Thursday, December 12, 2024

Latest Posts

ಸೌಂದರ್ಯಕ್ಕಾಗಿ ಬ್ಯೂಟಿ ಪಾರ್ಲರ್‌ಗೆ ಹೋಗೋ ಬದಲು ಈ ಚಮತ್ಕಾರಿ ವಸ್ತು ಬಳಸಿ.

- Advertisement -

ಮಹಿಳಾಮಣಿಯರು ತಮ್ಮ ಮುಖ ಚೆಂದಗಾಣಿಸಲು ಹಲವು ಪ್ರಯೋಗಗಳನ್ನು ಮಾಡುತ್ತಾರೆ. ಕೆಮಿಕಲ್ ಯುಕ್ತ ಪ್ರಾಡಕ್ಟ್‌ಗಳನ್ನ ಬಳಸುವುದರಿಂದ ಹಿಡಿದು ಬ್ಯೂಟಿ ಪಾರ್ಲರ್‌ಗೆ ಹಣ ಸುರಿಯುವವರೆಗೂ ಸೌಂದರ್ಯ ಪಡೆಯಲು ಪ್ರಯತ್ನಿಸುತ್ತಾರೆ. ಆದ್ರೆ ಈ ಎಲ್ಲವೂ ಕೆಲ ದಿನಗಳ ತನಕ ಒಳ್ಳೆಯ ಫಲಿತಾಂಶ ನೀಡಿದ್ರೂ, ಮುಂದೆ ತ್ವಚೆಯ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಹೆಚ್ಚಿರುತ್ತದೆ.

ಹಾಗಾಗಿ ನಾವಿವತ್ತು ಐಸ್‌ಕ್ಯೂಬ್ ಬಳಸಿ ನಿಮ್ಮ ಸೌಂದರ್ಯ ಇಮ್ಮಡಿಗೊಳಿಸಿಕೊಳ್ಳಬಹುದಾದ ಟಿಪ್ಸ್ ಕೊಡಲಿದ್ದೇವೆ. ಸೌಂದರ್ಯಯುತ ತ್ವಚೆಗಾಗಿ ಕೆಮಿಕಲ್‌ಯುಕ್ತ ಕ್ರೀಮ್‌ಗಳನ್ನ ಬಳಸೋ ಬದಲು ಕೆಲ ಹಣ್ಣು- ತರಕಾರಿ ರಸದಿಂದ ಮಾಡಿದ ಐಸ್‌ ಕ್ಯೂಬ್‌ನಿಂದ ನಿಮ್ಮ ಬ್ಯೂಟಿ ಹೆಚ್ಚಿಸಿಕೊಳ್ಳಿ.

ಐಸ್ ಕ್ಯಬ್‌ಗಳನ್ನು ಬಳಸೋ ಮೊದಲು ಕೆಲ ಸೂಚನೆಗಳನ್ನು ಅನುಸರಿಸಿ. ಮೊದಲನೆಯದಾಗಿ ಐಸ್ ಕ್ಯೂಬ್‌ಗಳನ್ನ ಡೈರೆಕ್ಟ್ ಮುಖಕ್ಕೆ ಹಚ್ಚಿಕೊಂಡು ಎಡವಟ್ಟು ಮಾಡಿಕೊಳ್ಳಬೇಡಿ. ಐಸ್‌ ಕ್ಯೂಬ್‌ಗಳನ್ನ ನಿಮ್ಮ ಕೈಗಳಿಗೆ ಹಚ್ಚಿಕೊಂಡು ಅಲರ್ಜಿ ಆಗದಿದ್ದಲ್ಲಿ ಮುಖಕ್ಕೆ ಅಪ್ಲೈ ಮಾಡಿ.

ಈ ಐಸ್‌ ಕ್ಯೂಬ್‌ಗಳನ್ನು 3-4ಕ್ಕಿಂತ ಹೆಚ್ಚು ದಿನ ಫ್ರಿಜ್‌ನಲ್ಲಿರಿಸಬೇಡಿ. ಅಲ್ಲದೇ, ಐಸ್ ಕ್ಯೂಬ್ ಮಾಡುವಾಗ ಆದಷ್ಟು ಫ್ರೆಶ್ ತರಕಾರಿ- ಹಣ್ಣು ಬಳಸಿ. ಈ ಐಸ್‌ ಕ್ಯೂಬ್‌ಗಳಲ್ಲಿ ಯಾವುದಾದರೂ ಒಂದು ಐಸ್ ಕ್ಯೂಬ್ ಬಳಸಿದರೂ ಒಳ್ಳೆ ಫಲಿತಾಂಶ ಪಡೆಯಬಹುದು.

ಐಸ್ ಕ್ಯೂಬ್ಸ್ : ಏನೂ ಹಾಕದೇ ಬರೀ ಐಸ್ ಕ್ಯೂಬ್ಸ್‌ ಬಳಸಿದ್ರೂ ಕೂಡ ನಿಮ್ಮ ತ್ವಚೆ ಆರೋಗ್ಯಕರವಾಗಿರತ್ತೆ. ಪ್ರತಿನಿತ್ಯ ಬೆಳಿಗ್ಗೆ ಐಸ್‌ಕ್ಯೂಬ್‌ನಿಂದ ನಿಮ್ಮ ಮುಖವನ್ನು ರಬ್ ಮಾಡಿಕೊಳ್ಳಿ.

