Friday, November 28, 2025

Latest Posts

ನೀವು ಪಪ್ಪಾಯಿ ಪ್ರೀಯರಾ..? ಹಾಗಾದ್ರೆ ಈ ಸ್ಟೋರಿ ಖಂಡಿತ ಓದಿ..!

- Advertisement -

ಪೋಷಕಾಂಶಗಳ ಆಗರ ಅಂತಾ ಕರಿಯೋ ಪಪ್ಪಾಯಿ ಹಣ್ಣು ಆರೋಗ್ಯಕರವಷ್ಟೇ ಅಲ್ಲದೇ, ಸೌಂದರ್ಯಕರವೂ ಆಗಿದೆ. ಸೆಲೆಬ್ರಿಟಿಗಳ ಹೊಳೆಯುವ ತ್ವಚೆಯ ರಹಸ್ಯವೂ ಕೂಡ ಪಪ್ಪಾಯಿ ಹಣ್ಣಿನಲ್ಲಡಗಿದೆ. ಹಾಗಾದ್ರೆ ಪಪ್ಪಾಯಿ ಹಣ್ಣಿನ ಸೇವನೆಯ ಲಾಭಗಳೇನು ಅನ್ನೋದನ್ನ ನೋಡೋಣ ಬನ್ನಿ.

1.. ಎಲ್ಲಾ ಸೀಸನ್‌ನಲ್ಲೂ ಕೈಗೆಟಕುವ ಬೆಲೆಗೆ ಸಿಗುವ ಹಣ್ಣು ಅಂದ್ರೆ ಪಪ್ಪಾಯಿ. ಕಣ್ಣಿನ ಆರೋಗ್ಯಕ್ಕೆ ಪ್ಪಾಯಿ ಒಳ್ಳೆಯದು. ನೀವು ನಿಯಮಿತವಾಗಿ ಪಪ್ಪಾಯಿ ಸೇವಿಸಿದ್ದಲ್ಲಿ, ನಿಮಗೆ ಇರುಳುಗಣ್ಣಿನ ಸಮಸ್ಯೆ ಎದುರಾಗುವುದಿಲ್ಲ.

2.. ನಿಮಗೆ ಹಸಿವಾದಾಗ ಜಂಕ್ ಫುಡ್ ತಿನ್ನುವ ಬದಲು, ಪಪ್ಪಾಯಿ ಹಣ್ಣನ್ನ ಸೇವಿಸಿ. ಇದು ಆರೋಗ್ಯಕ್ಕೂ ಒಳ್ಳೆಯದಲ್ಲದೇ, ನಿಮ್ಮ ಹೊಟ್ಟೆಯೂ ತುಂಬಿಸುತ್ತದೆ.

3.. ಜೀರ್ಣಕಾರಕವಾಗಿರುವ ಪಪ್ಪಾಯಿ ಹಣ್ಣನ್ನ ನಿಯಮಿತವಾಗಿ ಸೇವಿಸಿದ್ದಲ್ಲಿ ಮಲಬದ್ಧತೆಯ ಸಮಸ್ಯೆಯಿಂದ ಮುಕ್ತಿಪಡೆಯಬಹುದು.

4.. ಪಪ್ಪಾಯಿ ಪೇಸ್ಟ್, ಅಥವಾ ಪಪ್ಪಾಯಿ ಸಿಪ್ಪೆಯಿಂದ ಫೇಸ್‌ ಪ್ಯಾಕ್, ಪೇಸ್‌ ಮಸಾಜ್‌ ಮಾಡಿಕೊಂಡ್ರೆ ಮುಖದ ಕಾಂತಿ ಹೆಚ್ಚುತ್ತದೆ. ಅಲ್ಲದೇ, ಪಪ್ಪಾಯಿ ಸೇವನೆಯಿಂದಲೂ ಸೌಂದರ್ಯ ಹೆಚ್ಚಿಸಿಕೊಳ್ಳಬಹುದು.

5.. ಕೆಲವು ಗರ್ಭಿಣಿಯರಿಗೆ ಪಪ್ಪಾಯಿ ಹಣ್ಣು ತಿಂದರೆ ಅಬಾರ್ಷನ್ ಆಗುವ ಸಾಧ್ಯತೆ ಹೆಚ್ಚಿರುತ್ತದೆ. ಆದ್ದರಿಂದ ಗರ್ಭಿಣಿಯರಿಗೆ ಪಪ್ಪಾಯಿ ಹಣ್ಣು ತಿನ್ನಲು ಕೊಡಬಾರದು.

