Political News: ಭವಾನಿ ರೇವಣ್ಣಗೆ ಕೋರ್ಟ್ ಬಿಗ್ ಶಾಕ್ ನೀಡಿದ್ದು, ನಿರೀಕ್ಷಣಾ ಜಾಮೀನಿಗಾಗಿ ಕೋರ್ಟ್‌ಗೆ ಸಲ್ಲಿಸಿದ್ದ ಅರ್ಜಿ ವಜಾಗೊಂಡಿದೆ. ಹೀಗಾಗಿ ಭವಾನಿ ಕೂಡ ತಂದೆ ಮಗನಂತೆ ಜೈಲು ಸೇರುವ ಸಾಧ್ಯತೆ ಇದೆ.
ಕಿಡ್ನ್ಯಾಪ್ ಕೇಸ್‌ನಲ್ಲಿ ಸಂತ್ರಸ್ತೆಯ ಮಗ ನೀಡಿದ ದೂರಿನ ಹಿನ್ನೆಲೆ ಭವಾನಿ ರೇವಣ್ಣರನ್ನು ಬಂಧಿಸಬೇಕಿತ್ತು. ಆದರೆ ಭವಾನಿ ನಿರೀಕ್ಷಣಾ ಜಾಮೀನು ಕೋರಿ, ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಆದರೆ ಭವಾನಿ ಸಲ್ಲಿಸಿದ್ದ ಅರ್ಜಿ ವಜಾಗೊಂಡು, ಭವಾನಿ ಜೈಲು ಸೇರುವ ಸಾಧ್ಯತೆ ಇದೆ.
ಈಗಾಗಲೇ ಎಸ್‌ಐಟಿ ತಂಡ ಭವಾನಿ ರೇವಣ್ಣಗೆ ವಿಚಾರಣೆಗೆ ಹಾಜರಾಗುವಂತೆ ನೊಟೀಸ್ ನೀಡಿದೆ. ನಾಳೆ ಭವಾನಿ ರೇವಣ್ಣ ವಿಚಾರಣೆಗೆ ಹಾಜರಾಗಲೇಬೇಕೆಂದು ಹೇಳಲಾಾಗಿದೆ. ಅದಕ್ಕೂ ಮುನ್ನವೇ ಭವಾನಿಯನ್ನು ಅರೆಸ್ಟ್ ಮಾಡುವ ಎಲ್ಲಾ ಸಾಧ್ಯತೆಗಳಿದೆ.
ಭವಾನಿ ರೇವಣ್ಣ ಸತೀಶ್ ಬಾಬಣ್ಣ ಅವರ ಬಳಿ ಫೋನ್‌ನಲ್ಲಿ ಮಾತನಾಡಿದ್ದು, ಸಂತ್ರಸ್ತೆಯಿಂದ ತನಗೇನೂ ಆಗೇ ಇಲ್ಲ. ತಾನು ಸೇಫ್ ಆಗಿದ್ದೇನೆ ಎಂಬಂತೆ ವೀಡಿಯೋ ಮಾಡಿಸು ಎಂದು ಭವಾನಿ ಹೇಳಿದ್ದಾರೆಂದು ಸಾಕ್ಷ್ಯ ಸಿಕ್ಕಿದೆ. ಈ ಕಾರಣಕ್ಕೆ ಭವಾನಿ ರೇವಣ್ಣ ಕೂಡ ಜೈಲು ಕಂಬಿ ಎಣಿಸುವ ಎಲ್ಲ ಸಾಧ್ಯತೆಗಳಿದೆ.
ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿ ಸಿಂಹ ಘರ್ಜನೆ ಮಾಡುತ್ತಿರುವ ನೂತನ ಡಿ.ಸಿ.ಪಿ.ಕುಶಾಲ್ ಚೌಕ್ಸೆ
ಜೂನ್ 2ರಿಂದ ಜೂನ್ 5ರವರೆಗೆ ಕೃ.ವಿ.ವಿ ಮತ ಎಣಿಕೆ ಕೇಂದ್ರದ ಸುತ್ತ ಪ್ರತಿಬಂಧಕಾಜ್ಞೆ ಜಾರಿ