ನಿಸರ್ಗದಿಂದ ಸಿಕ್ಕ ಕೊಡುಗೆಗಳಲ್ಲಿ ಎಳನೀರು ಕೂಡಾ ಒಂದು. ದೇಹಕ್ಕೆ ತಂಪು ಒದಗಿಸೋ ಈ ಪೇಯ ರುಚಿಕರೂ ಹೌದು, ಆರೋಗ್ಯಕರವೂ ಹೌದು. ಬೇಸಿಗೆಯಲ್ಲಿ ದೇಹವನ್ನ ತಂಪುಗೊಳಿಸುವುದಕ್ಕೆ ಸಾಫ್ಟ್ ಡ್ರಿಂಕ್ಸ್, ಜ್ಯೂಸ್‌ಗಳನ್ನ ಕುಡಿಯೋ ಬದಲು ದಿನಕ್ಕೊಂದು ಎಳನೀರು ಸೇವಿಸಿದರೆ ಸಾಕು. ಉತ್ತಮ ಆರೋಗ್ಯ ನಿಮ್ಮದಾಗುತ್ತದೆ. ಹಾಗಾದ್ರೆ ಬನ್ನಿ ಎಳನೀರು ಕುಡಿಯುವುದರಿಂದ ಏನೇನು ಪ್ರಯೋಜನ ಅನ್ನೋದರ ಬಗ್ಗೆ ತಿಳಿಯೋಣ.

ಉರಿಮೂತ್ರ ಸಮಸ್ಯೆ ಇದ್ದವರು ನಿಯಮಿತವಾಗಿ ಎಳನೀರು ಸೇವಿಸುವುದರಿಂದ ಆರೋಗ್ಯಕ್ಕೆ ಒಳ್ಳೆಯ ಲಾಭವಿದೆ.
ನಿಮ್ಮ ಸೌಂದರ್ಯ ಅಭಿವೃದ್ಧಿಯಾಗಬೇಕು, ನೀವು ಕೂಡಾ ಬೆಳ್ಳಗೆ ಕಾಣಬೇಕು. ಮೊಡವೆ ಕಲೆಗಳಿಲ್ಲದ ತ್ವಚೆ ನಿಮ್ಮದಾಗಬೇಕು ಅಂದ್ರೆ ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಎಳನೀರು ಕುಡಿಯಿರಿ.
ಎಳನೀರು ತಂಪು ಗುಣವುಳ್ಳದಾಗಿದ್ದು, ನಿಮ್ಮ ದೇಹದ ಉಷ್ಣತೆ ಜಾಸ್ತಿಯಾಗಿ ಸಮಸ್ಯೆಯಾಗಿದ್ದಲ್ಲಿ ಎಳನೀರು ಸೇವಿಸಿ.
ಎಳನೀರು ದೇಹದಲ್ಲಿರುವ ಕೊಳೆಯನ್ನ ಮೂತ್ರದ ಮೂಲಕ ಹೊರಹಾಕುವುದರಿಂದ, ನಿಯಮಿತವಾಗಿ ನೀವಿದರ ಸೇವನೆ ಮಾಡಿದ್ದಲ್ಲಿ ಕೂದಲು ಉದುರುವ ಸಮಸ್ಯೆಯಿಂದ ಕೂಡ ಮುಕ್ತಿ ಪಡೆಯಬಹುದು.
ಮುಖದ ಮೇಲೆ ಮೊಡವೆಯ ಕಲೆ ಇದ್ದಲ್ಲಿ, ಎಳನೀರಿನ ಜೊತೆ ಜೇನುತುಪ್ಪ ಮಿಕ್ಸ್ ಮಾಡಿ ಮಸಾಜ್ ಮಾಡಿಕೊಂಡು 15 ನಿಮಿಷದ ಬಳಿಕ ಮುಖ ತೊಳೆದುಕೊಳ್ಳಿ.
ದೇಹದ ತೂಕ ಇಳಿಸುವಲ್ಲೂ ಕೂಡ ಎಳನೀರು ಸಹಕಾರಿಯಾಗಿದೆ. ಪ್ರತಿದಿನ ಬೆಳಿಗ್ಗೆ ಯೋಗಾಸನ ಅಥವಾ ಎಕ್ಸ್‌ಸೈಸ್ ಬಳಿಕ ಒಂದು ಎಳನೀರು ಸೇವಿಸಿದರೆ, ದೇಹದ ಬೊಜ್ಜು ಕರಗುತ್ತದೆ.
