Friday, November 28, 2025

Latest Posts

ಒಣಕೊಬ್ಬರಿಯಲ್ಲಿದೆ ಚಮತ್ಕಾರಿ ಗುಣಗಳು: ಇದು ಆರೋಗ್ಯಕ್ಕೆ ಎಷ್ಟು ಒಳ್ಳೆಯದು ಗೊತ್ತಾ..?

- Advertisement -

ದೇವರ ಪೂಜೆಯಲ್ಲಿ ಎಲ್ಲಕ್ಕಿಂತ ಮುಖ್ಯವಾಗಿ ಬಳಸುವ ವಸ್ತು ಅಂದರೆ ತೆಂಗಿನಕಾಯಿ. ಎಲ್ಲ ಹಣ್ಣು ಕಾಯಿಗಳಿಗಿಂತ ನೈವೆದ್ಯಕ್ಕೆ ತಂಗಿನಕಾಯಿಯೇ ಶ್ರೇಷ್ಠವೆಂಬ ಮಾತಿದೆ. ಅಂಥ ತೆಂಗಿನಕಾಯಿಯಲ್ಲಿ ಆರೋಗ್ಯಕರ ಗುಣಗಳಿದ್ದು, ಆ ಗುಣಗಳ ಬಗ್ಗೆ ಮತ್ತು ತೆಂಗಿನ ಎಣ್ಣೆ ಬಳಸುವುದರಿಂದಾಗುವ ಲಾಭಗಳ ಬಗ್ಗೆಯೂ ನಾವಿಂದು ತಿಳಿಯೋಣ.

ನಾವು ಮಾಡೋ ಹಲವು ತಿಂಡಿ ತಿನಿಸು, ಸಾಂಬಾರ್, ಪಲ್ಯಗಳಲ್ಲಿ ತೆಂಗಿನಕಾಯಿ ಬಳಕೆಯನ್ನ ಖಂಡಿತವಾಗಿ ಮಾಡ್ತೀವಿ. ಇದು ಬರೀ ನಾಲಿಗಗಷ್ಟೇ ರುಚಿ ಕೊಡುವುದಲ್ಲದೇ, ನಮ್ಮ ಆರೋಗ್ಯ ಕಾಪಾಡುವುದರಲ್ಲಿಯೂ ಸಹಕಾರಿಯಾಗಿದೆ.

ತಲೆ ಕೂದಲು ಉದುರುವ ಸಮಸ್ಯೆ, ಹೊಟ್ಟಿನ ಸಮಸ್ಯೆ ಇದ್ದಲ್ಲಿ ತಲೆಗೆ ತೆಂಗಿನ ಎಣ್ಣೆಯ ಮಸಾಜನ್ನ ನಿಯಮಿತವಾಗಿ ಮಾಡಬೇಕು.

ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆ ಇದ್ದಲ್ಲಿ ತೆಂಗಿನ ಎಣ್ಣೆಯಿಂದ ಮಸಾಜ್ ಮಾಡುವುದು ಉತ್ತಮ.

ಪ್ರತಿದಿನ ಖಾಲಿ ಹೊಟ್ಟೆಯಲ್ಲಿ ಕೊಂಚ ಒಣಕೊಬ್ಬರಿ ಸೇವನೆ ಮಾಡಿದ್ದಲ್ಲಿ ತ್ವಚೆಯ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು.

ಜೀರ್ಣಕ್ರಿಯೆ ಸಮಸ್ಯೆ ಉಳ್ಳವರು ಊಟ ಮಾಡಿದ ಅರ್ಧ ಗಂಟೆ ಬಳಿಕೆ ಚಿಕ್ಕ ತುಂಡು ಒಣಕೊಬ್ಬರಿಯನ್ನ ತಿಂದರೆ ಜೀರ್ಣ ಕ್ರಿಯೆ ಉತ್ತಮಗೊಳ್ಳುತ್ತದೆ.

ಗಂಟಲು ಬೇನೆ, ಗಂಟಲಲ್ಲಿ ತುರಿಕೆ ಸಮಸ್ಯೆ ಇತ್ಯಾದಿ ಇದ್ದರೆ ಚಿಕ್ಕ ತುಂಡು ಒಣ ಕೊಬ್ಬರಿಯಲ್ಲಿ ಚೆನ್ನಾಗಿ ಅಗಿದು ತಿನ್ನಬೇಕು.

ಇನ್ನು ತೂಕ ಕಡಿಮೆ ಮಾಡಿಕೊಳ್ಳಲು ಬಯಸುವರು, ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಮತ್ತು ರಾತ್ರಿ ಊಟಕ್ಕೂ ಅರ್ಧಗಂಟೆ ಮುಂದೆ ಚಿಕ್ಕ ತುಂಡು ಒಣಕೊಬ್ಬರಿಯನ್ನು ಚೆನ್ನಾಗಿ ಅಗಿದು ತಿನ್ನಬೇಕು. ಹೀಗೆ ಮಾಡುವುದರಿಂದ ಕ್ರಮೇಣ ದೇಹದ ತೂಕ ಇಳಿಯುತ್ತದೆ.

