ಸ್ಟ್ರಾಬೇರಿ ಹಣ್ಣು.. ತಿನ್ನಲು ಅಷ್ಟು ರುಚಿಕರವೆನ್ನಿಸದಿದ್ದರೂ, ಸ್ಟ್ರಾಬೇರಿ ಫ್ಲೇವರ್ ಐಸ್‌ಕ್ರೀಮ್, ಕೇಕ್, ಚಾಕ್ಲೇಟ್ಸ್, ಮಿಲ್ಕ್ ಶೇಕ್ ಎಲ್ಲರ ಫೇವರಿಟ್ ಆಗಿದೆ. ಆದ್ರೆ ಸ್ಟ್ರಾಬೇರಿ ಬರೀ ಸ್ವಾದವಲ್ಲದೇ, ಔಷಧಿಯ ಗುಣಗಳನ್ನೂ ಹೊಂದಿದೆ. ಹಾಗಾದ್ರೆ ಸ್ಟ್ರಾಬೇರಿ ತಿನ್ನುವುದರಿಂದ ಆಗುವ ಪ್ರಯೋಜನಗಳೇನು..? ಸ್ಟ್ರಾಬೇರಿ ಬಳಕೆಯಿಂದ ಲಾಭಗಳೇನು ಅನ್ನೋದನ್ನ ನೋಡೋಣ ಬನ್ನಿ..

ಚಳಿಗಾಲದಲ್ಲಿ ಸಿಗುವ ಈ ಸುಂದರ ಹಣ್ಣು, ತ್ವಚೆ ಮತ್ತು ಆರೋಗ್ಯಕ್ಕೆ ಒಳ್ಳೆಯದು.
ಸ್ಟ್ರಾಬೇರಿಯಲ್ಲಿ ವಿಟಾಮಿನ್ ಸಿ ಇರುವುದರಿಂದ ಇದು ನಿಮ್ಮ ದೇಹದಲ್ಲಿನ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ.
ಸ್ಟ್ರಾಬೇರಿಯಲ್ಲಿ ಆ್ಯಂಟಿ ಆಕ್ಸಿಡೆಂಟ್ ಇರುವುದರಿಂದ ಅದು ನಮ್ಮ ಕಣ್ಣಿನ ಆರೋಗ್ಯ ಕಾಪಾಡುವುದರಲ್ಲಿ ಸಹಕಾರಿಯಾಗಿದೆ.
ಕ್ಯಾನ್ಸರ್‌ನಿಂದ ಉಂಟಾಗುವ ಸೆಲ್‌ಗಳನ್ನ ನಾಶಪಡಿಸುವಲ್ಲಿ ಸ್ಟ್ರಾಬೇರಿ ಸಹಕಾರಿಯಾಗಿದೆ. ಇದರಲ್ಲಿ ವಿಟಾಮಿನ್ ಸಿ ಇರುವುದರಿಂದ ಇದು ಕ್ಯಾನ್ಸರ್ ಬರದಂತೆ ತಡೆಗಟ್ಟುವುದರಲ್ಲಿ ಸಹಕಾರಿಯಾಗಿದೆ.
ಮುಖದಲ್ಲಾಗುವ ಸುಕ್ಕು ತಡೆಗಟ್ಟಲು ಸ್ಟ್ರಾಬೇರಿ ಉಪಯುಕ್ತವಾಗಿದೆ. ನೀವು ಎಂದಿಗೂ ಯಂಗ್ ಆಗಿ ಕಾಣಿಸುವ ಬಯಕೆ ಹೊಂದಿದ್ದಲ್ಲಿ ವಿಟಾಮಿನ್ ಸಿ ಅಂಶವಿರುವ ಹಣ್ಣನ್ನು ಖಂಡಿತ ಸೇವಿಸಿ.
ಹಾರ್ಟ್ ಅಟ್ಯಾಕ್‌ನಿಂದ ಕಾಪಾಡುವುದಕ್ಕೆ ಸ್ಟ್ರಾಬೇರಿ ಹಣ್ಣು ಸಹಕಾರಿಯಾಗಿದೆ. ಇದರಲ್ಲಿ ಪೊಟ್ಯಾಶಿಯಂ ಇರುವುದರಿಂದ ಇದು ಹಾರ್ಟ್ ಅಟ್ಯಾಕ್ ಮತ್ತು ಸ್ಟ್ರೋಕ್ ತಡೆಯಲು ಸಹಕಾರಿಯಾಗಿದೆ.
