Bollywood News: ಭಾರತೀಯ ಚಿತ್ರರಂಗದ ದುಬಾರಿ ನಟರಲ್ಲಿ ಒಬ್ಬರಾದ ಅಮಿತಾಬ್ ಬಚ್ಚನ್ ಅವರು 2024-25ನೇ ಆರ್ಥಿಕ ವರ್ಷದಲ್ಲಿ 350 ಕೋಟಿ ರೂಪಾಯಿ ಆದಾಯ ಗಳಿಸಿದ್ದಾರೆ. ಇನ್ನೂ ಈ ಆದಾಯದಲ್ಲಿನ 120 ಕೋಟಿ ರೂಪಾಯಿಗಳನ್ನು ತೆರಿಗೆ ರೂಪದಲ್ಲಿ ಸರ್ಕಾರಕ್ಕೆ ಪಾವತಿಸಿದ್ದಾರೆ. ಈ ಮೂಲಕ ಭಾರತದ ನಟರಲ್ಲೇ ಅತಿ ಹೆಚ್ಚು ತೆರಿಗೆ ಪಾವತಿಸಿದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಬಚ್ಚನ್ ನಂತರದ ಸ್ಥಾನದಲ್ಲಿ ಶಾರುಖ್ ಖಾನ್ 92 ಕೋಟಿ ರೂಪಾಯಿ, ವಿಜಯ್ 80 ಕೋಟಿ ರೂಪಾಯಿ ಹಾಗೂ ಸಲ್ಮಾನ್ ಖಾನ್ 75 ಕೋಟಿ ರೂಪಾಯಿ ಮೊದಲಾದವರು ಈ ಪಟ್ಟಿಯಲ್ಲಿ ಇದ್ದಾರೆ.
ಇನ್ನೂ ಕೌನ್ ಬನೇಗಾ ಕರೋಡ್‌ಪತಿ 16ನೇ ಕಾರ್ಯಕ್ರಮದಿಂದ ಪ್ರತಿ ಎಪಿಸೋಡ್‌ಗೆ 5 ಕೋಟಿ ರೂಪಾಯಿ ಗಳಿಕೆ, ಸಿನಿಮಾಗಳು ಮತ್ತು ಬ್ರ್ಯಾಂಡ್ ಪ್ರಚಾರಗಳು ಅವರ ಆದಾಯಕ್ಕೆ ಕಾರಣ ಆಗಿವೆ. ಸದ್ಯ ಅವರಿಗೆ 82 ವಸಂತಗಳು ಕಳೆದಿದ್ದು, 83ನೇ ವರ್ಷದ ತುಂಬು ಜೀವನದಲ್ಲಿದ್ದಾರೆ. ಈ ಮೂಲಕ ಭಾರತದಲ್ಲಿ ಅತಿ ಹೆಚ್ಚು ತೆರಿಗೆ ಪಾವತಿ ಮಾಡಿದ ಹೀರೋ ಎನಿಸಿಕೊಂಡಿದ್ದಾರೆ. ಅಮಿತಾಭ್ ಬಚ್ಚನ್ ಅವರು ಈ ಆರ್ಥಿಕ ಸಾಲಿನಲ್ಲಿ ಬರೋಬ್ಬರಿ 350 ಕೋಟಿ ರೂಪಾಯಿ ಗಳಿಕೆ ಮಾಡಿದ್ದಾರೆ. ಅಂದರೆ ಒಂದು ದಿನಕ್ಕೆ ಅವರ ಆದಾಯ ಬರೋಬ್ಬರಿ 95 ಲಕ್ಷ ರೂಪಾಯಿ. ಈ ಮೂಲಕ ಅವರು ಭಾರತದ ದುಬಾರಿ ಹೋಸ್ಟ್ ಎನಿಸಿಕೊಂಡಿದ್ದಾರೆ. ಇದರಿಂದಾಗಿಯೇ ಅವರ ಗಳಿಕೆ ಹೆಚ್ಚಿದೆ. ಇದರ ಜೊತೆಗೆ ಅವರು ಸಿನಿಮಾ ಗಳಿಕೆ, ಬ್ರ್ಯಾಂಡ್ಗಳ ಪ್ರಚಾರಗಳಿಂದ ಹಣ ಮಾಡುತ್ತಾರೆ.
ಆದರೆ ಕಳೆದ ವರ್ಷ ಸುಮಾರು 71 ಕೋಟಿ ರೂಪಾಯಿಗಳಷ್ಟು ತೆರಿಗೆಯಾಗಿ ಪಾವತಿಸಿದ್ದರು. ಆದರೆ, ಈ ವರ್ಷ ಸುಮಾರು ಶೇ. 69ರಷ್ಟು ಆದಾಯದಲ್ಲಿ ಏರಿಕೆಯಾಗಿದೆ ಎನ್ನಲಾಗಿದೆ. ಈಗಾಗಲೇ ವರದಿಯಾಗಿರುವ ಪ್ರಕಾರ, ಅಮಿತಾಭ್ ಬಚ್ಚನ್ ಮಾರ್ಚ್ 15ರಂದು ಮುಂಗಡವಾಗಿ ಆದಾಯ ತೆರಿಗೆಯನ್ನು ಪಾವತಿ ಮಾಡಿದ್ದಾರೆ. ಕೊನೆಯ ಕಂತಿನಲ್ಲಿ ಸುಮಾರು 52.5 ಕೋಟಿ ರೂಪಾಯಿಯನ್ನು ತರಿಗೆಯಾಗಿ ಪಾವತಿ ಮಾಡಿದ್ದಾರೆ. ಈ ಮೂಲಕ ಬಾಲಿವುಡ್‌ನಲ್ಲಿ ಇಬ್ಬರು ಸೂಪರ್‌ಸ್ಟಾರ್‌ಗಳು ಹಾಗೂ ಇಬ್ಬ ದಕ್ಷಿಣ ಭಾರತದ ನಟನನ್ನು 82 ವರ್ಷದ ಹಿರಿಯ ನಟ ಹಿಂದಿಕ್ಕಿದ್ದಾರೆ.