ಇಡೀ ಪ್ರಪಂಚದಲ್ಲಿ ಹಲವು ರೀತಿಯ ಹಣ್ಣು ಹಂಪಲು ಸಿಗುತ್ತದೆ. ಅಂಥಹ ಹಣ್ಣುಗಳಲ್ಲಿ ಭಾರತದಲ್ಲಿಯೂ ಕೆಲ ಹಣ್ಣುಗಳನ್ನ ಬೆಳೆಯಲಾಗುತ್ತದೆ. ಹಾಗೆ ಬೆಳೆಯುವ ಲಾಭದಾಯಕ ಹಣ್ಣುಗಳಲ್ಲಿ ಸ್ಟಾರ್ ಫ್ರೂಟ್ ಕೂಡಾ ಒಂದು. ಈ ಹಣ್ಣು ಹುಳಿಯಾಗಿರುವ ಕಾರಣ, ಹೆಚ್ಚಿನವರು ಈ ಹಣ್ಣನ್ನ ತಿನ್ನಲು ಇಷ್ಟಪಡಲ್ಲ. ಆದ್ರೆ ಈ ಹಣ್ಣನ್ನ ತಿನ್ನುವುದರಿಂದ ಆರೋಗ್ಯಕ್ಕೆ ಸಾಕಷ್ಟು ಲಾಭಗಳಿದೆ. ಆ ಲಾಭಗಳು ಯಾವುದು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
ಹೃದಯ ಸಂಬಂಧಿ ಖಾಯಿಲೆಯಿಂದ ಬಳಲುತ್ತಿರುವವರು, ಸ್ಟಾರ್ ಫ್ರೂಟ್ಸ್ ತಿನ್ನಬಹುದು. ನಿಯಮಿತವಾಗಿ ಸ್ಟಾರ್ ಫ್ರೂಟ್ ತಿಂದ್ರೆ, ಕ್ರಮೇಣವಾಗಿ ಹೃದಯದ ಖಾಯಿಲೆ ಗುಣವಾಗುತ್ತದೆ. ಇನ್ನು ಡ್ಯಾಂಡ್ರಫ್ ಸಮಸ್ಯೆಯಿಂದ ಬಳಲುತ್ತಿರುವವರು, ಸ್ಟಾರ್ ಫ್ರೂಟನ್ನ ಮಿಕ್ಸಿ ಮಾಡಿ, ನೀರಿನೊಂದಿಗೆ ಸೇರಿಸಿ, ತಲೆಗೆ ಸ್ನಾನ ಮಾಡಬೇಕು. ಇದರಿಂದ ಡ್ಯಾಂಡ್ರಫ್ ಕಡಿಮೆಯಾಗುತ್ತದೆ. ಡ್ಯಾಂಡ್ರಫ್ ಕಡಿಮೆಯಾದರೆ, ಕೂದಲು ಉದುರುವಿಕೆ ಕಡಿಮೆಯಾಗುತ್ತದೆ. ಮತ್ತು ಕೂದಲಿನ ಬೆಳವಣಿಗೆ ಉತ್ತಮವಾಗುತ್ತದೆ.
ಇದರೊಂದಿಗೆ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಕೂಡ ಸ್ಟಾರ್ ಫ್ರೂಟ್ ಸಹಾಯ ಮಾಡುತ್ತದೆ. ಇದರಲ್ಲಿ ವಿಟಾಮಿನ್ ಸಿ ಪ್ರಮಾಣ ಹೆಚ್ಚಿರುವ ಸ್ಟಾರ್ ಫ್ರೂಟ್‌ನ ಸೇವನೆ ಮಾಡುವುದರಿಂದ ದೇಹದಲ್ಲಿ ರೋಗ ಪ್ರತಿರೋಧಕ ಶಕ್ತಿ ಹೆಚ್ಚುತ್ತದೆ. ಅಲ್ಲದೇ ಜೀರ್ಣಕ್ರಿಯೆ ಸಮಸ್ಯೆಗೂ ಇದು ರಾಮಬಾಣವಾಗಿದೆ. ಯಾರಿಗೆ ತಿಂದ ಆಹಾರ ಸರಿಯಾಗಿ ಜೀರ್ಣವಾಗುವುದಿಲ್ಲವೋ, ಅಂಥವರು ಸ್ಟಾರ್ ಫ್ರೂಟ್ ತಿನ್ನುವುದರಿಂದ ತಿಂದ ಆಹಾರ ಜೀರ್ಣವಾಗುತ್ತದೆ. ಮತ್ತು ಉದರ ಸಮಸ್ಯೆಯಿಂದ ಪರಿಹಾರ ಸಿಗುತ್ತದೆ.
ಪದೇ ಪದೇ ಕಣ್ಣು ಉರಿಯುತ್ತದೆ. ಕಣ್ಣಿನಿಂದ ನೀರು ಬರುವ ಸಮಸ್ಯೆ ಇದ್ದಲ್ಲಿ, ಅಂಥವರು ಸ್ಟಾರ್ ಫ್ರೂಟ್ ತಿನ್ನಬೇಕು. ಇದರ ಸೇವನೆಯಿಂದ ಕಣ್ಣಿನ ಸಮಸ್ಯೆಗೆ ಪರಿಹಾರ ಸಿಗುತ್ತದೆ. ಇದರ ಜ್ಯೂಸ್ ಮಾಡಿ ಕೂಡ ಸೇವಿಸಬಹುದು. ಇನ್ನು ನಿಮಗೆ ಸ್ಟಾರ್ ಫ್ರೂಟ್ ತಿಂದ್ರೆ ಅಲರ್ಜಿ ಎಂದಾದಲ್ಲಿ ಈ ಬಗ್ಗೆ ವೈದ್ಯರ ಬಳಿ ವಿಚಾರಿಸಿ, ನಂತರ ಹಣ್ಣನ್ನ ಸೇವಿಸುವುದು ಒಳಿತು.