ಸ್ಪ್ರಿಂಗ್ ಆನಿಯನ್.. ಇತ್ತೀಚಿನ ದಿನಗಳಲ್ಲಿ ರೆಸ್ಟೋರೆಂಟ್‌ಗಳಲ್ಲಿ ಹೆಚ್ಚಿಗೆ ಬಳಸಲ್ಪಡುತ್ತಿರುವ ತರಕಾರಿ. ಆದ್ರೆ ಇದನ್ನ ಹಳ್ಳಿಕಡೆ ಮೊದಲಿನಿಂದಲೂ ಪ್ರತಿದಿನ ಊಟದ ಜೊತೆ ಬಳಸಲಾಗುತ್ತಿದೆ. ಹಾಗಾದ್ರೆ ಸ್ಪ್ರಿಂಗ್ ಆನಿಯನ್ ತಿನ್ನೋದ್ರಿಂದ ಆಗೋ ಲಾಭಗಳೇನು..? ಅನ್ನೋದನ್ನ ನೋಡೋಣ..
ಸ್ಪ್ರಿಂಗ್ ಆನಿಯನ್‌ನ್ನ ಕನ್ನಡದಲ್ಲಿ ಈರುಳ್ಳಿ ಸೊಪ್ಪು ಅಂತಾ ಹೇಳಲಾಗುತ್ತದೆ. ಹಳ್ಳಿ ಕಡೆ ಜನ ರೊಟ್ಟಿ ಚಪಾತಿ ಜೊತೆಗೆ ಈ ಈರುಳ್ಳಿ ಸೊಪ್ಪನ್ನ ಸಲಾಡ್ ರೀತಿ ಬಳಸಿ ತಿಂತಾರೆ. ಇದೀಗ ಇದೇ ಈರುಳ್ಳಿ ಸೊಪ್ಪಿನ ಖಾದ್ಯ ರೆಸ್ಟೋರೆಂಟ್‌ಗಳಲ್ಲಿ ಭಾರೀ ಫೇಮಸ್ ಆಗಿದೆ. ಸ್ಪ್ರಿಂಗ್ ಆನಿಯನ್ ಸೂಪ್ ಮಾಡಲಾಗುತ್ತದೆ. ಅಲ್ಲದೇ ಮಂಚೂರಿ, ಫ್ರೈಡ್ ರೈಸ್‌ಗಳಲ್ಲಿ ಸ್ಪ್ರಿಂಗ್ ಆನಿಯನ್ ಇಲ್ಲದಿದ್ರೆ ನಡಿಯೋದೆ ಇಲ್ಲ.
ಆದ್ರೆ ಸ್ಪ್ರಿಂಗ್ ಆನಿಯನ್ ಖಾದ್ಯ ಸೇವಿಸೋ ಬದಲು, ಹಸಿ ಈರುಳ್ಳಿ ಸೊಪ್ಪು ತಿನ್ನೋದು ತುಂಬಾ ಉತ್ತಮ. ಬಿಪಿ ಇದ್ದವರು, ಈರುಳ್ಳಿ ಸೊಪ್ಪಿನಿಂದ ಸೊಪ್ಪು ಕತ್ತರಿಸಿ, ಚಿಕ್ಕ ತುಂಡು ಈರುಳ್ಳಿ ತಿಂದರೆ ಉತ್ತಮ. ನಿಯಮಿತವಾಗಿ ಚಿಕ್ಕ ಚಿಕ್ಕ ತುಂಡು ಈರುಳ್ಳಿ ಸೇವನೆ ಮಾಡುವುದರಿಂದ ಬಿಪಿ ಕಂಟ್ರೋಲಿನಲ್ಲಿರುತ್ತದೆ.
ಹೊಟ್ಟೆ ನೋವಿನ ಸಮಸ್ಯೆ ಅಥವಾ ಹುಳಿ ತೇಗು ಬರುವುದು, ಜೀರ್ಣಕ್ರಿಯೆ ಸಮಸ್ಯೆ ಇತ್ಯಾದಿ ಸಮಸ್ಯೆಗಳಿಗೆ ಈ ಈರುಳ್ಳಿ ಸೊಪ್ಪು ರಾಮಬಾಣವಾಗಿದೆ. ಊಟದ ಜೊತೆ ನಿಯಮಿತವಾಗಿ ಈರುಳ್ಳಿ ಸೊಪ್ಪು ಸೇವಿಸುವುದರಿಂದ ಜೀರ್ಣಕ್ರಿಯೆ ಉತ್ತಮವಾಗಿರುತ್ತದೆ. ಹೊಟ್ಟೆಯ ಭಾಗ ಆರೋಗ್ಯವಾಗಿರುತ್ತದೆ.
ಪದೇ ಪದೇ ನೆಗಡಿಯಾಗುವುದು, ಕಫದ ಸಮಸ್ಯೆಯಾಗುವುದು ಇತ್ಯಾದಿ ಸಮಸ್ಯೆ ಇದ್ದವರು ಊಟವಾದ ಅರ್ಧ ಗಂಟೆ ಬಳಿಕ ಈರುಳ್ಳಿ ಸೊಪ್ಪಿನ ರಸದೊಂದಿಗೆ, ಜೇನುತುಪ್ಪ ಬೆರೆಸಿ, ಒಂದು ಸ್ಪೂನ್ ಈ ಮಿಶ್ರಣವನ್ನ ಸೇವಿಸುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ.
ಪ್ರತಿ ದಿನ ಊಟದೊಂದಿಗೆ ಸ್ಪ್ರಿಂಗ್ ಆನಿಯನ್ ತಿಂದರೆ ಕ್ಯಾನ್ಸರ್‌ನಂತಹ ಮಾರಕ ರೋಗ ಬರುವುದನ್ನು ತಡೆಗಟ್ಟಬಹುದು. ನಿಮಗೆ ಈರುಳ್ಳಿ ತಿಂದರೆ ಅಲರ್ಜಿ ಎಂದಾದಲ್ಲಿ ವೈದ್ಯರ ಬಳಿ ವಿಚಾರಿಸಿ ಬಳಿಕ ಈರುಳ್ಳಿ ಸೇವಿಸುವುದು ಉತ್ತಮ.