Friday, November 28, 2025

Latest Posts

ಪ್ರತಿದಿನ ಹಸಿ ಮೆಣಸಿನಕಾಯಿ ತಿನ್ನೋದ್ರಿಂದ ಏನಾಗತ್ತೆ ಗೊತ್ತಾ..?

- Advertisement -

ಹಸಿಮೆಣಸು.. ಕೆಲವು ಪಲ್ಯ ಸಾರುಗಳಿಗೆ ಹಸಿಮೆಣಸು ಇಲ್ಲಾ ಅಂದ್ರೆ ಅದರ ಟೇಸ್ಟೇ ಹೊರಟು ಹೋಗತ್ತೆ. ಇನ್ನು ಬಜ್ಜಿ, ವಡಾಪಾವ್, ಮಿರ್ಚಿ ಮಂಡಕ್ಕಿನಲ್ಲಿ ಮಸಾಲೆ ಹಸಿ ಮೆಣಸು ಇರಲೇಬೇಕು. ಹೀಗೆ ಹಲವು ಆಹಾರಗಳ ರುಚಿ ಹೆಚ್ಚಿಸುವ ಹಸಿ ಮೆಣಸು ಆರೋಗ್ಯಕ್ಕೂ ಒಳ್ಳೆಯದು.

ಆದ್ರೆ ಹಸಿ ಮೆಣಸನ್ನ ಬೇಯಿಸಿ ತಿನ್ನೋ ಬದಲು ಸಲಾಡ್‌, ಮೊಸರನ್ನದಲ್ಲಿ ಬಳಸಿದರೆ ಆರೋಗ್ಯಕ್ಕೆ ಇನ್ನೂ ಉತ್ತಮ. ದಿನಕ್ಕೆ ಒಂದು ಹಸಿಮೆಣಸನ್ನ ಸಲಾಡ್‌ ಮತ್ತು ಮೊಸರನ್ನದ ಜೊತೆ ಸೇವಿಸಬೇಕು. ನಿಯಮಿತವಾಗಿ ಹಸಿಮೆಣಸಿನ ಸೇವನೆ ಮಾಡುವುದರಿಂದ ಹಲವು ರೋಗಗಳಿಂದ ಮುಕ್ತಿ ಪಡೆಯಬಹುದು.

ಹಸಿ ಮೆಣಸಿನ ಕಾಯಿಯನ್ನ ಪ್ರತಿದಿನ ಸಮ ಪ್ರಮಾಣದಲ್ಲಿ ಉಪಯೋಗ ಮಾಡಿದ್ರೆ ಕ್ಯಾನ್ಸರ್‌ ರೋಗವನ್ನು ತಡಿಯುವ ಸಾಧ್ಯತೆ ಇದೆ. ಯೂರೋಪ್‌ನ ಕೆಲ ದೇಶಗಳಲ್ಲಿ ಹಸಿ ಮೆಣಸಿನಕಾಯಿ ಯ್ಯೂಸ್ ಮಾಡುವುದಿಲ್ಲ. ಆದ್ದರಿಂದ ಆ ದೇಶದಲ್ಲಿ ಕ್ಯಾನ್ಸರ್‌ ಪ್ರಮಾಣ ಹೆಚ್ಚಿಗೆ ಆಗಿರೋದಂತೆ.

ಇನ್ನು ಶುಗರ್ ಬರುವುದನ್ನ ತಡೆಗಟ್ಟೋಕ್ಕೆ ಪ್ರತಿದಿನ ಹಸಿ ಮೆಣಸಿನಕಾಯಿಯ ಸೇವನೆ ಮಾಡಬೇಕು. ಪ್ರತಿದಿನ ಒಂದು ಹಸಿಮೆಣಸನ್ನಾದರೂ ಸಲಾಡ್ ಜೊತೆ, ರೊಟ್ಟಿ ಚಪಾತಿ ಜೊತೆ ತಿನ್ನಬೇಕು. ಅಗತ್ಯವಿದ್ದರೆ ಚಿಕ್ಕ ತುಂಡು ಈರುಳ್ಳಿಯನ್ನ ಕೂಡ ಇದರೊಂದಿಗೆ ಸೇವಿಸಬಹುದು.

ಹಸಿಮೆಣಸು ತೂಕ ಇಳಿಸಲು ಕೂಡ ಸಹಕಾರಿಯಾಗಿದೆ. ಪ್ರತಿದಿನ ಊಟದ ಜೊತೆ ಒಂದು ಚಿಕ್ಕ ಹಸಿಮೆಣಸು ಮತ್ತು ಚಿಕ್ಕ ತುಂಡು ಈರುಳ್ಳಿಯನ್ನ ನಿಯಮಿತವಾಗಿ ಸೇವಿಸುತ್ತ ಬಂದರೆ ಕ್ರಮೇಣ ತೂಕ ಇಳಿಯುತ್ತದೆ.
ಕಣ್ಣಿನ ಸಮಸ್ಯೆ ಇದ್ದಲ್ಲಿ ಹಸಿಮೆಣಸಿನಕಾಯಿ ಸೇವಿಸಬೇಕು. ಯಾವುದಾದರೂ ಚಟ್ನಿ ಅಥವಾ ಸಲಾಡ್‌ನಲ್ಲಿ ಒಂದು ಹಸಿ ಮೆಣಸು ಬಳಸಿ ಮತ್ತು ಅನ್ನ ರೊಟ್ಟಿ ಅಥವಾ ಚಪಾತಿಯೊಂದಿಗೆ ಈ ಚಟ್ನಿ ಅಥವಾ ಸಲಾಡ್ ಬಳಸಿ ತಿನ್ನಿ.