6.. ಇನ್ನು ಹೆಣ್ಣು ಮಕ್ಕಳು ಮುಟ್ಟಿನ ಸಮಸ್ಯೆಯಿಂದ ಬಳಲುತ್ತಿದ್ದಲ್ಲಿ ವೈದ್ಯರ ಸಲಹೆ ಪಡೆದು ಪಪ್ಪಾಯಿ ಹಣ್ಣು ಸೇವಿಸಿ. ಅಲ್ಲದೇ ಮುಟ್ಟಿನ ದಿನ ಹತ್ತಿರ ಬಂದಾಗ ಪಪ್ಪಾಯಿ ಹಣ್ಣು ಸೇವಿಸಿದ್ದಲ್ಲಿ ಇದು ಪ್ರಿಪೋನ್ ಮಾತ್ರೆಯಂತೆ ಕೆಲಸ ಮಾಡಲಿದ್ದು, ಒಂದೆರಡು ದಿನ ಮುನ್ನವೇ ಮುಟ್ಟಾಗುತ್ತಾರೆ.

7.. ನಿಮ್ಮದು ಹೆಚ್ಚಿನ ಉಷ್ಣ ಹೊಂದಿರುವ ದೇಹವಾಗಿದ್ದಲ್ಲಿ, ಪಪ್ಪಾಯಿ ಸೇವಿಸದಿರಿ. ಉದಾಹರಣೆಗೆ ಉರಿಮೂತ್ರ ಸಮಸ್ಯೆ, ಪದೇ ಪದೇ ಮುಟ್ಟಾಗುವ ಸಮಸ್ಯೆ ಇದ್ದಲ್ಲಿ ಪಪ್ಪಾಯಿ ತಿನ್ನಬೇಡಿ.

8.. ಅಗತ್ಯಕ್ಕೂ ಹೆಚ್ಚಾಗಿದ್ದಲ್ಲಿ ಅಮೃತವೂ ವಿಷವೇ ಎಂಬಂತೆ ಹೆಚ್ಚಿನ ಪಪ್ಪಾಯಿ ಸೇವನೆ ಬೇಡ. ಅಲ್ಲದೇ, ಪಪ್ಪಾಯಿ ತಿಂದರೆ ನಿಮಗೆ ಅಲರ್ಜಿ ಎಂದಾದಲ್ಲಿ ವೈದ್ಯರ ಬಳಿ ಸಲಹೆ ಪಡೆಯಿರಿ.

ಶ್ರಾವಣಿ ಸೋಮಯಾಜಿ, ಕರ್ನಾಟಕ ಟಿವಿ

ಶ್ರೀ ಸಾಯಿ ಕೃಷ್ಣ ಜ್ಯೋತಿಷ್ಯಾಲಯ, ಪಂಡಿತ್ ಡಿ.ಎಸ್ ಜೋಷಿ – 9731355538
ನಿಮ್ಮ ಸಮಸ್ಯೆಗಳಾದ ಉದ್ಯೋಗ, ಸತಿ-ಪತಿ ಕಲಹ, ಮದುವೆ, ಪ್ರೇಮ ವಿಚಾರ, ವಶೀಕರಣ ಯಾವುದೇ ಕಠಿಣ-ಕ್ಲಿಷ್ಟ ಸಂಕಷ್ಟಗಳಿಗೆ ಸಂಪರ್ಕಿಸಿ.
ವಿಳಾಸ : ಸಾಯಿಬಾಬಾ ದೇವಸ್ಥಾನ ಎದುರು, 15ನೇ ಕ್ರಾಸ್, ಬಸ್ ನಿಲ್ದಾಣದ ಪಕ್ಕ, ಸಂಪಿಗೆ ರೋಡ್, ಮಲ್ಲೇಶ್ವರಂ, ಬೆಂಗಳೂರು
ನಿಮ್ಮ ಸಮಸ್ಯೆಗಳಿಗೆ ಕಾಶಿ ತಾಂತ್ರಿಕ ಅಘೋರಿ, ನಾಗಸಾಧುಗಳ ವಿಶೇಷ ಪ್ರಯೋಗಗಳಾದ ಮಹಾರುದ್ರ ಪೂಜೆ, ಮಂಡಲ ಪೂಜೆ, ಅಷ್ಟ ದಿಗ್ಬಂಧನೆಯ ಪೂಜೆಯಿಂದ 11 ದಿನಗಳಲ್ಲಿ ಪರಿಹಾರ ಶತಸಿದ್ಧ.
ಹೆಸರಾಂತ ವಂಶಪಾರಂಪರ್ಯ ಜ್ಯೋತಿಷ್ಯರು ಪಂಡಿತ್ ಡಿ.ಎಸ್ ಜೋಷಿ ತಮ್ಮ 25 ವರ್ಷಗಳ ಅನುಭವದಲ್ಲಿ 20,000 ಕ್ಕೂ ಹೆಚ್ಚು ಸಮಸ್ಯೆಗಳನ್ನ ಇತ್ಯರ್ಥ ಮಾಡಿ ಸಾವಿರಾರು ಕುಟುಂಬಗಳ ನೆಮ್ಮದಿಯ ಬದುಕಿಗೆ ನೆರವಾಗಿದ್ದಾರೆ.

- Advertisement -

Latest Posts

Don't Miss