Sunday, April 13, 2025

Latest Posts

ಸಿಲಿಕಾನ್ ಸಿಟಿಯಲ್ಲಿ ತಪ್ಪುತ್ತಿಲ್ಲ ರಸ್ತೆಗುಂಡಿಗಳಿಗೆ ಮುಕ್ತಿ: ಓ ದೇವರೇ..!

- Advertisement -

ಬೆಂಗಳೂರು: ಜನ ಯಾವುದಾದರೂ ಊರನ್ನು ಅಭಿವೃದ್ಧಿ ಆಗಿದೆ ಅಂತ ಗುರುತಿಸುತ್ತಿದ್ದಾರೆ ಎಂದರೆ ಊರಿಗೆ ಕಾಲಿಡುತ್ತಿದ್ದ ಹಾಗೆ ಮೊದಲು ನೋಡೋದು ಊರಿನ ರಸ್ತೆಗಳನ್ನು. ಆದರೆ ಅಂತಹ ರಸ್ತೆಗಳೇ ತಗ್ಗು ಗುಂಡಿಗಳಿಂದ ಕೂಡಿದ್ದರೆ ? ಆ ಊರಲ್ಲಿ ಯಾವುದೆ ಸೌಲಭ್ಯಗಳಿದ್ದರೂ ಲೆಕ್ಕಕ್ಕೆ ಬರುವುದಿಲ್ಲ.ಅಂತದ್ರಲ್ಲಿ ಬೆಂಗಳೂರಿನ ರಸ್ತೆಗಳಲ್ಲೇ ರಸ್ತೆಗುಂಡಿಗಳು ಮೃತ್ಯುಕೂಪವಾಗಿ ಕಾಡ್ತಿವೆ ಅಂದ್ರೆ ಏನೇಳಬೇಕು ಹೇಳಿ.

ಹೌದು ಇಡಿ ದೇಶವೇ ಯಾವ ನಗರವನ್ನು ಸಿಲಿಕಾನ್ ಸಿಟಿ , ಗ್ರೀನ್ ಸಿಟಿ, ಕ್ಲೀನ್ ಸಿಟಿ ಅಂತ ಕರೀತೀವೋ ಅದು ಅಸಲಿಗೆ ಕ್ಲೀನ್ ಸಿಟಿ ಅಲ್ಲ‌. ಅದಕ್ಕೆ ಕಾರಣ ಕೆಲವು ಏರಿಯಾದ ರಸ್ತೆಗಳು, ಯಾವುದೇ ಸರ್ಕಾರ ಬಂದರೂ ಬೆಂಗಳೂರು ನಗರ ಅಭಿವೃದ್ಧಿಗಾಗಿಯೇ ಪ್ರತಿ ವರ್ಷ ಸಾವಿರಾರು ಕೋಟಿ  ಅನುದಾನ ಬಿಡುಗಡೆ ಮಾಡುತ್ತಿದೆ. ಆದರೆ ಆ ಅನುದಾನವೆಲ್ಲ  ರಸ್ತೆಗಳ ಮೇಲೆ ಬೀಳುವ ಮಳೆ ನೀರಿನಲ್ಲಿ ಹರಿದು ಹೋಗುತ್ತಿದೆ ಏನೋ ಗೊತ್ತಿಲ್ಲಾ? ಯಾಕೆಂದರೆ ಪ್ರತೀ ವರ್ಷ ರಸ್ತೆಗಳು ದುರಸ್ತಿ ಮಾಡಿದ್ರೂ ಮಳೆಗಾಲದಲ್ಲಿ ರಸ್ತೆಗಳು ಗುಂಡಿಗಳು ಬಿದ್ದು ಹಾಳಾಗಿ ಹೋಗುತ್ತವೆ.

ಹಾಗಿದ್ರೆ ಇದಕ್ಕೆಲ್ಲ ಕಾರಣ ಏನು ಅಂತ ಕೇಳೋದಾದ್ರೆ , ಕಳಪೆ ಕಾಮಗಾರಿ . ಅಭಿವೃದ್ಧಿಗೆ ಬಿಡುಗಡೆ ಮಾಡಿದ ಹಣದಲ್ಲಿ ಶೇಕಡಾವಾರು ಗುತ್ತಿಗೆದಾರರಿಗೆ , ಇಂಜಿನಿಯರ್ ಗಳಿಗೆ ರಾಜಕಾರಣಿಗಳಿಗೆ ಹಂಚಿ ಹೋಗಿ ಉಳಿದ ಅಲ್ಪ ಸ್ವಲ್ಪ ಹಣದಲ್ಲಿ ಕಾಮಗಾರಿ ಮಾಡಿದ್ರೆ ಇನ್ನೆನಾಗುತ್ತೆ..

ಇನ್ನು ಪ್ರತಿಯೊಂದಕ್ಕೂ ತೆರಿಗೆ ಕಟ್ಟಿ ರಸ್ತೆಯಲ್ಲಿ ಓಡಾಡುವ ವಾಹನ ಸವಾರರು ಹೇಳೋದು ಒಂದೇ .ಪ್ರತಿ 5 ವರ್ಷಕ್ಕೊಮ್ಮೆ ಸರ್ಕಾರ ಏನೋ ಬದಲಾಗುತ್ತೆ ಆದರೆ ಜನಗಳನ್ನು ಸುಖವಾಗಿ ಇರಲು ಬಿಡುತ್ತಿಲ್ಲ , ಎಂದು ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

ನಿಮಗೆ ಸರ್ಕಾರದಿಂದ ಯಾವುದೇ ಉಚಿತಗಳು ಬೇಕಾಗಿಲ್ಲ .ನಾವು ಕಟ್ಟುವ ತೆರಿಗೆ ಹಣವನ್ನು ಸರಿಯಾಗಿ ಬಳಕೆ ಮಾಡಿ ನಮಗೆ ಸರಿಯಾದ ಮೂಲಭೂತ ಸೌಕರ್ಯ ಒದಗಿಸಿ ಎಂದು ಆಗ್ರಹಿಸಿದರು..

ಸುಂದರೇಶ್, ಕರ್ನಾಟಕ ಟಿವಿ ಬೆಂಗಳೂರು.

ಸಾಲದ ಬಾಧೆ ತಾಳಲಾರದೆ ಆತ್ಮಹತ್ಯೆಗೆ ಶರಣಾದ ಉದ್ಯಮಿ..!

DK Shivakumar: ಇಂದು ಹುಕ್ಕೇರಿಗೆ ಡಿಸಿಎಂ ಡಿಕೆ ಶಿವಕುಮಾರ್ ಭೇಟಿ..!

ಕಳ್ಳರನ್ನು ಹಿಡಿಯುವವರು ಪೋಲಿಸರು. ಆದರೆ ಪೊಲಿಸರೇ ಕಳ್ಳರಾದಾಗ ಯಾರು ಹಿಡಿಯಬೇಕು?

- Advertisement -

Latest Posts

Don't Miss