕ್ಕೂ ಒಳ್ಳೆಯದು. ಆದ್ರೆ ಇದನ್ನ ಕೆಲವರು ತಿನ್ನಬಾರ್ದು. ಹಾಗಾದ್ರೆ ಈ ಹಣ್ಣನ್ನ ತಿಂದ್ರೆ ಏನು ಲಾಭ..? ಯಾರು ಈ ಹಣ್ಣನ್ನ ತಿನ್ನಬಾರದು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
ಅನಾನಸ್ ಹಣ್ಣು ಹಸಿವನ್ನು ಹೆಚ್ಚಿಸುತ್ತದೆ. ಕೆಲವರಿಗೆ ಏನೇನೋ ತಿನ್ನಬೇಕು ಅಂತಾ ಆಸೆಯಾಗತ್ತೆ. ಆದ್ರೆ ಹಸಿವೇ ಆಗಲ್ಲ. ಇಷ್ಟದ ಪದಾರ್ಥಗಳನ್ನು ಕಂಡರೂ ಒಮ್ಮೊಮ್ಮೆ ವಾಕರಿಕೆ ಬರತ್ತೆ. ಅಂಥವರು ಎರಡು ಹೋಳು ಅನಾನಸ್ ಹಣ್ಣು ಸೇವಿಸಿ. ಇದರಿಂದ ಹಸಿವು ಹೆಚ್ಚಾಗಿ, ಹೆಚ್ಚು ಆಹಾರ ಸೇವಿಸುವಂತಾಗತ್ತೆ. ಆದ್ರೆ ಆ ಆಹಾರ ಆರೋಗ್ಯಕರವಾಗಿರಲಿ. ಅನ್‌ಹೆಲ್ದಿ ಪದಾರ್ಥ ಹೆಚ್ಚು ಸೇವಿಸಬೇಡಿ. ಇದರಿಂದ ಬೊಜ್ಜು ಬೆಳೆಯುವ ಸಾಧ್ಯತೆ ಹೆಚ್ಚು.
ನಿಶ್ಯಕ್ತಿಯಿಂದ ಕೂಡಿರುವ ವ್ಯಕ್ತಿ ವಾರಕ್ಕೆ ಒಮ್ಮೆಯಾದರೂ ಅನಾನಸ್ ಸೇವನೆ ಮಾಡಬೇಕು. ವಾರಕ್ಕೊಮ್ಮೆ ಅನಾನಸ್ ಸೇವನೆ ಮಾಡಿದ್ರೆ, ದೇಹದಲ್ಲಿ ಶಕ್ತಿ ತುಂಬುತ್ತದೆ. ಮತ್ತು ನಿಮ್ಮ ಆರೋಗ್ಯವೂ ಉತ್ತಮವಾಗಿರುತ್ತದೆ. ದೇಹದಲ್ಲಿ ಹಿಮೋಗ್ಲೋಬಿನ್ ಅಂಶ ಕಡಿಮೆ ಇದ್ದರೆ ಅಂಥವರು ಕೂಡ ಅನಾನಸ್ ಸೇವಿಸಬಹುದು. ಹಿಮೋಗ್ಲೋಬಿನ್ ಹೆಚ್ಚಿಸುವ ಹಣ್ಣುಗಳಲ್ಲಿ ಅನಾನಸ್ ಕೂಡ ಒಂದು.
ಇನ್ನು ಯಾರು ಅನಾನಸ್ ತಿನ್ನಬಾರದು ಅಂದ್ರೆ. ಗರ್ಭಿಣಿಯರು ಅನಾನಸ್ ತಿನ್ನಬಾರದು. ಉಷ್ಣತೆ ಹೆಚ್ಚಿದ್ರೆ ಆರೋಗ್ಯದಲ್ಲಿ ಏರುಪೇರಾಗತ್ತೆ ಅನ್ನೋದಾದ್ರೆ ಅಂಥವರೂ ಅನಾನಸ್ ತಿನ್ನಬಾರದು. ಕೆಲವರಿಗೆ ಅನಾನಸ್ ತಿಂದರೆ, ಉರಿ ಮೂತ್ರ ಶುರು ವಾಗುತ್ತದೆ. ಇನ್ನು ನಿಮಗೂ ಅನಾನಸ್ ತಿಂದ್ರೆ ಅಲರ್ಜಿ ಎಂದಾದಲ್ಲಿ ಈ ಬಗ್ಗೆ ವೈದ್ಯರ ಬಳಿ ವಿಚಾರಿಸಿ, ನಂತರ ಅನಾನಸ್ ಸೇವಿಸುವುದು ಉತ್ತಮ.