ಕಿವಿ ಫ್ರೂಟ್.. ವಿಟಾಮಿನ್ ಸಿ, ವಿಟಾಮಿನ್ ಕೆ, ವಿಟಾಮಿನ್ ಎ, ಪೊಟ್ಯಾಷಿಯಂನಿಂದ ಭರಪೂರವಾಗಿದೆ.

ಸೌಂದರ್ಯ ಮತ್ತು ಆರೋಗ್ಯ ಕಾಪಾಡುವಲ್ಲಿ ಕಿವಿ ಫ್ರೂಟ್ ಪ್ರಮುಖ ಪಾತ್ರ ವಹಿಸುತ್ತದೆ. ಹಾಗಾದ್ರೆ ಕಿವಿ ಫ್ರೂಟ್ ಬಳಕೆಯ ಉಪಯೋಗವೇನು ಅನ್ನೋದನ್ನ ನೋಡೋಣ ಬನ್ನಿ..
ದೇಹದಲ್ಲಿ ಹಿಮೋಗ್ಲೋಬಿನ್ ಕಡಿಮೆಯಾದಾಗ ಮನುಷ್ಯನ ಆರೋಗ್ಯ ಹದಗೆಡುತ್ತದೆ. ಇಂಥ ಸಮಯದಲ್ಲಿ ದಿನಕ್ಕೆ ಒಂದು ಕಿವಿ ಫ್ರೂಟ್ ತಿಂದರೂ ಸಾಕು. ಇದು ನಿಮ್ಮ ದೇಹಕ್ಕೆ ಅಗತ್ಯವಿರುವ ಹಿಮೋಗ್ಲೋಬಿನ್ ಅಂಶ ನೀಡಿ, ನಿಮ್ಮ ಆರೋಗ್ಯ ಕಾಪಾಡುತ್ತದೆ.
ರೋಗ ನಿರೋಧಕ ಶಕ್ತಿ ಹೆಚ್ಚಿಸಿ, ಪದೇ ಪದೇ ಆಗುವ ನೆಗಡಿ, ಕೆಮ್ಮನ್ನ ಕಡಿಮೆ ಮಾಡುವುದರಲ್ಲಿ ಕಿವಿ ಹಣ್ಣು ಸಹಕಾರಿಯಾಗಿದೆ.
ನಿಯಮಿತವಾಗಿ ಕಿವಿ ಹಣ್ಣಿನ ಸೇವನೆ ಮಾಡುವುದರಿಂದ ತೂಕ ಇಳಿಸಿಕೊಳ್ಳಬಹುದು. ಅಲ್ಲದೇ ಹೊಟ್ಟೆಗೆ ಸಂಬಂಧಿಸಿದ ಸಣ್ಣಪುಟ್ಟ ಸಮಸ್ಯೆಯನ್ನೂ ಕಿವಿ ಹಣ್ಣು ದೂರ ಮಾಡುತ್ತದೆ.
ಸಂಧಿವಾತದ ನೋವು ನಿವಾರಿಸುವಲ್ಲಿ ಕಿವಿ ಹಣ್ಣು ಉಪಯುಕ್ತವಾಗಿದೆ.
ಕಿವಿ ಹಣ್ಣಿನ ಸೇವನೆಯಿಂದ ನಮ್ಮ ದೇಹದ ಕೆಟ್ಟ ಕೊಲೆಸ್ಟ್ರಾಲ್ ಹೋಗಿ ಒಳ್ಳೆಯ ಕೊಲೆಸ್ಟ್ರಾಲ್ ಹೆಚ್ಚಾಗುತ್ತದೆ. ಹೃದಯ ಸಮಸ್ಯೆ ಇದ್ದಲ್ಲಿ ಕಿವಿ ಹಣ್ಣು ಸೇವಿಸಿ.
ಒಳ್ಳೆಯ ನಿದ್ದೆ ಬರಬೇಕೆಂದರೆ, ನಿಯಮಿತವಾಗಿ ಕಿವಿ ಫ್ರೂಟ್ ತಿನ್ನಬೇಕು. ಮಲಗುವ ಮುಂಚೆ ಕಿವಿ ಹಣ್ಣಿನ ಸೇವನೆ ಮಾಡಿದ್ರೆ, ಆರೋಗ್ಯಕರವಾದ ನಿದ್ರೆ ನಿಮ್ಮದಾಗುತ್ತದೆ. ಇದು ವೈಜ್ಞಾನಿಕವಾಗಿ ಸಾಬೀತಾಗಿದೆ.
