Friday, November 28, 2025

Latest Posts

ಬಿಸಿ ನೀರು ಕುಡಿಯುವುದರಿಂದ ಏನಾಗತ್ತೆ ಗೊತ್ತಾ..?

- Advertisement -

ನಿಮಗೆ ಯಾವುದಾದರೂ ಆರೋಗ್ಯ ಸಮಸ್ಯೆ ಇದ್ದಲ್ಲಿ ವೈದ್ಯರು ಹೆಚ್ಚಾಗಿ ಯತೇಚ್ಛವಾಗಿ ನೀರು ಸೇವಿಸಿ ಎಂಬ ಸಲಹೆ ನೀಡುತ್ತಾರೆ. ಮನುಷ್ಯ ಆರೋಗ್ಯವಾಗಿರಬೇಕು ಅಂದ್ರೆ ಪ್ರತಿದಿನ 8ರಿಂದ 10 ಗ್ಲಾಸ್ ನೀರು ಕುಡಿಯಬೇಕು. ಬೇಸಿಗೆಗಾಲದಲ್ಲಿ ಹೆಚ್ಚು ದಾಹವಾಗುವುದರಿಂದ 8ರಿಂದ 10 ಗ್ಲಾಸ್ ನೀರು ಕುಡಿಯುತ್ತೇವೆ. ಆದ್ರೆ ಚಳಿಗಾಲ, ಮಳೆಗಾಲದಲ್ಲಿ ಇಷ್ಟು ನೀರು ಕುಡಿಯುವುದಿಲ್ಲ.

ಯಾರು ದೇಹಕ್ಕೆ ಅಗತ್ಯವಿದ್ದಷ್ಟು ನೀರು ಕುಡಿಯುತ್ತಾರೋ ಅಂಥವರು ಆರೋಗ್ಯವಾಗಿರುತ್ತಾರೆ ಎಂದು ವೈಜ್ಞಾನಿಕವಾಗಿಯೂ ಸಾಬೀತಾಗಿದೆ.

ಹೀಗೆ ಬಿಸಿ ನೀರು ಕೂಡಾ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಬಿಸಿ ನೀರು ಕುಡಿಯುವುದರಿಂದ ದೇಹಕ್ಕೆ ತುಂಬಾ ಲಾಭಗಳಿದೆ. ಹಾಗಾದ್ರೆ ಯಾವುದು ಆ ಲಾಭಗಳು ಅನ್ನೋದನ್ನ ನೋಡೋಣ ಬನ್ನಿ..

1.. ದೇಹದ ತೂಕ ಇಳಿಸುವುದರಲ್ಲಿ ಬಿಸಿ ನೀರು ಸಹಾಯಕವಾಗಿದೆ. ತುಂಬಾ ಬಿಸಿ ಬಿಸಿ ನೀರು ಕುಡಿಯಬಾರದು. ಆದ್ರೆ ಉಗುರುಬೆಚ್ಚಿನ ನೀರಿಗಿಂತ ಕೊಂಚ ಬಿಸಿಯಾಗಿರುವ ನೀರು ಕುಡಿಯಲು ಯೋಗ್ಯ.

2.. ಬಿಸಿ ನೀರು ಯಾವಾಗ ಕುಡಿಯಬೇಕು ಎಂಬ ಪ್ರಶ್ನೆಗೆ ಉತ್ತರ, ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಬಿಸಿ ನೀರು ಕುಡಿಯಿರಿ. ನಂತರ 10 ಗಂಟೆಗೆ, ಊಟಕ್ಕೂ ಅರ್ಧ ಗಂಟೆ ಮೊದಲು, ಸಂಜೆ 5 ಗಂಟೆಗೆ ಬಿಸಿ ನೀರು ಕುಡಿಯಬೇಕು. 6 ಗಂಟೆ ಬಳಿಕ ಹೆಚ್ಚು ನೀರು ಕುಡಿಯಬೇಡಿ. ಆದ್ರೆ ನೀವೇನಾದ್ರೂ ತೂಕ ಇಳಿಸಲೆಂದೇ ಬಿಸಿ ನೀರು ಕುಡಿಯುತ್ತಿದ್ದರೆ, ಮಲಗುವ ಮೊದಲು ಒಂದು ಗ್ಲಾಸ್ ಬಿಸಿ ನೀರು ಕುಡಿಯಿರಿ.

3.. ಹಸಿವು ಹೆಚ್ಚಿಸುವಲ್ಲಿ ಬಿಸಿ ನೀರು ಉಪಯುಕ್ತವಾಗಿದೆ. ಕೆಲವರಿಗೆ ಹೆಚ್ಚು ಹಸಿವಾಗುವುದಿಲ್ಲ. ಈ ಕಾರಣಕ್ಕೆ ತಿನ್ನುವುದನ್ನು ಕಡಿಮೆ ಮಾಡುತ್ತಾರೆ. ಆದ್ರೆ ನೀವು ಬಿಸಿ ನೀರು ಕುಡಿದಲ್ಲಿ ಇದು ನಿಮ್ಮ ಹಸಿವು ಹೆಚ್ಚಿಸುವಲ್ಲಿ ಸಹಕಾರಿಯಾಗಿದೆ.

