ಕೋಲಾರ: 2023ರ ಚುನಾವಣಾ ಹೊಸ್ತಿಲಲ್ಲಿ ಕಾಂಗ್ರೆಸ್‌ಗೆ ಬಿಗ್ ಶಾಕ್ ತಟ್ಟಿದೆ. ಕೋಲಾರ ಜಿಲ್ಲೆ ಮುಳಬಾಗಿಲು ವಿಧಾನಸಭಾ ಕ್ಷೇತ್ರದ ಪ್ರಭಾವಿ ಮುಖಂಡ, ಆನಂದ್ ರೆಡ್ಡಿ ಇಂದು ಕಾಂಗ್ರೆಸ್ ತೊರೆದು, ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಂಡರು .
ಮುಳಬಾಗಿಲಿನ ಶಿನಿಗಾನಹಳ್ಳಿ ಆನಂದ್ ರೆಡ್ಡಿ ತಮ್ಮ ನಿವಾಸದ ಬಳಿ ಬೃಹತ್ ಕಾರ್ಯಕರ್ತರ ಸಮಾವೇಶದಲ್ಲಿ ಕುಮಾರಸ್ವಾಮಿ ನೇತೃತ್ವದಲ್ಲಿ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಂಡರು. ಕಳೆದ 30 ವರ್ಷಗಳ ಕಾಂಗ್ರೆಸ್ ಪಕ್ಷದ ಪಯಣವನ್ನು ಅಂತ್ಯಗೊಳಿಸಿ, ತೆನೆ ಹೊತ್ತ ಮಹಿಳೆಗೆ ಜೈ ಎನ್ನುವ ಮೂಲಕ ಮುಳಬಾಗಿಲಿನಲ್ಲಿ ಆನಂದ್ ರೆಡ್ಡಿ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಿಂದ ಆನೆ ಬಲ ಬಂದಿದೆ.
ಇನ್ನು ಈ ಹಿಂದೆ ಆನಂದ ರೆಡ್ಡಿ ಪತ್ನಿ ಗೀತಮ್ಮ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆಯಾಗಿದ್ದರು. ಮುಳಬಾಗಿಲಿನಲ್ಲಿ ಕಾಂಗ್ರೆಸ್ ಪಕ್ಷದ ಕೆಲವು ಮುಖಂಡರ ಗುಂಪುಗಾರಿಕೆಯಿಂದ ಬೇಸತ್ತಿರುವ ಆನಂದರೆಡ್ಡಿ ಜೆಡಿಎಸ್ ಗೆ ಸೇರ್ಪಡೆಗೊಂಡಿದ್ದಾರೆ. ಮಾಜಿ ಶಾಸಕ ಕೊತ್ತೂರು ಮಂಜುನಾಥ್ ಬಲಗೈ ಮುಖಂಡರಾಗಿ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದ ಅನಂದರೆಡ್ಡಿ, ಈ ವೇಳೆ ಆನಂದರೆಡ್ಡಿ ಜೊತೆಗೆ 5 ಸಾವಿರ ಮಂದಿ ಕಾಂಗ್ರೆಸ್ ಪಕ್ಷ ತೊರೆದು ಜೆಡಿಎಸ್ ಸೇರ್ಪಡೆಗೊಂಡಿದ್ದಾರೆ.
ಜೆಡಿಎಸ್ ಅಭ್ಯರ್ಥಿ ಸಮೃದ್ದಿ ಮಂಜುನಾಥ್ ರವರ ನಾಯಕತ್ವ ಹಾಗೂ ಜೆಡಿಎಸ್ ಪಕ್ಷದ ಪಂಚರತ್ನ ಯೋಜನೆಗಳನ್ನ ಮೆಚ್ಚಿ ತಾಲೂಕಿನ ಅಭಿವೃದ್ದಿಗಾಗಿ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ. ಜೆಡಿಎಸ್ ಸೇರ್ಪಡೆ ಕಾರ್ಯಕ್ರಮದಲ್ಲಿ 10 ಸಾವಿರಕ್ಕೂ ಹೆಚ್ಚು ಮಂದಿ ಭಾಗವಹಿಸುವ ಮೂಲಕ ಕಾಂಗ್ರೆಸ್ ಗೆ ಬಾರಿ ಶಾಕ್ ನೀಡಿದ್ದಾರೆ. ಕಳೆದ ಬಾರಿ ಚುನಾವಣೆಯಲ್ಲಿ 7 ದಿನದಲ್ಲಿ ಕೊತ್ತೂರು ಮಂಜುನಾಥ್ ಹೆಚ್ ನಾಗೇಶರನ್ನ ಗೆಲ್ಲಿಸುವ ಮೂಲಕ ತನ್ನ ಪ್ರಾಬಲ್ಯವನ್ನು ಇಡೀ ರಾಜ್ಯಕ್ಕೆ ಸಾರಿದ್ದರು.
ಈ ಬಾರಿ ಕೊತ್ತೂರು ಮಂಜುನಾಥ್ ಜಾತಿ ಪ್ರಮಾಣ ಪತ್ರ ಕುರಿತ ವಿವಾದ ನ್ಯಾಯಾಲಯದಲ್ಲಿರುವ ಕಾರಣ, ಕಾಂಗ್ರೆಸ್ ಅಭ್ಯರ್ಥಿ ಗೊಂದಲದ ನಡುವೆ ಕಾಂಗ್ರೆಸ್ ಪಕ್ಷದಲ್ಲಿ ತನ್ನದೇ ಆದ ಚಾಪು ಮೂಡಿಸಿದ್ದ ಆನಂದ್ ರೆಡ್ಡಿ ಜೆಡಿಎಸ್ ಗೆ ಸೇರ್ಪಡೆಗೊಳ್ಳುವ ಮೂಲಕ ಕೊತ್ತೂರು ಮಂಜುನಾಥ್ ಗೆ ಚುನಾವಣೆಗೂ ಮೊದಲೇ ಬಾರಿ ಹಿನ್ನಡೆಯಾಗಿದೆ.
ಮಂಡ್ಯ ಎಲೆಕ್ಷನ್‌ಗೆ ಭರದ ಸಿದ್ಧತೆ: ಹೆಸರು ಸೇರ್ಪಡೆಗೆ ಏಪ್ರಿಲ್ 11 ಕೊನೆ ದಿನ
‘ಹೈಕಮಾಂಡ್ ಜೊತೆ ಮಾತನಾಡಿ ಟಿಕೇಟ್ ಕೊಟ್ಟೇ ಕೊಡಿಸುತ್ತೇವೆ. ಗೆಲ್ಲಿಸುವುದು ನಿಮ್ಮ ಕೆಲಸ’
‘ಅಧಿಕಾರ ನಶ್ವರ, ಶಿವಲಿಂಗೇಗೌಡ್ರು ಮಾಡಿರೋ ಅಭಿವೃದ್ದಿಯ ಕೆಲಸ ಅಜರಾಮರ, ಮತದಾರರೇ ಈಶ್ವರ ‘