ಕ್ಯಾರೆಟ್.. ಭೂಮಿಯ ಒಳಗೆ ಬೆಳೆಯುವ ಗೆಡ್ಡೆಗಳ ಗುಂಪಿಗೆ ಸೇರುವ ತರಕಾರಿ. ಅಟ್ರ್ಯಾಕ್ಟಿವ್ ಕಲರ್ ಹೊಂದಿರುವ ಈ ತರಕಾರಿ, ಮೊಲದ ಫೇವರಿಟ್ ಆಹಾರ. ಈ ಆಹಾರಾನ ನೀವೂ ಪ್ರತಿದಿನ ನಿಯಮಿತವಾಗಿ ತಿಂದ್ರೆ, ನೀವೂ ಕೂಡ ಮೊಲದ ಥರ ಸಾಪ್ಟ್, ಕ್ಯೂಟ್, ವೈಟ್ ಆಗಿ ಕಾಣಬಹುದು. ಹಾಗಾದ್ರೆ ಬನ್ನಿ ಕ್ಯಾರೆಟ್ ತಿನ್ನುವುದರಿಂದ ಆಗುವ ಲಾಭಗಳೇನು ಅನ್ನೋದನ್ನ ನೋಡೋಣ ಬನ್ನಿ..
1.. ಕಣ್ಣಿನ ತೊಂದರೆ ಇದ್ದಲ್ಲಿ ಕ್ಯಾರೆಟ್ ಬಳಸಿ. ಅಲ್ಲದೇ ನಿಯಮಿತವಾಗಿ ನೀವು ಕ್ಯಾರೆಟ್ ತಿನ್ನುವುದರಿಂದ ಕಣ್ಣಿನ ಸಮಸ್ಯೆಯನ್ನ ದೂರವಿರಿಸಬಹುದು.

2.. ಕ್ಯಾನ್ಸರ್ ರೋಗವನ್ನ ತಡೆಯುವ ಶಕ್ತಿ ಕ್ಯಾರೆಟ್‌ನಲ್ಲಿದೆ. ನಿಯಮಿತವಾಗಿ ಕ್ಯಾರೆಟ್ ಸೇವಿಸುವುದರಿಂದ ಕ್ಯಾನ್ಸರ್ ಬರುವುದನ್ನು ತಡೆಗಟ್ಟಬಹುದು.
3.. ನೀವು ಬ್ಯೂಟಿ ಕಾನ್ಶಿಯಸ್ ಅಂದ್ರೆ ಸೌಂದರ್ಯದ ಕಡೆ ಹೆಚ್ಚು ಗಮನ ಕೊಡುವವರಾಗಿದ್ರೆ, ಪ್ರತಿದಿನ ಒಂದು ಕ್ಯಾರೆಟ್ ಸೇವಿಸಿ. ಇದರಿಂದ ನಿಮ್ಮ ಸೌಂದರ್ಯ ಇಮ್ಮಡಿಗೊಳ್ಳುವುದರ ಜೊತೆಗೆ ನೀವು ಸದಾ ಯೌವ್ವನಯುತವಾಗಿರುವಂತೆ ಕಾಪಾಡುತ್ತದೆ.
4.. ಕ್ಯಾರೆಟ್ ಮತ್ತು ಬೀಟ್‌ರೂಟ್ ಬಳಸಿ ಜ್ಯೂಸ್ ತಯಾರಿಸಿ ಕುಡಿಯುವುದರಿಂದ ಹೆಚ್ಚಿನ ಆರೋಗ್ಯಕರ ಲಾಭಗಳಿದೆ.
5.. ಕ್ಯಾರೆಟನ್ನ ಜ್ಯೂಸ್ ಮಾಡದೇ ಹಾಗೇ ತಿನ್ನುವುದರಿಂದ ಹಲ್ಲು ಮತ್ತು ವಸಡು ಗಟ್ಟಿಗೊಳ್ಳುತ್ತದೆ.
6.. ಕ್ಯಾರೆಟನ್ನ ಬೇಯಿಸಿ ತಿನ್ನುದಕ್ಕಿಂತ ಹಾಗೇ ತಿಂದರೆ ಉತ್ತಮ. ಅದರಲ್ಲೂ ತಿಂಡಿ ಮತ್ತು ಊಟದ ಮಧ್ಯೆ ಹಸಿವಾಗುವ ಸಂದರ್ಭದಲ್ಲಿ ಕ್ಯಾರೆಟ್ ಸಲಾಡ್ ಸೇವಿಸಿ.
7.. ನೀವೂ ಹಳ್ಳಿಕಡೆ ಜನರನ್ನ ಗಮನಿಸಿರ್ತೀರಿ. ಅವರು ರೊಟ್ಟಿ, ಚಪಾತಿ, ಅನ್ನದ ಜೊತೆ ಹಸಿ ತರಕಾರಿಗಳನ್ನ ಹೆಚ್ಚು ಬಳಕೆ ಮಾಡ್ತಾರೆ. ಅದರಲ್ಲೂ ಉತ್ತರ ಕರ್ನಾಟಕದ ಜನ ಊಟದ ಜೊತೆ ಇಡೀ ಈರುಳ್ಳಿ, ಸೌತೇಕಾಯಿ, ಕ್ಯಾರೆಟ್ ತಿನ್ನುತ್ತಾರೆ. ಹೀಗೆ ಇಡೀ ತರಕಾರಿ ಸೇವಿಸುವುದರಿಂದ ಅದರಲ್ಲಿರುವ ಅಷ್ಟೂ ಪೋಷಕಾಂಶಗಳು ಈಸಿಯಾಗಿ ಅವರ ದೇಹ ಸೇರುತ್ತದೆ. ಆದ್ದರಿಂದಲೇ ಅವರು ಗಟ್ಟಿಮುಟ್ಟಾಗಿರುತ್ತಾರೆ.
8.. ಹೃದಯ ಸಂಬಂಧಿ ಖಾಯಿಲೆಯಿಂದ ದೂರವಿರಿಸಲು ಕ್ಯಾರೆಟ್ ಸಹಕಾರಿಯಾಗಿರುತ್ತದೆ.
ಶ್ರಾವಣಿ ಸೋಮಯಾಜಿ, ಕರ್ನಾಟಕ ಟಿವಿ

ಶ್ರೀ ರಾಘವೇಂದ್ರ ಸ್ವಾಮಿ ಜ್ಯೋತಿಷ್ಯ ಕೇಂದ್ರ, ಮಹೇಶ್ ಭಟ್ ಗುರೂಜಿ, 9686999517,
ವಿದ್ಯೆ, ಉದ್ಯೋಗ, ವ್ಯಾಪಾರ, ಶತ್ರುಕಾಟ, ಪ್ರೀತಿಯಲ್ಲಿ ನಂಬಿ ಮೋಸ, ಆರೋಗ್ಯ, ಹಣಕಾಸು ಮದುವೆ,ಸಂತಾನ, ಪ್ರೇಮ ವಿವಾಹ, ಮಾಟ- ಮಂತ್ರ ದೋಷ ನಿವಾರಣೆ, ಇನ್ನಿತರ ಯಾವುದೇ ಸಮಸ್ಯೆ ಇದ್ದರೂ ಕರೆ ಮಾಡಿ.