4.. ನಾಲಿಗೆ ರುಚಿ ಹಿಡಿಸದಿದ್ದಲ್ಲಿ ಬಿಸಿ ನೀರಿಗೆ ಒಂದು ಸ್ಪೂನ್ ನಿಂಬೆರಸ ಮತ್ತು ಚಿಟಿಕೆ ಕಪ್ಪು ಮೆಣಸಿನ ಪುಡಿ ಹಾಕಿ ಕುಡಿಯಿರಿ. ಇದರಿಂದ ನಾಲಿಗೆ ರುಚಿ ಹೆಚ್ಚುವುದಲ್ಲದೇ, ಹಸಿವು ಹೆಚ್ಚುವುದು.

5.. ರಕ್ತ ಸಂಚಲನೆ ಸರಿ ಮಾಡುವುದರಲ್ಲಿ ಬಿಸಿ ನೀರು ಉಪಯುಕ್ತವಾಗಿದೆ..

6.. ಗಂಟಲು ಕೆರೆತವಿದ್ದರೆ ಬಿಸಿ ನೀರಿನ ಸೇವನೆ ಮಾಡಬೇಕು. ಇದರೊಂದಿಗೆ ಕೊಂಚ ಜೇನುತುಪ್ಪ ಸೇರಿಸಿದರೆ ಉತ್ತಮ.

ಇವಿಷ್ಟು ಬಿಸಿ ನೀರು ಸೇವನೆಯ ಲಾಭಗಳು. ಹೀಗಾಗಿ ನಿಯಮಿತ ರೂಪದಲ್ಲಿ ಬಿಸಿ ನೀರಿನ ಸೇವನೆ ಮಾಡಿ.

ಶ್ರಾವಣಿ ಸೋಮಯಾಜಿ, ಕರ್ನಾಟಕ ಟಿವಿ

ಶ್ರೀ ಸಾಯಿ ಕೃಷ್ಣ ಜ್ಯೋತಿಷ್ಯಾಲಯ, ಪಂಡಿತ್ ಡಿ.ಎಸ್ ಜೋಷಿ – 9731355538
ನಿಮ್ಮ ಸಮಸ್ಯೆಗಳಾದ ಉದ್ಯೋಗ, ಸತಿ-ಪತಿ ಕಲಹ, ಮದುವೆ, ಪ್ರೇಮ ವಿಚಾರ, ವಶೀಕರಣ ಯಾವುದೇ ಕಠಿಣ-ಕ್ಲಿಷ್ಟ ಸಂಕಷ್ಟಗಳಿಗೆ ಸಂಪರ್ಕಿಸಿ.
ವಿಳಾಸ : ಸಾಯಿಬಾಬಾ ದೇವಸ್ಥಾನ ಎದುರು, 15ನೇ ಕ್ರಾಸ್, ಬಸ್ ನಿಲ್ದಾಣದ ಪಕ್ಕ, ಸಂಪಿಗೆ ರೋಡ್, ಮಲ್ಲೇಶ್ವರಂ, ಬೆಂಗಳೂರು
ನಿಮ್ಮ ಸಮಸ್ಯೆಗಳಿಗೆ ಕಾಶಿ ತಾಂತ್ರಿಕ ಅಘೋರಿ, ನಾಗಸಾಧುಗಳ ವಿಶೇಷ ಪ್ರಯೋಗಗಳಾದ ಮಹಾರುದ್ರ ಪೂಜೆ, ಮಂಡಲ ಪೂಜೆ, ಅಷ್ಟ ದಿಗ್ಬಂಧನೆಯ ಪೂಜೆಯಿಂದ 11 ದಿನಗಳಲ್ಲಿ ಪರಿಹಾರ ಶತಸಿದ್ಧ.
ಹೆಸರಾಂತ ವಂಶಪಾರಂಪರ್ಯ ಜ್ಯೋತಿಷ್ಯರು ಪಂಡಿತ್ ಡಿ.ಎಸ್ ಜೋಷಿ ತಮ್ಮ 25 ವರ್ಷಗಳ ಅನುಭವದಲ್ಲಿ 20,000 ಕ್ಕೂ ಹೆಚ್ಚು ಸಮಸ್ಯೆಗಳನ್ನ ಇತ್ಯರ್ಥ ಮಾಡಿ ಸಾವಿರಾರು ಕುಟುಂಬಗಳ ನೆಮ್ಮದಿಯ ಬದುಕಿಗೆ ನೆರವಾಗಿದ್ದಾರೆ.

- Advertisement -

Latest Posts

Don't Miss