Tuesday, October 15, 2024

Latest Posts

Bengaluru Protest Case: ಗಣೇಶನನ್ನೂ ಕಂಬಿಯ ಹಿಂದೆ ಹಾಕಿದ್ದಾರೆ ಎಂದು ಮೋದಿ ವಾಗ್ದಾಳಿ

- Advertisement -

Bengaluru News: ಮಂಡ್ಯದ ನಾಗಮಂಗಲದಲ್ಲಿ ಸಾರ್ವಜನಿಕ ಗಣಪತಿ ವಿಸರ್ಜನೆ ಮೆರವಣಿಗೆ ವೇಳೆ, ಕಲ್ಲು ತೂರಾಟ ನಡೆದಿತ್ತು. ಪರಿಸ್ಥಿತಿ ಉದ್ವಿಗ್ನಗೊಂಡಿತ್ತು. ಇದರ ವಿರುದ್ಧ ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಲಾಗಿತ್ತು. ಈ ವೇಳೆ ಪೊಲೀಸರು ಗಣೇಶನನ್ನು ಪೊಲೀಸ್ ಗಾಡಿಯಲ್ಲಿ ಕೂರಿಸಿದ್ದು, ಸಖತ್ ವೈರಲ್ ಆಗಿ, ಹಲವರು ಇದಕ್ಕೆ ಆಕ್ರೋಶ ಹೊರಹಾಕಿದ್ದರು.

ಇದೀಗ ಪ್ರಧಾನಿ ಮೋದಿ ಕೂಡ ಈ ಬಗ್ಗೆ ಮಾತನಾಡಿದ ಆಕ್ರೋಶ ಹೊರಹಾಕಿದ್ದಾರೆ. ಗಣೇಶನನ್ನೂ ಕಂಬಿ ಹಿಂದೆ ಹಾಕಿದ್ದಾರೆಂದು ವಾಗ್ದಾಳಿ ನಡೆಸಿದ್ದಾರೆ. ಹರಿಯಾಣಾದ ಕುರುಕ್ಷೇತ್ರದಲ್ಲಿ ಭಾಷಣ ಮಾಡುವ ವೇಳೆ ಮಾತನಾಡಿದ ಪ್ರಧಾನಿ ಮೋದಿ, ಕರ್ನಾಟಕದಲ್ಲಿ ಗಣಪತಿಯನ್ನೂ ಕೂಡ ಕಂಬಿ ಹಿಂದೆ ಹಾಕಲಾಗಿದೆ. ತುಷ್ಟೀಕರಣಕ್ಕಾಗಿ ಕಾಂಗ್ರೆಸ್ ಏನು ಬೇಕಾದ್ರೂ ಮಾಡಲು ಸಿದ್ಧವಾಗಿದೆ. ಇಡೀ ದೇಶವೇ ಗಣೇಶೋತ್ಸವ ಆಚರಿಸಲು ಸಜ್ಜಾಗಿದೆ. ಆದರೆ ಕಾಂಗ್ರೆಸ್ ಈ ಸಂಭ್ರಮಕ್ಕೆ ಅಡ್ಡಿಯಾಗಿದೆ ಎಂದು ಹರಿಹಾಯ್ದಿದ್ದಾರೆ.

ಬೆಂಗಳೂರಿನಲ್ಲಿ ನಡೆದ ಪ್ರತಿಭಟನೆಯಲ್ಲಿ ಪ್ರತಿಭಟನಾಕಾಾರರನ್ನು ಅರೆಸ್ಟ್ ಮಾಡಿದ ಪೊಲೀಸರು, ಪ್ರತಿಭಟನಾಕಾರರೊಂದಿಗೆ ಗಣೇಶನ ಮೂರ್ತಿಯನ್ನು ಕೂಡ, ಪೊಲೀಸ್ ಗಾಡಿಗೆ ಹಾಕಿತ್ತು. ಈ ಬಗ್ಗೆ ಹಲವು ಹಿಂದೂಗಳು ಮತ್ತು ಬಿಜೆಪಿ ನಾಯಕರು ಟ್ವೀಟ್ ಮಾಡಿ, ಆಕ್ರೋಶ ಹೊರಹಾಕಿದ್ದರು.

- Advertisement -

Latest Posts

Don't Miss