Friday, July 4, 2025

Latest Posts

ಸೋರೇಕಾಯಿ ಜ್ಯೂಸ್ ಕುಡಿಯುವುದರಿಂದ ಆರೋಗ್ಯಕ್ಕೇನು ಲಾಭ..?

- Advertisement -

ನಾವು ನೀವೆಲ್ಲ, ಕಿತ್ತಳೆ, ಸೇಬು, ಮಾವಿನ ಹಣ್ಣು, ಕ್ಯಾರೆಟ್, ಕಲ್ಲಂಗಡಿ ಹಣ್ಣು ಇವೆಲ್ಲದರ ಜ್ಯೂಸ್ ಕುಡಿದಿರ್ತೀವಿ. ಆದ್ರೆ ನೀವು ಯಾವತ್ತಾದ್ರೂ ಸೋರೇಕಾಯಿ ಜ್ಯೂಸ್ ಕುಡಿದಿದ್ದೀರಾ..? ಸೋರೇಕಾಯಿ ಜ್ಯೂಸ್ ಕುಡಿಯುವುದರಿಂದ ಆರೋಗ್ಯಕ್ಕೆ ಏನು ಲಾಭ ಅನ್ನೋದನ್ನ ತಿಳಿಯೋಣ ಬನ್ನಿ..

ಸೋರೇಕಾಯಿ ಜ್ಯೂಸ್ ಕುಡಿಯಲು ಅಷ್ಟೊಂದು ಟೇಸ್ಟಿಯಾಗಿರುವುದಿಲ್ಲ. ಆದ್ದರಿಂದ ನೀವು ಬೇಕಾದ್ರೆ ಅದಕ್ಕೆ ಕೊಂಚ ನಿಂಬೆರಸ, ಪುದೀನಾ ಎಲೆ, ತುಳಸಿ ಎಲೆ, ಕೊತ್ತೊಂಬರಿ ಸೊಪ್ಪು, ಸೇಂಧವ ಲವಣ ಬೆರೆಸಿ ಜ್ಯೂಸ್ ಮಾಡಿ ಕುಡಿಯಬಹುದು. ಅಥವಾ ಸೇಬುಹಣ್ಣನ್ನೂ ಸೇರಿಸಬಹುದು.

ಜೀರ್ಣಕ್ರಿಯೆ ಸಮಸ್ಯೆ, ಗ್ಯಾಸ್ಟ್ರಿಕ ಸಮಸ್ಯೆ ನಿವಾರಣೆ ಮಾಡುವಲ್ಲಿ ಸೋರೇಕಾಯಿ ಜ್ಯೂಸ್ ಸಹಕಾರಿಯಾಗಿದೆ.
ಅಲ್ಲದೇ, ಸೋರೇಕಾಯಿ ಜ್ಯೂಸ್ ಸೇವನೆಯಿಂದ ತ್ವಚೆಯ ಕಾಂತಿ ಹೆಚ್ಚುತ್ತದೆ. ನಿಮ್ಮ ತ್ವಚೆ ಆರೋಗ್ಯಕರವಾಗಿರುತ್ತದೆ.

ಸೋರೇಕಾಯಿಯ ಪಲ್ಯ ಮಾಡುವ ವೇಳೆ ಅದಕ್ಕೆ ಹೆಚ್ಚು ಮಸಾಲೆ ಪದಾರ್ಥವನ್ನು ಹಾಕುವುದರಿಂದ ಆರೋಗ್ಯಕ್ಕೆ ಉತ್ತಮ ಲಾಭ ದೊರಕುವುದಿಲ್ಲ.

https://youtu.be/VgMi86sGmAg

ಆಯುರ್ವೇದದ ಪ್ರಕಾರ ಅಲ್ಸರ್ ಸಮಸ್ಯೆ ಇದ್ದಾಗ ಸೋರೇಕಾಯಿ ಜ್ಯೂಸ್ ಕುಡಿಯಬೇಕಂತೆ.
ಹೃದಯದ ಆರೋಗ್ಯ ಉತ್ತಮವಾಗಿರಲು ಸೋರೇಕಾಯಿ ಜ್ಯೂಸ್ ಸಹಕಾರಿಯಾಗಿದೆ.

ಈ ಜ್ಯೂಸ್ ಕುಡಿಯೋಕ್ಕೆ ಮುನ್ನ ಸೋರೇಕಾಯಿ ಕಹಿ ಇಲ್ಲ ಎಂಬುದನ್ನ ಖಾತ್ರಿ ಮಾಡಿಕೊಳ್ಳಿ. ಏಕೆಂದರೆ ಕಹಿ ಸೋರೇಕಾಯಿ ತಿನ್ನಲೂ ಬಾರದು, ಅದರ ಜ್ಯೂಸ್ ಕುಡಿಯಲೂ ಬಾರದು. ಇದರಿಂದ ರಕ್ತ ಸೋರಿಕೆಯಾಗಿ ಸಾವು ಸಂಭವಿಸುವ ಸಾಧ್ಯತೆ ಇರುತ್ತದೆ. ವಾರಕ್ಕೆ ಒಮ್ಮೆ ಈ ಜ್ಯೂಸ್ ಕುಡಿಯಿರಿ. ಅಗತ್ಯಕ್ಕೂ ಹೆಚ್ಚು ಸೋರೆಕಾಯಿ ಜ್ಯೂಸ್ ಕುಡಿಯಬಾರದು.

ಶ್ರಾವಣಿ ಸೋಮಯಾಜಿ, ಕರ್ನಾಟಕ ಟಿವಿ

- Advertisement -

Latest Posts

Don't Miss