ನಾವಿವತ್ತು ಡ್ರೈಫ್ರೂಟ್ಸ್‌ಗಳಲ್ಲಿ ಒಂದಾಗಿರುವ ಅಖ್ರೋಟ್ ಅಂದ್ರೆ ವಾಲ್ನಟ್ ಬಗ್ಗೆ ಕೆಲ ಮಾಹಿತಿಗಳನ್ನ ನೀಡಲಿದ್ದೇವೆ.

ಡ್ರೈಫ್ರೂಟ್ಸ್‌ಗಳಲ್ಲಿ ಒಂದಾರುವ ವಾಲ್ನಟ್‌ನ್ನ ಚಳಿಗಾಲದಲ್ಲಿ ಹಾಗೆ ಮತ್ತು ಬೇಸಿಗೆಯಲ್ಲಿ ನೆನೆಸಿ ತಿನ್ನಲಾಗುತ್ತದೆ. ಯಾಕಂದ್ರೆ ಇದನ್ನ ಹಾಗೇ ತಿನ್ನುವುದರಿಂದ ಇದರಲ್ಲಿ ಉಷ್ಣತೆ ಪ್ರಮಾಣ ಹೆಚ್ಚಿರುತ್ತದೆ ಮತ್ತು ನೆನೆಸಿ ತಿನ್ನುವುದರಿಂದ ಇದರ ಗುಣ ತಂಪಾಗಿರುತ್ತದೆ. ಅಲ್ಲದೇ ವಾಲ್ನಟ್ ತುಂಬಾ ರೋಗಗಳಿಂದ ಮುಕ್ತಿ ಕೊಡಿಸಲು ಸಹಕಾರಿಯಾಗಿದೆ.
ರಾತ್ರಿ ಒಂದು ವಾಲ್ನಟ್ ಬೀಜವನ್ನು ನೀರಿನಲ್ಲಿ ನೆನೆಸಿಟ್ಟು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಅದನ್ನು ಸೇವಿಸುವುದರಿಂದ ದೇಹದಲ್ಲಿರುವ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆಯಾಗಿ ಒಳ್ಳೆಯ ಕೊಲೆಸ್ಟ್ರಾಲ್ ಪ್ರಮಾಣ ಹೆಚ್ಚುತ್ತದೆ.
ಇದೇ ರೀತಿ ಹೃದಯದ ಸಮಸ್ಯೆ ಇದ್ದವರು ಕೂಡ ಅಖ್ರೋಟನ್ನ ನೆನೆಸಿ ತಿಂದರೆ ಉತ್ತಮ ಲಾಭ ಪಡೆಯಬಹುದು. ಇದರಿಂದ ರಕ್ತನಾಳಗಳು ಚೆನ್ನಾಗಿ ಕೆಲಸ ಮಾಡುತ್ತದೆ. ಇದರಿಂದ ಹೃದಯ ಸಮಸ್ಯೆ ಬಾಧಿಸುವುದಿಲ್ಲ.
ನಿದ್ರಾಹೀನ ಸಮಸ್ಯೆಯಿಂದ ಬಳಲುತ್ತಿರುವವರು, ರಾತ್ರಿ ಎರಡು ಅಕ್ರೋಟನ್ನ ನೀರಿನಲ್ಲಿ ನೆನೆಸಿಟ್ಟು ಬೆಳಿಗ್ಗೆ ತಿಂದು, ನಂತರ ಹಸುವಿನ ಹಾಲನ್ನ ಕಾಯಿಸಿ, ಉಗುರು ಬೆಚ್ಚು ಹಾಲನ್ನ ಕುಡಿಯಬೇಕು. ಮತ್ತು ಬೆಳಿಗ್ಗೆ ಅಖ್ರೋಟನ್ನ ನೀರಿನಲ್ಲಿ ನೆನೆಸಿಟ್ಟು ರಾತ್ರಿ ಊಟಕ್ಕೂ ಅರ್ಧ ಗಂಟೆ ಮೊದಲು ಅಖ್ರೋಟ್ ತಿಂದು ಹಸುವಿನ ಹಾಲನ್ನ ಕಾಯಿಸಿ, ಉಗುರು ಬೆಚ್ಚು ಹಾಲನ್ನ ಕುಡಿಯಬೇಕು.
ಸಿಟ್ಟಿದ್ದವರು, ನೆನಪಿನ ಶಕ್ತಿ ಕಡಿಮೆ ಇದ್ದವರು, ಡಿಪ್ರೆಶನ್‌ಗೆ ಒಳಗಾದವರು ವಾಲ್ನಟನ್ನ ನೀರಿನಲ್ಲಿ ನೆನೆಸಿ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ತಿನ್ನುವುದರಿಂದ ನೆನಪಿನ ಶಕ್ತಿ ಉತ್ತಮವಾಗುವುದಲ್ಲದೇ, ನೀವು ಉಲ್ಲಸಿತರಾಗಿರಲು ಸಹಾಯ ಮಾಡುತ್ತದೆ.