ಮಳೆಗಾಲದಲ್ಲಿ ನೀವು ಜ್ವರ ಬಂದಾಗ ವೈದ್ಯರ ಬಳಿ ಹೋದರೆ ಅವರು ನಿಮಗೆ ಕೆಲ ಬಾರಿ ಕಿವಿ ಫ್ರೂಟ್ ತಿನ್ನಿ ಎಂಬ ಸಲಹೆ ಕೊಟ್ಟಿರುತ್ತಾರೆ. ಏಕೆಂದರೆ ಡೆಂಗ್ಯೂದಂತಹ ಜ್ವರವನ್ನ ಹೊಡೆದೋಡಿಸಲುವಲ್ಲಿ ಕಿವಿ ಫ್ರೂಟ್ ಪ್ರಮುಖ ಪಾತ್ರ ವಹಿಸುತ್ತದೆ. ಆದ್ದರಿಂದ ಬೇಸಿಗೆಗಿಂತ ಮಳೆಗಾಲ ಶುರುವಾದಾಗ ಕಿವಿ ಹಣ್ಣಿನ ಬೆಲೆ ದುಪ್ಪಟ್ಟಾಗುತ್ತದೆ.
ನಮ್ಮ ಸೌಂದರ್ಯವನ್ನ ಇಮ್ಮಡಿಗೊಳಿಸುವುದರಲ್ಲಿಯೂ ಕಿವಿ ಹಣ್ಣು ಸಹಕಾರಿಯಾಗಿದೆ.
ಶ್ರಾವಣಿ ಸೋಮಯಾಜಿ, ಕರ್ನಾಟಕ ಟಿವಿ

ಶ್ರೀ ಸಾಯಿ ಕೃಷ್ಣ ಜ್ಯೋತಿಷ್ಯಾಲಯ, ಪಂಡಿತ್ ಡಿ.ಎಸ್ ಜೋಷಿ – 9731355538
ನಿಮ್ಮ ಸಮಸ್ಯೆಗಳಾದ ಉದ್ಯೋಗ, ಸತಿ-ಪತಿ ಕಲಹ, ಮದುವೆ, ಪ್ರೇಮ ವಿಚಾರ, ವಶೀಕರಣ ಯಾವುದೇ ಕಠಿಣ-ಕ್ಲಿಷ್ಟ ಸಂಕಷ್ಟಗಳಿಗೆ ಸಂಪರ್ಕಿಸಿ.
ವಿಳಾಸ : ಸಾಯಿಬಾಬಾ ದೇವಸ್ಥಾನ ಎದುರು, 15ನೇ ಕ್ರಾಸ್, ಬಸ್ ನಿಲ್ದಾಣದ ಪಕ್ಕ, ಸಂಪಿಗೆ ರೋಡ್, ಮಲ್ಲೇಶ್ವರಂ, ಬೆಂಗಳೂರು
ನಿಮ್ಮ ಸಮಸ್ಯೆಗಳಿಗೆ ಕಾಶಿ ತಾಂತ್ರಿಕ ಅಘೋರಿ, ನಾಗಸಾಧುಗಳ ವಿಶೇಷ ಪ್ರಯೋಗಗಳಾದ ಮಹಾರುದ್ರ ಪೂಜೆ, ಮಂಡಲ ಪೂಜೆ, ಅಷ್ಟ ದಿಗ್ಬಂಧನೆಯ ಪೂಜೆಯಿಂದ 11 ದಿನಗಳಲ್ಲಿ ಪರಿಹಾರ ಶತಸಿದ್ಧ.
ಹೆಸರಾಂತ ವಂಶಪಾರಂಪರ್ಯ ಜ್ಯೋತಿಷ್ಯರು ಪಂಡಿತ್ ಡಿ.ಎಸ್ ಜೋಷಿ ತಮ್ಮ 25 ವರ್ಷಗಳ ಅನುಭವದಲ್ಲಿ 20,000 ಕ್ಕೂ ಹೆಚ್ಚು ಸಮಸ್ಯೆಗಳನ್ನ ಇತ್ಯರ್ಥ ಮಾಡಿ ಸಾವಿರಾರು ಕುಟುಂಬಗಳ ನೆಮ್ಮದಿಯ ಬದುಕಿಗೆ ನೆರವಾಗಿದ್ದಾರೆ.