ಬುದ್ಧಿಶಕ್ತಿಯೊಂದಿಗೆ ನೆನಪಿನ ಶಕ್ತಿಯನ್ನೂ ಕೂಡ ಹೆಚ್ಚಿಸುವ ತಾಕತ್ತು ಹಸಿಮೆಣಸಿನಕಾಯಿಗಿದೆ.
ಮುಖದ ಮೇಲೆ ಹೆಚ್ಚು ಗುಳ್ಳೆ, ಕಲೆ, ಬೇಗ ಚರ್ಮ ಸುಕ್ಕುಗಟ್ಟುವ ಸಮಸ್ಯೆಯನ್ನ ಸಹ ಹಸಿ ಮೆಣಸು ಸೇವಿಸುವುದರಿಂದ ತಡೆಗಟ್ಟಬಹುದು.

ಇನ್ನು ದೇಹದಲ್ಲಿ ಉಷ್ಣತೆ ಪ್ರಮಾಣ ಜಾಸ್ತಿಯಾಗಿದ್ದರೆ. ಮೂಗಿನಿಂದ, ಬಾಯಿಯಿಂದ ಅಥವಾ ಮಲ- ಮೂತ್ರ ವಿಸರ್ಜನೆ ಮಾಡುವ ಸ್ಥಳದಿಂದ ರಕ್ತಸ್ರಾವವಾಗುವ ಸಮಸ್ಯೆ ಇದ್ದಲ್ಲಿ ಹಸಿ ಮೆಣಸನ್ನ ಸೇವಿಸಲೇಬೇಡಿ.
ಪಿತ್ತ ಸಮಸ್ಯೆ, ಅಲ್ಸರ್ ಸಮಸ್ಯೆ ಇದ್ದರೂ ಕೂಡ ಹಸಿ ಮೆಣಸು ಸೇವಿಸಬಾರದು.

ಕೆಲವವರಿಗೆ ಹಸಿಮೆಣಸಿನಕಾಯಿ ತಿಂದರೆ ಅಲರ್ಜಿ, ಮೂತ್ರದ ಸಮಸ್ಯೆ ಇತ್ಯಾದಿ ಉಂಟಾಗುತ್ತದೆ. ಅಂಥವರು ವೈದ್ಯರ ಬಳಿ ಸಲಹೆ ಪಡೆದು ಹಸಿ ಮೆಣಸು ಬಳಸಿ.

ಶ್ರಾವಣಿ ಸೋಮಯಾಜಿ, ಕರ್ನಾಟಕ ಟಿವಿ

ಶ್ರೀ ಸಾಯಿ ಕೃಷ್ಣ ಜ್ಯೋತಿಷ್ಯಾಲಯ, ಪಂಡಿತ್ ಡಿ.ಎಸ್ ಜೋಷಿ – 9731355538
ನಿಮ್ಮ ಸಮಸ್ಯೆಗಳಾದ ಉದ್ಯೋಗ, ಸತಿ-ಪತಿ ಕಲಹ, ಮದುವೆ, ಪ್ರೇಮ ವಿಚಾರ, ವಶೀಕರಣ ಯಾವುದೇ ಕಠಿಣ-ಕ್ಲಿಷ್ಟ ಸಂಕಷ್ಟಗಳಿಗೆ ಸಂಪರ್ಕಿಸಿ.
ವಿಳಾಸ : ಸಾಯಿಬಾಬಾ ದೇವಸ್ಥಾನ ಎದುರು, 15ನೇ ಕ್ರಾಸ್, ಬಸ್ ನಿಲ್ದಾಣದ ಪಕ್ಕ, ಸಂಪಿಗೆ ರೋಡ್, ಮಲ್ಲೇಶ್ವರಂ, ಬೆಂಗಳೂರು
ನಿಮ್ಮ ಸಮಸ್ಯೆಗಳಿಗೆ ಕಾಶಿ ತಾಂತ್ರಿಕ ಅಘೋರಿ, ನಾಗಸಾಧುಗಳ ವಿಶೇಷ ಪ್ರಯೋಗಗಳಾದ ಮಹಾರುದ್ರ ಪೂಜೆ, ಮಂಡಲ ಪೂಜೆ, ಅಷ್ಟ ದಿಗ್ಬಂಧನೆಯ ಪೂಜೆಯಿಂದ 11 ದಿನಗಳಲ್ಲಿ ಪರಿಹಾರ ಶತಸಿದ್ಧ.
ಹೆಸರಾಂತ ವಂಶಪಾರಂಪರ್ಯ ಜ್ಯೋತಿಷ್ಯರು ಪಂಡಿತ್ ಡಿ.ಎಸ್ ಜೋಷಿ ತಮ್ಮ 25 ವರ್ಷಗಳ ಅನುಭವದಲ್ಲಿ 20,000 ಕ್ಕೂ ಹೆಚ್ಚು ಸಮಸ್ಯೆಗಳನ್ನ ಇತ್ಯರ್ಥ ಮಾಡಿ ಸಾವಿರಾರು ಕುಟುಂಬಗಳ ನೆಮ್ಮದಿಯ ಬದುಕಿಗೆ ನೆರವಾಗಿದ್ದಾರೆ.

- Advertisement -

Latest Posts

Don't Miss