ಶುಂಠಿ ಬಹಳ ರುಚಿಯನ್ನು ಹೊಂದಿರುವ ಮಸಾಲೆ ಒಂದು ತುಂಡು ಶುಂಠಿ ಇಡೀ ಆಹಾರದ ಫ್ಲೇವರನೇ ಬದಲಾಯಿಸುತ್ತೆ. ಶುಠಿಯು ತುಂಬಾ ಟೇಸ್ಟಿ ಮಾತ್ರವಲ್ಲ ಸಾಕಷ್ಟು ಉತ್ತಮ ಗುಣಗಳನ್ನು ಹಂದಿದೆ.
ಶುಂಠಿಯ ಜಿಂಜರಾಲ್, ಶೋಗೋಲ್, ಜಿoಗೈಬೆರೆನ್ ಜೊತೆಗೆ ಜೀವಸತ್ವಗಳು ಮತ್ತು ಖನಿಜಗಳನ್ನು ಹೊಂದಿದೆ. ಆದ್ದರಿಂದ ಶುಂಠಿ ಯನ್ನ ಬಹಳ ಹಿಂದಿನಿOದಲು ಔಷಧಿಯಾಗಿ ಬಳಸಲಾಗುತ್ತದೆ. ಶತಮಾನಗಳ ಹಿಂದೆ, ಶುಂಠಿಯನ್ನು ಎಲ್ಲಾ ರೀತಿಯ ಕಾಯಿಲೆಗಳನ್ನು ಗುಣಪಡಿಸಲು ಬಳಸಲಾಗುತ್ತಿತ್ತು. ಇಂತಾ ಗುಣಗಳಿರುವ ಶುಂಠಿಯನ್ನ ನಿಯಮಿತವಾಗಿ ತಿನ್ನುವುದು ನಿಮ್ಮ ದೇಹದ ಆರೋಗ್ಯಕ್ಕೆ ಸಹಾಯಕವಾಗಿದೆ.
ಪ್ರತಿದಿನ ಶುಂಠಿ ತಿನ್ನುವುದರಿಂದ ಅನೇಕ ಆರೋಗ್ಯ ಪ್ರಯೋಜನಗಳಿವೆ. ಹಸಿ ಶುಂಠಿಯನ್ನೆ ತಿನ್ನಬೇಕೆಂದಿಲ್ಲ. ಚಹಾದೊಂದಿಗೆ,ಆಹಾರ ಪದಾರ್ಥಗಳಲ್ಲಿ ಸೇವಿಸಬಹುದು ಆದರೆ ಹಸಿ ಶುಂಠಿ ಹೆಚ್ಚು ಪ್ರಭಾವಿತವಾಗಿರುತ್ತದೆ.
ಶುಂಠಿ ಬಳಸುವುದರಿಂದಾಗುವ ಪ್ರಯೋಜನಗಳು ಉರಿಯೋತ ನಿವಾರಕವಾಗಿದೆ. ಇದರಲ್ಲಿರುವ ಔಷದಿಯ ಗುಣಗಳು ವೇಗವಾಗಿ ಕಾರ್ಯನಿರ್ವಹಿಸುತ್ತವೆ.
ನಿಮಗೆ ಆಗಾಗ ವಾಕರಿಕೆ ಅನುಭವಾಗುತ್ತದೆಯಾ..? ಆಗಾದರೆ ಪ್ರತಿದಿನ ಶುಂಠಿ ತಿನ್ನುವುದರಿಂದ ವಾಕರಿಕೆ ಕಡಿಮೆಮಾಡುತ್ತದೆ. ಹಾಗೂ ವಿಶೇಷವಾಗಿ ಗರ್ಭಿಣಿಯರು ಮತ್ತು ಕೀಮೋಥೆರಪಿಗೆ ಒಳಗಾಗುವ ಜನರು ಇದರಿಂದ ಪ್ರಯೋಜನ ಪಡೆಯಬಹುದು.
ಶುಂಠಿ ತಿನ್ನುವುದರಿಂದ ಸ್ನಾಯು ನೋವಿನ ಮೇಲೆ ಉತ್ತಮ ಪರಿಣಾಮ ಬೀರುತ್ತದೆ. ಹಾಗೂ ಮುಟ್ಟಿನ ನೋವಿಗೆ ಶುಂಠಿ ರಾಮಬಾಣವಾಗಿದೆ. ಈ ಸಂದರ್ಭದಲ್ಲಿ ಶುಂಠಿಚಹಾ ಸೇವಿಸುವುದರಿಂದ ಕಿಬ್ಬೊಟ್ಟೆಯ ನೋವು ಕಡಿಮೆಯಾಗುತ್ತದೆ. ಒಂದು ತಿಂಗಳು ಪ್ರತಿದಿನ ಶುಂಠಿ ತಿನ್ನುವುದರಿಂದ ದೇಹದಲ್ಲಿನ ಕೆಟ್ಟ ಕೊಲೆಸ್ಟರಾಲ್ ಕಡಿಮೆ ಮಾಡಬಹುದು. ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.