ಹಾಲಿನ ಐಸ್‌ ಕ್ಯೂಬ್ಸ್ : ಪ್ರತಿದಿನ ನಾವು ಹಾಲಿನ ಬಳಕೆಯಂತೂ ಮಾಡೇ ಮಾಡ್ತೀವಿ. ಅದರೊಂದಿಗೆ ಔಷಧಿಯ ಗುಣವಿರುವ ಜೇನುತುಪ್ಪದ ಬಳಕೆಯೂ ಅತ್ಯಗತ್ಯ. ಒಂದು ಗ್ಲಾಸ್ ಹಾಲಿಗೆ ಒಂದು ಸ್ಪೂನ್ ಜೇನುತುಪ್ಪ ಹಾಕಿ ಮಿಶ್ರಣ ಮಾಡಿ, ಈ ಮಿಶ್ರಣವನ್ನ ಐಸ್ ಕ್ಯೂಬ್ ಮಾಡಿ ಬಳಸಿ.

ಪಪಾಯಾ ಐಸ್ ಕ್ಯೂಬ್ಸ್ : ಎಲ್ಲಾ ಸೀಸನ್‌ನಲ್ಲೂ ಯತೇಚ್ಛವಾಗಿ ಸಿಗುವ ಹಣ್ಣು ಅಂದ್ರೆ ಅದು ಪಪಾಯಾ. ಈ ಹಣ್ಣನ್ನ ಹಲವು ಸೌಂದರ್ಯ ವರ್ಧಕಗಳಲ್ಲೂ ಬಳಸಲಾಗತ್ತೆ. ಚಿಕ್ಕ ಪಪ್ಪಾಯಿ ಹಣ್ಣಿನ ತುಂಡನ್ನ ಮಿಕ್ಸಿಗೆ ಹಾಕಿ ನುಣ್ಣಗೆ ರುಬ್ಬಿ, ಐಸ್ ಕ್ಯೂಬ್ ತಯಾರಿಸಿ ಬಳಸಿ.

ಸೌತೆಕಾಯಿ ಐಸ್‌ ಕ್ಯೂಬ್ಸ್ : ಬ್ಯೂಟಿ ಮೆಂಟೇನ್ ಮಾಡುವವರು ಹೆಚ್ಚಾಗಿ ಬಳಸುವ ತರಕಾರಿ ಅಂದ್ರೆ ಸೌತೇಕಾಯಿ. ಸೌತೇಕಾಯಿ ಐಸ್ ಕ್ಯೂಬ್ ನಿಮ್ಮ ತ್ವಚೆಯ ಹೊಳಪು ಕಾಪಾಡುವುದರಲ್ಲಿ ಸಹಕಾರಿಯಾಗಿದೆ. ಸೌತೇಕಾಯಿಯನ್ನ ತುರಿದು ಇದರ ಜೊತೆ 3 ಸ್ಪೂನ್ ರೋಸ್ ವಾಟರ್, 4 ಸ್ಪೂನ್ ನಿಂಬೆರಸ ಮಿಶ್ರಣ ಮಾಡಿ ಚೆನ್ನಾಗಿ ರುಬ್ಬಿ, ಐಸ್ ಟ್ರೇನಲ್ಲಿ ಸೆಟ್ ಮಾಡಿ, ಐಸ್ ಕ್ಯೂಬ್ಸ್ ಬಳಸಿ.

ಬೀಟ್‌ರೂಟ್ ಐಸ್‌ ಕ್ಯೂಬ್ಸ್ : ಸಿಪ್ಪೆ ತೆಗೆದ ಚಿಕ್ಕ ತುಂಡು ಬೀಟ್ರೂಟನ್ನು ತುರಿದು ಮಿಕ್ಸಿ ಮಾಡಿ, ಈ ಮಿಶ್ರಣಕ್ಕೆ ಎರಡು ಸ್ಪೂನ್ ನಿಂಬೆರಸ ಮತ್ತು ಒಂದು ಸ್ಪೂನ್ ಮುಲ್ತಾನಿ ಮಿಟ್ಟಿ ಸೇರಿಸಿ. ಇದನ್ನ ಐಸ್ ಟ್ರೇಗೆ ಹಾಕಿ ಐಸ್ ಕ್ಯೂಬ್ಸ್ ತಯಾರಿಸಿ ಬಳಸಿ.

ಟೊಮೆಟೋ ಐಸ್ ಕ್ಯೂಬ್ಸ್ : ಎರಡು ಟೊಮೆಟೋ ತೆಗೆದುಕೊಂಡು ಅದನ್ನ ಚೆನ್ನಾಗಿ ತೊಳೆದು ಸಣ್ಣ ಸಣ್ಣ ತುಂಡುಗಳಾಗಿ ಕತ್ತರಿಸಿ. ಈ ತುಂಡುಗಳಿಗೆ ನೀರು ಹಾಕದೇ ಮಿಕ್ಸಿಯಲ್ಲಿ ಹಾಕಿ ಚೆನ್ನಾಗಿ ರುಬ್ಬಿ. ಈ ಮಿಶ್ರಣಕ್ಕೆ ಅರ್ಧ ಚಮಚ ಅರಿಷಿಣ ಪುಡಿ, ಒಂದು ಸ್ಪೂನ್ ನಿಂಬೆರಸ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಈ ಮಿಶ್ರಣದಿಂದ ಐಸ್ ಕ್ಯೂಬ್ಸ್ ತಯಾರಿಸಿ ಪ್ರತಿದಿನ ಉಪಯೋಗಿಸಿ.

ಶ್ರಾವಣಿ ಸೋಮಯಾಜಿ, ಕರ್ನಾಟಕ ಟಿವಿ

https://youtu.be/5gb4sNwZBkE

https://youtu.be/nwms0yDZvHc

- Advertisement -

Latest Posts

Don't Miss