Saturday, March 15, 2025

Latest Posts

ಸಚಿವ ಸಂತೋಷ್ ಲಾಡ್ ಹುಟ್ಟುಹಬ್ಬಕ್ಕೆ ಭರ್ಜರಿ ತಯಾರಿ: ಎಲ್ಲೆಡೆ ಭೀಮ-ಬಸವ ಸಾಂಗ್‌ಗಳದ್ದೇ ದರ್ಬಾರ್

- Advertisement -

Hubli News: ಸೋಶಿಯಲ್ ಮೀಡಿಯಾಗಳಲ್ಲಿ ಸಂತೋಷ್ ಲಾಡ್ ಅವರ ಹುಟ್ಟುಹಬ್ಬದ ಅಂಗವಾಗಿ ಆಯೋಜಿಸಿರುವ ಕಾರ್ಯಕ್ರಮದ ಕುರಿತಾದ ವೀಡಿಯೋಗಳು ದಂಗಲ್ ಕ್ರಿಯೇಟ್ ಮಾಡಿವೆ. ಎಲ್ಲಾ ಕಡೆ ಈ ಕಾರ್ಯಕ್ರಮದ್ದೇ ಚರ್ಚೆ ಶುರುವಾಗಿದೆ. ಈ ಒಂದು ಸಮಾರಂಭ ಇಷ್ಟೊಂದು ವೈರಲ್ ಆಗೋಕೂ ಕೆಲವು ಕಾರಣಗಳಿವೆ.

ಇದೇ ಫೆಬ್ರವರಿ 27ನೇ ತಾರೀಖು ಸಿದ್ದರಾಮಯ್ಯ ಸಂಪುಟದ ಮೋಸ್ಟ್ ಪಾಪ್ಯುಲರ್ ಹಾಗೂ ಕ್ರಿಯಾಶೀಲ ಸಚಿವ ಸಂತೋಷ್ ಲಾಡ್ ಅವರು ತಮ್ಮ 49ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ತಿದಾರೆ. ಅವರ ಹುಟ್ಟು ಹಬ್ಬದ ಅಂಗವಾಗಿ ಸಂತೋಷ್ ಲಾಡ್ ಫೌಂಡೇಶನ್ ಮುಂದಾಳತ್ವದಲ್ಲಿ ಹೊಸಪೇಟೆಯ ಡಾ. ಪುನೀತ್ ರಾಜಕುಮಾರ್ ಮೈದಾನದಲ್ಲಿ ಅದ್ಧೂರಿ ಕಾರ್ಯಕ್ರಮ ಒಂದನ್ನ ಆಯೋಜಿಸಲಾಗಿದೆ.

ಈ ಕಾರ್ಯಕ್ರಮದಲ್ಲಿ ಸಂತೋಷ್ ಲಾಡ್ ಫೌಂಡೇಶನ್ ವತಿಯಿಂದ ಖ್ಯಾತ ಚಿತ್ರ ಸಾಹಿತಿ ಡಾ. ವಿ ನಾಗೇಂದ್ರ ಪ್ರಸಾದ್ ಬರೆದಿರುವ ವಿಶ್ವಗುರು ಬಸವಣ್ಣ ಹಾಗೂ ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ ಕುರಿತಾದ ಹಾಡುಗಳ ಲೋಕಾರ್ಪಣೆ ಸಮಾರಂಭ ಕೂಡ ನಡೆಯಲಿದೆ.

ಅಂದ್ಹಾಗೆ ಈ ಹಾಡುಗಳ ಬಿಟ್ ಗಳಿಗೆ ರೀಲ್ಸ್ ಮಾಡುವ ಸ್ಪರ್ಧೆ ಸಹ ಆಯೋಜಿಸಲಾಗಿದ್ದು, ಮೊದಲ ಬಹುಮಾನವಾಗಿ 25 ಸಾವಿರ, ಎರಡನೇ ಬಹುಮಾನವಾಗಿ 15 ಸಾವಿರ ಹಾಗೂ ತೃತೀಯ ಬಹುಮಾನವಾಗಿ 10 ಸಾವಿರ ಬಹುಮಾನವನ್ನೂ ಘೋಷಿಸಲಾಗಿದೆ. ಹೀಗಾಗಿ ಈ ಹಾಡುಗಳಿಗೆ ಖ್ಯಾತ ಸೋಶಿಯಲ್ ಸ್ಟಾರ್ ಗಳೆಲ್ಲ ರೀಲ್ಸ್ ಮಾಡುತ್ತಿದ್ದು, ಎಲ್ಲೆಡೆ ಈ ಹಾಡುಗಳು ಹಾಗೂ ಕಾರ್ಯಕ್ರಮ ವೈರಲ್ ಆಗಿದೆ.

ಒಟ್ಟಿನಲ್ಲಿ ಭೀಮ-ಬಸವ-ಬುದ್ಧ ಅನುಯಾಯಿಯಾದ ಸಚಿವ ಸಂತೋಷ್ ಲಾಡ್ ಅವರ ಹುಟ್ಟುಹಬ್ಬದ ಸಂಭ್ರಮದಲ್ಲಿ ಆಯೋಜನೆಯಾಗಿರುವ ಈ ಅರ್ಥಪೂರ್ಣ ಕಾರ್ಯಕ್ರಮದಲ್ಲಿ ಎಲ್ಲರೂ ಭಾಗಿಯಾಗಿ ಸಚಿವ ಲಾಡ್ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸೋಣ.

ಇಬ್ಬರು ರಾಷ್ಟ್ರಮಟ್ಟದ ನಾಯಕರಿಗೆ ಸಾವಿನ ಕಂಟಕ ಕಾದಿದೆ..! ಭವಿಷ್ಯ ನುಡಿದ ಕೋಡಿಮಠದ ಸ್ವಾಮೀಜಿ

ಸಿದ್ದರಾಮಯ್ಯ ರಾಜ್ಯವನ್ನು ದಿವಾಳಿ ಎಬ್ಬಿಸಿ ಕೇಂದ್ರದ ಮೇಲೆ ಗೂಬೆ ಕೂರಿಸುತ್ತಿದ್ದಾರೆ: ಅರವಿಂದ ಬೆಲ್ಲದ್

ಬೈಕ್ ರೈಡ್ ಮೂಲಕ ಕಾಶ್ಮೀರಕ್ಕೆ ಸೊಲೋ ಟ್ರಿಪ್: ಹೊಸ ದಾಖಲೆ ಬರೆದ ಧಾರವಾಡ ಯುವತಿ

- Advertisement -

Latest Posts

Don't Miss