ನಾವು ಹಲವು ಥರದ ಹಣ್ಣುಗಳನ್ನ ತಿಂದಿರ್ತೀವಿ. ಅಂಥ ಹಣ್ಣುಗಳಲ್ಲಿ ನೇರಳೆ ಹಣ್ಣು ಕೂಡಾ ಒಂದು. ರುಚಿಯಾದ ನೇರಳೆ ಹಣ್ಣು ಆರೋಗ್ಯಕ್ಕೂ ಒಳ್ಳೆಯದು. ಆದ್ರೆ ಇದರ ಜೊತೆಗೆ ಇದರ ಬೀಜದ ಸೇವನೆಯಿಂದ ಕೂಡ ಆರೋಗ್ಯಕ್ಕೆ ಲಾಭವಿದೆ ಅನ್ನೋದು ಹಲವರಿಗೆ ಗೊತ್ತಿಲ್ಲ. ಹಾಗಾದ್ರೆ ಜಾಮೂನ್ ಬೀಜದಿಂದ ಆರೋಗ್ಯಕ್ಕೇನು ಲಾಭ ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
ನೇರಳೆ ಹಣ್ಣಿನ ಬೀಜವನ್ನು ಒಣಗಿಸಿ, ಅದರ ಪೌಡರ್ ತಯಾರಿಸಲಾಗತ್ತೆ. ಆ ಪೌಡರ್ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ನೀವು ಈ ಪೌಡರನ್ನು ಮನೆಯಲ್ಲಿಯೇ ತಯಾರಿಸಬಹುದು. ನೇರಳೆ ಬೀಜವನ್ನು ಒಣಗಿಸಿ, ಅದನ್ನ ಮಿಕ್ಸಿಗೆ ಹಾಕಿ ಪುಡಿ ಮಾಡಿ. ಇಲ್ಲವಾದಲ್ಲಿ ಕೈಯಿಂದಲೇ ಜಜ್ಜಿ ಪುಡಿ ಮಾಡಬಹುದು. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಒಂದು ಸ್ಪೂನ್ ನೇರಳೆ ಪುಡಿ ಸೇವಿಸಿ ಮತ್ತು ಒಂದು ಗ್ಲಾಸ್ ಉಗುರು ಬೆಚ್ಚಗಿನ ನೀರು ಕುಡಿಯಿರಿ.
ಇದರಿಂದ ಶುಗರ್ ಪೇಶೆಂಟ್‌ಗಳಿಗೆ ಒಳ್ಳೆಯ ಲಾಭವಿದೆ. ನೇರಳೆ ಪೌಡರ್ ಮತ್ತು ಉಗುರು ಬೆಚ್ಚಗಿನ ನೀರನ್ನು ಸೇವಿಸುವುದರಿಂದ ಶುಗರ್ ಕಂಟ್ರೋಲಿಗೆ ಬರುತ್ತದೆ. ನೀವು ಪ್ರತಿದಿನವಲ್ಲದಿದ್ದರೂ, ಕೆಲವು ದಿನವಾದ್ರೂ ನೇರಳೆ ಹಣ್ಣಿನ ಸೇವನೆ ಮಾಡಬೇಕು. ಇದರಿಂದ ಶುಗರ್ ಬರುವುದನ್ನ ತಡೆಗಟ್ಟಬಹುದು.
ನೇರಳೆ ಹಣ್ಣಿನ ಸೇವನೆಯೂ ಆರೋಗ್ಯಕ್ಕೆ ಒಳ್ಳೆಯದು. ಇದರ ಸೇವನೆಯಿಂದ ದೇಹದಲ್ಲಿ ಹಿಮೋಗ್ಲೋಬಿನ್ ಪ್ರಮಾಣ ಹೆಚ್ಚುತ್ತದೆ. ಇದು ಐರನ್ ಮತ್ತು ವಿಟಾಮಿನ್ ಸಿ ಯಿಂದ ಭರಪೂರವಾಗಿದ್ದು, ಅನೇಮಿಯಾವನ್ನ ತಡೆಯುವಲ್ಲಿ ಸಹಕಾರಿಯಾಗಿದೆ. ಜಾಮೂನ್ ಸೇವನೆಗೆ ಸರಿಯಾದ ಸಮಯ ಅಂದ್ರೆ, ಬೆಳಿಗ್ಗೆ ತಿಂಡಿಯ ಬಳಿಕ ಮತ್ತು ಮಧ್ಯಾಹ್ನ ಊಟದ ಮೊದಲು, ಅಂದ್ರೆ ಮಿಡ್ ಡೇ ಬ್ರೇಕ್ ಇದ್ದಾಗ ನೀವು ನೇರಳೆ ಸೇವಿಸಿ.

