ಪ್ರತಿ ದಿನ ಹೆಸರು ಕಾಳನ್ನ ಸೇವಿಸುವುದರಿಂದ ನಮಗಾಗುವ ಲಾಭಗಳೇನು..? ಹೆಸರು ಕಾಳನ್ನು ಹೇಗೆ ತಿನ್ನಬೇಕು..? ಇದನ್ನ ತಿನ್ನುವುದರಿಂದ ದೇಹದಲ್ಲಿ ಉಷ್ಣತೆ ಹೆಚ್ಚುತ್ತದೆಯೋ..? ಅಥವಾ ದೇಹ ತಂಪಾಗಿರುತ್ತದೆಯೋ..? ಇತ್ಯಾದಿ ವಿಷಯದ ಬಗ್ಗೆ ಹೆಚ್ಚಿನ ಮಾಹಿತಿಯನ್ನ ತಿಳಿಯೋಣ ಬನ್ನಿ.
ಹೆಸರು ಕಾಳು ದೇಹಕ್ಕೆ ತಂಪು ನೀಡುತ್ತದೆ. ನೆನೆಸಿದ ಹೆಸರು ಕಾಳನ್ನ ತಿನ್ನುವುದರಿಂದ ಆರೋಗ್ಯಕ್ಕೆ ಹಲವು ಉಪಯೋಗಗಳಿದೆ. ಯಾವುದು ಆ ಉಪಯೋಗಗಳು ಅನ್ನೋದನ್ನ ನೋಡೋಣ ಬನ್ನಿ..
ಹೆಸರು ಕಾಳಿನಲ್ಲಿ ಪ್ರೋಟಿನ್, ಫೈಬರ್, ವಿಟಾಮಿನ್ ಬಿ1, ಮ್ಯಾಗ್ನಿಶೀಯಂ, ಪೊಟ್ಯಾಷಿಯಂ ರೀತಿಯ ಪೋಷಕಾಂಶಗಳಿದ್ದು, ಹೆಸರು ಕಾಳಿನ ಸೇವನೆಯಿಂದ ಆರೋಗ್ಯ ಉತ್ತಮವಾಗಿರುತ್ತದೆ.
ನಮ್ಮ ದೇಹದಲ್ಲಿ ಎರಡು ರೀತಿಯ ಕೊಲೆಸ್ಟ್ರಾಲ್‌ಗಳು ಇರುತ್ತದೆ. ಒಂದು ಗುಡ್ ಕೊಲೆಸ್ಟ್ರಾಲ್ ಮತ್ತೊಂದು ಬ್ಯಾಡ್ ಕೊಲೆಸ್ಟ್ರಾಲ್. ದೇಹದಲ್ಲಿ ಯಾವಾಗಲೂ ಗುಡ್ ಕೊಲೆಸ್ಟ್ರಾಲ್ ಪ್ರಮಾಣ ಹೆಚ್ಚಾಗಿರಬೇಕು. ಮತ್ತು ಬ್ಯಾಡ್ ಕೊಲೆಸ್ಟ್ರಾಲ್ ಪ್ರಮಾಣ ಕಡಿಮೆಯಾಗಿರಬೇಕು. ಬ್ಯಾಡ್ ಕೊಲೆಸ್ಟ್ರಾಲ್ ಪ್ರಮಾಣ ಹೆಚ್ಚಾಗಿ, ಗುಡ್ ಕೊಲೆಸ್ಟ್ರಾಲ್ ಪ್ರಮಾಣ ಕಡಿಮೆಯಾದ್ರೆ ಆರೋಗ್ಯಕ್ಕೆ ಹಾನಿಯುಂಟಾಗುತ್ತದೆ. ನಿಮ್ಮ ದೇಹದಲ್ಲಿ ಹೀಗೇನಾದ್ರೂ ಆಗಿದ್ರೆ, ರಾತ್ರಿ ಒಂದು ಕಪ್‌ನಲ್ಲಿ ಹೆಸರು ಕಾಳನ್ನ ನೆನೆಸಿಟ್ಟು, ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಅದನ್ನ ಸೇವಿಸಬೇಕು.
ಇಷ್ಟೇ ಅಲ್ಲದೇ, ರಾತ್ರಿ ನೆನೆಸಿಟ್ಟ ಹೆಸರು ಕಾಳನ್ನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ತಿನ್ನುವುದರಿಂದ ಹೊಟ್ಟೆಯ ಸಮಸ್ಯೆ, ಕಣ್ಣಿನ ಸಮಸ್ಯೆ ಕೂಡ ಕಡಿಮೆಯಾಗುತ್ತದೆ.
ಇನ್ನು ಮೊಳಕೆ ಬರಿಸಿದ ಹೆಸರು ಕಾಳು ಸೇವನೆಯಿಂದ ದೇಹದ ತೂಕ ಕಡಿಮೆ ಮಾಡಬಹುದು. ನೀವು ಹೆಸರು ಕಾಳಿನ ಸಲಾಡ್ ಮಾಡಿ ತಿನ್ನುವುದಿದ್ದರೆ, ಅದಕ್ಕೆ ಸಾಧಾರಣ ಉಪ್ಪಿನ ಬದಲು, ಸೈಂಧವ ಉಪ್ಪು ಬೆರೆಸಿ ತಿನ್ನುವುದು ಉತ್ತಮ.

