Sunday, December 22, 2024

Latest Posts

ಸುದೀಪ್ ನಟನೆಯ ವಿಕ್ರಾಂತ್‌ರೋಣಾ ಸಿನಿಮಾಗೆ ಒಟಿಟಿಯಿಂದ ಭರ್ಜರಿ ಆಫರ್

- Advertisement -

ಅನೂಪ್ ಭಂಡಾರಿ ನಿರ್ದೇಶನದ ವಿಕ್ರಾಂತ್ ರೋಣಾ ಕನ್ನಡದ ಬಹುನಿರೀಕ್ಷಿತ ಸಿನಿಮಾ,3d ತಂತ್ರಜ್ಞಾನದಲ್ಲಿ ಮತ್ತು ಭರ್ಜರಿ ವೆಚ್ಚದಲ್ಲಿ ಇನ್ನೇನು ಸ್ವಲ್ಪ ದಿನಗಳಲ್ಲಿಯೇ ತೆರೆಗೆ ಬರಲಿದೆ. ಈ ಸಿನಿಮಾ ಇದಕ್ಕೂ ಮುಂಚೆಯೇ ನೇರ ಪ್ರಸಾರದ ಹಕ್ಕುಗಳಿಗಾಗಿ ಎರಡು ಒಟಿಟಿ ಸಂಸ್ಥೆಗಳ ನಡುವೆ ಸ್ಪರ್ಧೆ ಏರ್ಪಟ್ಟಿದೆ ಎನ್ನಲಾಗಿದೆ.
ಕೊರೊನಾ ಮೂರನೇ ಅಲೆಯಿಂದ ಅನಿಶ್ಚಿತತೆ ಉಂಟಾಗಿರುವ ಈ ಸಂದರ್ಭದಲ್ಲಿ ಒಟಿಟಿಗಳು ಬಹು ನಿರೀಕ್ಷಿತ ಸಿನಿಮಾಗಳ ಹಿಂದೆ ಬಿದ್ದಿವೆ. ಈಗಾಗಿ ಕಿಚ್ಚಾ ಸುದೀಪ್ ಅಭಿನಯದ ವಿಕ್ರಾಂತ್‌ರೋಣ ಸಿನಿಮಾಗೆ ಭರ್ಜರಿ ಆಫರ್ ಬಂದಿದೆ. ಕನ್ನಡ, ಹಿಂದಿ, ತಮಿಳು, ಮಲಯಾಳಂ, ಇಂಗ್ಲಿಷ್ ಭಾಷೆಯಲ್ಲೂ ನೇರವಾಗಿ ಒಟಿಟಿಯಲ್ಲಿ ಪ್ರಸಾರ ಮಾಡಲು ಒಟಿಟಿ ಆಫರ್ ನೀಡಿದೆ .
ಇದಕ್ಕಾಗಿ ವಿಕ್ರಾಂತ್‌ರೋಣ ಸಿನಿಮಾಗೆ ನಿರೀಕ್ಷೆಗೂ ಮೀರಿದ ಹಣದ ಆಫರ್ ನೀಡಿದೆ ಎಂದು ಮೂಲಗಳಿಂದ ತಿಳಿದುಬಂದಿದೆ. ಪ್ರಮುಖವಾಗಿ 2 ಒಟಿಟಿ ಸಂಸ್ಥೆಗಳಿoದ ಆಫರ್ ಬಂದಿದೆ, ಆದರೆ ಚಿತ್ರತಂಡ ಯಾವುದೇ ಮಾಹಿತಿ ನೀಡಿಲ್ಲ ಎನ್ನಲಾಗುತ್ತಿದೆ. ಮೂಲಗಳ ಪ್ರಕಾರ ಈ ಸಿನಿಮಾಗೆ 100 ಕೋಟಿ ಭರ್ಜರಿ ಆಫರ್ ಬಂದಿದೆ. ಆದರೆ ನಿರ್ಮಾಪಕರು ಮಾಹಿತಿಯನ್ನು ಖಚಿತಪಡಿಸಿಲ್ಲ ಎಂದು ಹೇಳಲಾಗುತ್ತಿದೆ.

- Advertisement -

Latest Posts

Don't Miss