Thursday, October 30, 2025

Latest Posts

Bengaluru News: ಜಯನಗರದ ಪ್ರಾದೇಶಿಕ ಸಾರಿಗೆ ಕಚೇರಿ ಅಂಜನಾಪುರಕ್ಕೆ ಸ್ಥಳಾಂತರ

- Advertisement -

Bengaluru: ಬೆಂಗಳೂರು ನಗರ ಜಿಲ್ಲೆ, ಅಕ್ಟೋಬರ್ 29 (ಕರ್ನಾಟಕ ವಾರ್ತೆ) : ಕಾರ್ಯದರ್ಶಿಗಳು ಪ್ರಾದೇಶಿಕ ಸಾರಿಗೆ ಪ್ರಾಧಿಕಾರ, ಬೆಂಗಳೂರು ನಗರ ಜಿಲ್ಲೆ ಹಾಗೂ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಛೇರಿ, ಜಯನಗರ ಬೆಂಗಳೂರು (ದಕ್ಷಿಣ), ಕೆಎ-05 ಕಛೇರಿಯು ಸರ್ವೇ ನಂ. 64/1, ಅಂಜನಾಪುರ, ಉತ್ತರಹಳ್ಳಿ, ಹೋಬಳಿಯ, ಜೆ.ಪಿ.ನಗರ, 9ನೇ ಹಂತ, ಬೆಂಗಳೂರು-560108 ಇಲ್ಲಿ ನಿರ್ಮಿಸಲಾಗಿರುವ ನೂತನ ಕಟ್ಟಡದ ವಿಳಾಸಕ್ಕೆ ಸ್ಥಳಾಂತರಗೊಂಡಿದ್ದು, ಸಾರ್ವಜನಿಕರು ಇಲಾಖೆಗೆ ಸಂಬಂಧಪಟ್ಟ ಕೆಲಸ ಕಾರ್ಯಗಳಿಗೆ ಭೇಟಿ ನೀಡಬಹುದು ಎಂದು ಬೆಂಗಳೂರು (ದಕ್ಷಿಣ) ಜಯನಗರ, ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಛೇರಿ ಅಧಿಕಾರಿಗಳು ತಿಳಿಸಿದ್ದಾರೆ.

ಅಂಜನಾಪುರ ಪ್ರಾದೇಶಿಕ ಕಚೇರಿ ಯಿಂದ ಬಸ್ ಬಿಡುವ ಸಮಯ ವೇಳಾ ಪಟ್ಟಿ ಬೆಳಿಗ್ಗೆ 09 :10, 09: 35, 10: 20,11: 00,11: 35 ಗಂಟೆಗೆ. ಮಧ್ಯಾಹ್ನ 12: 05, 01:05, 2:00, 3:00, 3:25, 04: 05, 04:30. ಮತ್ತು ಸಂಜೆ 05:10, 06: 15 ಗಂಟೆಗೆಳಿಗೆ. ಕೆ.ಆರ್.ಮಾರ್ಕೆಟ್ ಬಸ್ ನಿಲ್ದಾಣದಿಂದ ಬಿಡುವ ಸಮಯ ವೇಳಾ ಪಟ್ಟಿ ಬೆಳಿಗ್ಗೆ 08: 05, 08:30, 09: 00, 10:00,10:30, 11:00, 12:00 ಗಂಟೆಗೆ. ಮಧ್ಯಾಹ್ನ 01:00, 01:30, 02:05, 03: 10 ಗಂಟೆಗೆ ಮತ್ತು ಬನಶಂಕರಿ ಟಿಟಿಎಂಸಿಯಿಂದ ಬಿಡುವ ಸಮಯ ವೇಳಾ ಪಟ್ಟಿ ಬೆಳಿಗ್ಗೆ : 09:25, 01: 45, 01: 45 ಗಂಟೆಗೆಳಿಗೆ ಬಿಬಿಎಂಟಿಸಿ ಬಸ್ ಗಳ ಸಂಪರ್ಕ ಸಾರಿಗೆ ವ್ಯವಸ್ಥೆ ಕಲ್ಪಿಸಲಾಗಿದ್ದು, ಹಾಗೂ ದೊಡ್ಡಕಲ್ಲಸಂದ್ರ ಮೊಟ್ರೋ ನಿಲ್ದಾಣದಿಂದ 3 ಕಿ.ಮೀ. ದೂರದಲ್ಲಿದ್ದು, ಸಾರ್ವಜನಿಕರು ಬಿಎಂಟಿಸಿ ಬಸ್ ಗಳ ಸಂಪರ್ಕ ಸಾರಿಗೆ ಸದುಪಯೋಗ ಪಡೆದುಕೊಳ್ಳುವಂತೆ ಬೆಂಗಳೂರು (ದಕ್ಷಿಣ) ಜಯನಗರ, ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಛೇರಿಯವರು ಕೋರಿದ್ದಾರೆ.

- Advertisement -

Latest Posts

Don't Miss