ಕೆಟ್ಟ ಕೊಲೆಸ್ಟ್ರಾಲನ್ನ ತೆಗೆದು ಒಳ್ಳೆಯ ಕೊಲೆಸ್ಟ್ರಾಲ್ ಪ್ರಮಾಣ ಹೆಚ್ಚಿಸುವುದರಲ್ಲಿ ಒಣ ಕೊಬ್ಬರಿ ಸಹಕಾರಿಯಾಗಿದೆ. ಅಲ್ಲದೇ ದೇಹದಲ್ಲಿನ ಶಕ್ತಿಯನ್ನ ಕೂಡ ಹೆಚ್ಚು ಮಾಡುತ್ತದೆ.

ಬಲಹೀನ ಮೂಳೆಯನ್ನ ಶಕ್ತಿಯುತಗೊಳಿಸುವುದರಲ್ಲಿ ಒಣಕೊಬ್ಬರಿ ಸಹಕಾರಿಯಾಗಿದೆ. ಚಿಕ್ಕ ತುಂಡುಒಣಕೊಬ್ಬರಿ ತಿಂದು ಬಿಸಿ ಹಾಲು ಕುಡಿಯುವುದರಿಂದ ಮೂಳೆ ಗಟ್ಟಿಗೊಳ್ಳುತ್ತದೆ.

ಕೆಲವವರಿಗೆ ಒಣಕೊಬ್ಬರಿ ತಿಂದರೆ ಅಲರ್ಜಿ ಉಂಟಾಗುತ್ತದೆ. ಅಂಥವರು ವೈದ್ಯರ ಬಳಿ ಸಲಹೆ ಪಡೆದು ಒಣಕೊಬ್ಬರಿ ಬಳಸಿ.

ಶ್ರಾವಣಿ ಸೋಮಯಾಜಿ, ಕರ್ನಾಟಕ ಟಿವಿ

ಶ್ರೀ ಸಾಯಿ ಕೃಷ್ಣ ಜ್ಯೋತಿಷ್ಯಾಲಯ, ಪಂಡಿತ್ ಡಿ.ಎಸ್ ಜೋಷಿ – 9731355538
ನಿಮ್ಮ ಸಮಸ್ಯೆಗಳಾದ ಉದ್ಯೋಗ, ಸತಿ-ಪತಿ ಕಲಹ, ಮದುವೆ, ಪ್ರೇಮ ವಿಚಾರ, ವಶೀಕರಣ ಯಾವುದೇ ಕಠಿಣ-ಕ್ಲಿಷ್ಟ ಸಂಕಷ್ಟಗಳಿಗೆ ಸಂಪರ್ಕಿಸಿ.
ವಿಳಾಸ : ಸಾಯಿಬಾಬಾ ದೇವಸ್ಥಾನ ಎದುರು, 15ನೇ ಕ್ರಾಸ್, ಬಸ್ ನಿಲ್ದಾಣದ ಪಕ್ಕ, ಸಂಪಿಗೆ ರೋಡ್, ಮಲ್ಲೇಶ್ವರಂ, ಬೆಂಗಳೂರು
ನಿಮ್ಮ ಸಮಸ್ಯೆಗಳಿಗೆ ಕಾಶಿ ತಾಂತ್ರಿಕ ಅಘೋರಿ, ನಾಗಸಾಧುಗಳ ವಿಶೇಷ ಪ್ರಯೋಗಗಳಾದ ಮಹಾರುದ್ರ ಪೂಜೆ, ಮಂಡಲ ಪೂಜೆ, ಅಷ್ಟ ದಿಗ್ಬಂಧನೆಯ ಪೂಜೆಯಿಂದ 11 ದಿನಗಳಲ್ಲಿ ಪರಿಹಾರ ಶತಸಿದ್ಧ.
ಹೆಸರಾಂತ ವಂಶಪಾರಂಪರ್ಯ ಜ್ಯೋತಿಷ್ಯರು ಪಂಡಿತ್ ಡಿ.ಎಸ್ ಜೋಷಿ ತಮ್ಮ 25 ವರ್ಷಗಳ ಅನುಭವದಲ್ಲಿ 20,000 ಕ್ಕೂ ಹೆಚ್ಚು ಸಮಸ್ಯೆಗಳನ್ನ ಇತ್ಯರ್ಥ ಮಾಡಿ ಸಾವಿರಾರು ಕುಟುಂಬಗಳ ನೆಮ್ಮದಿಯ ಬದುಕಿಗೆ ನೆರವಾಗಿದ್ದಾರೆ.

- Advertisement -

Latest Posts

Don't Miss