ಅಥವಾ ಊಟಕ್ಕೂ ಮುನ್ನ ಒಂದು ಎಳನೀರು ಸೇವಿಸಿದ್ದಲ್ಲಿ, ಊಟದ ಪ್ರಮಾಣ ಕಡಿಮೆಯಾಗಿ ದೇಹದ ತೂಕ ಇಳಿಯುತ್ತದೆ.
ಇನ್ನು ಯಾವುದೇ ಕಾರಣಕ್ಕೂ ಸಂಜೆಯ ಬಳಿಕ ಎಳನೀರು ಸೇವಿಸಬಾರದು. ಅಲ್ಲದೇ ನಿಮ್ಮ ದೇಹ ಅತೀಯಾಗಿ ತಂಪಾಗಿದ್ದರೆ, ನಿಮಗೆ ಎಳನೀರು ಕುಡಿಯುವುದರಿಂದ ಅಲರ್ಜಿ ಎಂದಾದಲ್ಲಿ ವೈದ್ಯರ ಬಳಿ ಸಲಹೆ ಪಡೆದು ನಂತರ ಎಳನೀರು ಸೇವಿಸಿ.
ಶ್ರಾವಣಿ ಸೋಮಯಾಜಿ, ಕರ್ನಾಟಕ ಟಿವಿ

ಶ್ರೀ ಸಾಯಿ ಕೃಷ್ಣ ಜ್ಯೋತಿಷ್ಯಾಲಯ, ಪಂಡಿತ್ ಡಿ.ಎಸ್ ಜೋಷಿ – 9731355538
ನಿಮ್ಮ ಸಮಸ್ಯೆಗಳಾದ ಉದ್ಯೋಗ, ಸತಿ-ಪತಿ ಕಲಹ, ಮದುವೆ, ಪ್ರೇಮ ವಿಚಾರ, ವಶೀಕರಣ ಯಾವುದೇ ಕಠಿಣ-ಕ್ಲಿಷ್ಟ ಸಂಕಷ್ಟಗಳಿಗೆ ಸಂಪರ್ಕಿಸಿ.
ವಿಳಾಸ : ಸಾಯಿಬಾಬಾ ದೇವಸ್ಥಾನ ಎದುರು, 15ನೇ ಕ್ರಾಸ್, ಬಸ್ ನಿಲ್ದಾಣದ ಪಕ್ಕ, ಸಂಪಿಗೆ ರೋಡ್, ಮಲ್ಲೇಶ್ವರಂ, ಬೆಂಗಳೂರು
ನಿಮ್ಮ ಸಮಸ್ಯೆಗಳಿಗೆ ಕಾಶಿ ತಾಂತ್ರಿಕ ಅಘೋರಿ, ನಾಗಸಾಧುಗಳ ವಿಶೇಷ ಪ್ರಯೋಗಗಳಾದ ಮಹಾರುದ್ರ ಪೂಜೆ, ಮಂಡಲ ಪೂಜೆ, ಅಷ್ಟ ದಿಗ್ಬಂಧನೆಯ ಪೂಜೆಯಿಂದ 11 ದಿನಗಳಲ್ಲಿ ಪರಿಹಾರ ಶತಸಿದ್ಧ.
ಹೆಸರಾಂತ ವಂಶಪಾರಂಪರ್ಯ ಜ್ಯೋತಿಷ್ಯರು ಪಂಡಿತ್ ಡಿ.ಎಸ್ ಜೋಷಿ ತಮ್ಮ 25 ವರ್ಷಗಳ ಅನುಭವದಲ್ಲಿ 20,000 ಕ್ಕೂ ಹೆಚ್ಚು ಸಮಸ್ಯೆಗಳನ್ನ ಇತ್ಯರ್ಥ ಮಾಡಿ ಸಾವಿರಾರು ಕುಟುಂಬಗಳ ನೆಮ್ಮದಿಯ ಬದುಕಿಗೆ ನೆರವಾಗಿದ್ದಾರೆ.