ಹಲ್ಲಿನ ಹೊಳಪು ಹೆಚ್ಚಿಸುವಲ್ಲಿ ಸ್ಟ್ರಾಬೇರಿ ಪ್ರಮುಖ ಸ್ಥಾನ ವಹಿಸುತ್ತದೆ. ಸ್ಟ್ರಾಬೇರಿ ಹಣ್ಣಿನಿಂದ ಹಲ್ಲಿಗೆ ಮಸಾಜ್ ಮಾಡುವುದರಿಂದ ಹಳದಿತನ ತೊಲಗಿಸಿ, ಹಲ್ಲು ಬಿಳಿಯಾಗಿಸುತ್ತದೆ.
ಸಂಧಿವಾತ ನಿವಾರಣೆಯಲ್ಲೂ ಸ್ಟ್ರಾಬೇರಿ ಪ್ರಮುಖ ಪಾತ್ರವಹಿಸುತ್ತದೆ.
ಈ ಹಣ್ಣು ಫ್ಯಾಟ್ ಫ್ರೀ ಮತ್ತು ಇದರಲ್ಲಿ ಲೋಕ್ಯಾಲರಿ ಇರುವುದರಿಂದ ಇದು ತೂಕ ಇಳಿಸುವುದರಲ್ಲಿಯೂ ಸಹಕಾರಿಯಾಗಿದೆ.
ಶ್ರಾವಣಿ ಸೋಮಯಾಜಿ, ಕರ್ನಾಟಕ ಟಿವಿ

ಶ್ರೀ ಸಾಯಿ ಕೃಷ್ಣ ಜ್ಯೋತಿಷ್ಯಾಲಯ, ಪಂಡಿತ್ ಡಿ.ಎಸ್ ಜೋಷಿ – 9731355538
ನಿಮ್ಮ ಸಮಸ್ಯೆಗಳಾದ ಉದ್ಯೋಗ, ಸತಿ-ಪತಿ ಕಲಹ, ಮದುವೆ, ಪ್ರೇಮ ವಿಚಾರ, ವಶೀಕರಣ ಯಾವುದೇ ಕಠಿಣ-ಕ್ಲಿಷ್ಟ ಸಂಕಷ್ಟಗಳಿಗೆ ಸಂಪರ್ಕಿಸಿ.
ವಿಳಾಸ : ಸಾಯಿಬಾಬಾ ದೇವಸ್ಥಾನ ಎದುರು, 15ನೇ ಕ್ರಾಸ್, ಬಸ್ ನಿಲ್ದಾಣದ ಪಕ್ಕ, ಸಂಪಿಗೆ ರೋಡ್, ಮಲ್ಲೇಶ್ವರಂ, ಬೆಂಗಳೂರು
ನಿಮ್ಮ ಸಮಸ್ಯೆಗಳಿಗೆ ಕಾಶಿ ತಾಂತ್ರಿಕ ಅಘೋರಿ, ನಾಗಸಾಧುಗಳ ವಿಶೇಷ ಪ್ರಯೋಗಗಳಾದ ಮಹಾರುದ್ರ ಪೂಜೆ, ಮಂಡಲ ಪೂಜೆ, ಅಷ್ಟ ದಿಗ್ಬಂಧನೆಯ ಪೂಜೆಯಿಂದ 11 ದಿನಗಳಲ್ಲಿ ಪರಿಹಾರ ಶತಸಿದ್ಧ.
ಹೆಸರಾಂತ ವಂಶಪಾರಂಪರ್ಯ ಜ್ಯೋತಿಷ್ಯರು ಪಂಡಿತ್ ಡಿ.ಎಸ್ ಜೋಷಿ ತಮ್ಮ 25 ವರ್ಷಗಳ ಅನುಭವದಲ್ಲಿ 20,000 ಕ್ಕೂ ಹೆಚ್ಚು ಸಮಸ್ಯೆಗಳನ್ನ ಇತ್ಯರ್ಥ ಮಾಡಿ ಸಾವಿರಾರು ಕುಟುಂಬಗಳ ನೆಮ್ಮದಿಯ ಬದುಕಿಗೆ ನೆರವಾಗಿದ್ದಾರೆ.

