ಸ್ವೀಟ್ ಕಾರ್ನ್ ಅಂದ್ರೆ ಯಾರಿಗೆ ತಾನೇ ಇಷ್ಟಾ ಇಲ್ಲಾ ಹೇಳಿ.. ಕಾರ್ನ್ ಸಲಾಡ್, ಕಾರ್ನ್ ಚಾಟ್ಸ್, ಕಾರ್ನ್ ಬಜ್ಜಿ ಹೀಗೆ ವಿವಿಧ ತರಹದ ಖಾದ್ಯಗಳನ್ನ ಕಾರ್ನ್‌ನಿಂದ ಮಾಡಬಹುದು.. ಆದ್ರೆ ಸ್ವೀಟ್ ಕಾರ್ನ್ ಬೇಯಿಸಿ ತಿನ್ನುವುದು ಎಲ್ಲಕ್ಕಿಂತ ಉತ್ತಮ. ಹಾಗಾದ್ರೆ ಸ್ವೀಟ್ ಕಾರ್ನ್ ತಿನ್ನೋದ್ರಿಂದ ನಮಗಾಗುವ ಆರೋಗ್ಯ ಲಾಭಗಳೇನು ಅನ್ನೋದನ್ನ ನೋಡೋಣ ಬನ್ನಿ..
ನೀವು ಚಪಾತಿ ತಿನ್ನೋದನ್ನ ಇಷ್ಟ ಪಡ್ತಿದ್ರೆ, ಗೋದಿ ಹಿಟ್ಟಿನ ಜೊತೆ ಮೆಕ್ಕೆ ಜೋಳದ ಹಿಟ್ಟನ್ನ ಮಿಕ್ಸ್ ಮಾಡಿ ಆ ಹಿಟ್ಟಿನ ಮಾಡಿದ ಚಪಾತಿ ತಿಂದ್ರೆ ಉತ್ತಮ ಪೋಶಕಾಂಶಗಳು ನಿಮ್ಮ ದೇಹ ಸೇರುತ್ತದೆ. ಇದರಿಂದ ನಿಮ್ಮ ಆರೋಗ್ಯ ಉತ್ತಮವಾಗಿಯೂ, ನೀವು ಶಕ್ತಿವಂತರಾಗಿಯೂ ಇರುತ್ತೀರಿ.
ಸ್ವೀಟ್ ಕಾರ್ನ್‌ನಲ್ಲಿ ವಿಟಾಮಿನ್ ಎ ಇರುವುದರಿಂದ ಕಣ್ಣಿನ ಸಮಸ್ಯೆಗೆ ಇದು ಸಹಕಾರಿಯಾಗಿದೆ. ಕಣ್ಣಿನ ಸಮಸ್ಯೆ ಇದ್ದವರು ನಿಯಮಿತವಾಗಿ ಬೇಯಿಸಿ ಸ್ವೀಟ್ ಕಾರ್ನ್ ತಿಂದರೆ ಉತ್ತಮ.
ಉದರ ಸಮಸ್ಯೆ, ಜೀರ್ಣಕ್ರಿಯೆ ಸಮಸ್ಯೆ, ಹೊಟ್ಟೆಗೆ ಸಂಬಂಧಿಸಿದ ಇತ್ಯಾದಿ ಸಮಸ್ಯೆಗಳಿಗೆ ಮೆಕ್ಕೆ ಜೋಳ ರಾಮಬಾಣವಾಗಿದೆ.
ಇನ್ನು ಕೆಲವರು ಸ್ವೀಟ್ ಕಾರ್ನ್ ಬೇಯಿಸಿದ ಬಳಿಕ ಎಲ್ಲರೂ ಒಂದು ತಪ್ಪನ್ನ ಮಾಡುತ್ತಾರೆ. ಅದೇನೆಂದರೆ ಅದಕ್ಕೆ ಬಳಸಿನ ನೀರನ್ನ ಎಸೆದುಬಿಡುತ್ತಾರೆ. ಆದ್ರೆ ಆ ನೀರಿನಲ್ಲೇ ಪೋಷಕಾಂಶವಿರುತ್ತದೆ. ಸ್ವೀಟ್ ಕಾರ್ನ್ ಸೇವಿಸಿದ ಬಳಿಕ, ಅದನ್ನ ಬೇಯಿಸಿದ ನೀರನ್ನ ಕೂಡ ಸೇವಿಸಬೇಕು. ಇದರಿಂದ ಮೂತ್ರದ್ವಾರದ ಬಳಿ ಏನಾದರೂ ಸಮಸ್ಯೆ ಇದ್ದರೆ ನಿವಾರಣೆಯಾಗುತ್ತದೆ.
ಸಲಾಡ್ ಮಾಡಿ ತಿನ್ನಲು ಹಸಿ ಕಾರ್ನ್ ಉತ್ತಮವೆಂದು ಹೆಚ್ಚು ಹಸಿ ಕಾರ್ನ್ ಸೇವಿಸಿದರೆ ಹೊಟ್ಟೆ ನೋವಿನ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಅಲ್ಲದೇ ನಿಮಗೆ ಸ್ವೀಟ್ ಕಾರ್ನ್ ತಿಂದರೆ ಅಲರ್ಜಿ ಎಂದಾದಲ್ಲಿ ವೈದ್ಯರ ಬಳಿ ವಿಚಾರಿಸಿ ನಂತರ ಸ್ವೀಟ್ ಕಾರ್ನ್ ಸೇವಿಸಿ.

