ಹೊಡೆದಾಡಿಕೊಂಡ ಬಿಗ್‌ಬಾಸ್ ಫ್ಯಾನ್ಸ್: ವಾಹನಗಳು ಜಖಂ

Movie News: ಬಿಗ್‌ಬಾಸ್ ತೆಲುಗುನಲ್ಲಿ ತಮ್ಮ ನೆಚ್ಚಿನ ಸ್ಪರ್ಧಿ ಗೆಲ್ಲುತ್ತಾರೆಂಬ ನಿರೀಕ್ಷೆ ಇದ್ದು, ಹಾಗಾಗಲಿಲ್ಲವೆಂದು ಅಭಿಮಾನಿಗಳು ಹೊಡೆದಾಡಿಕೊಂಡ ಘಟನೆ ಹೈದರಾಬಾದ್‌ನಲ್ಲಿ ನಡೆದಿದೆ.

ಹೈದರಾಬಾದ್‌ನ ಅನ್ನಪೂರ್ಣ ಸ್ಟುಡಿಯೋದಲ್ಲಿ ಈ ಘಟನೆ ನಡೆದಿದ್ದು, ಇದೇ ಸ್ಥಳದಲ್ಲಿ ಬಿಗ್‌ಬಾಸ್ ತೆಲುಗು ಫಿನಾಲೆ ಕಾರ್ಯಕ್ರಮ ನಡೆಯುತ್ತಿತ್ತು. ಈ ವೇಳೆ ಅಲ್ಲಿ ಸ್ಪರ್ಧಿಗಳ ಅಭಿಮಾನಿಗಳು ಬಂದಿದ್ದರು. ಅಮರ್ ದೀಪ್ ಮತ್ತು ಪಲ್ಲವಿ ಪ್ರಶಾಂತ್ ಫೈನಲ್‌ಗೆ ಬಂದಿದ್ದರು. ಪಲ್ಲವಿ ಪ್ರಶಾಂತ್ ಗೆದ್ದಿದ್ದಾರೆ. ಈ ಕಾರಣಕ್ಕಾಗಿ, ಅಮರ್ ದೀಪ್ ಅಭಿಮಾನಿಗಳಿಗೆ ನಿರಾಸೆಯಾಗಿ, ಕೋಪ ಬಂದಿದೆ.

ಈ ವೇಳೆ ಅಮರ್ ದೀಪ್ ಅಭಿಮಾನಿಗಳು ಸ್ಟುಡಿಯೋದಲ್ಲೇ ಗಲಾಟೆ ಶುರು ಮಾಡಿದ್ದಾರೆ. ಇವರ ಕೋಪಕ್ಕೆ ಬಸ್, ಕಾರುಗಳ ಗಾಜುಗಳು ಪುಡಿ ಪುಡಿಯಾಗಿದೆ. ಅಲ್ಲದೇ ಪಲ್ಲವಿ ಪ್ರಶಾಂತ್ ಅಭಿಮಾನಿಗಳು ಅಮರ್ ದೀಪ್ ಕಾರಿಗೆ ಕಲ್ಲು ತೂರಿ, ಜಖಂ ಮಾಡಿದ್ದಾರೆ. ಇನ್ನೋರ್ವ ಸ್ಪರ್ಧಿ ಅಶ್ವಿನಿ ಅವರ ಕಾರಿನ ಗಾಜು ಕೂಡ ಪುಡಿ ಪುಡಿಯಾಗಿದೆ. ಪೊಲೀಸರು ಮಧ್ಯ ಬಂದು, ಜಗಳ ನಿಲ್ಲಿಸಿ, ಕೇಸ್ ದಾಖಲಿಸಿ, ಕ್ರಮ ಕೈಗೊಂಡಿದ್ದಾರೆ.

ವಾರಣಾಸಿಯ ಬಾಲಕಿಯ ಕವಿತೆಗೆ ಮಾರುಹೋದ ಪ್ರಧಾನಿ ಮೋದಿ

ಕೋಲಾರದ ವಿದ್ಯಾರ್ಥಿಗಳನ್ನು ಭೇಟಿಯಾಗಿ, ಸಾಂತ್ವಾನ ಹೇಳಿದ ಕೇಂದ್ರ ಸಚಿವ ಎ.ನಾರಾಯಣಸ್ವಾಮಿ

‘ಚಿತ್ರರಂಗದಲ್ಲಿ ಚಾಪುಮೂಡಿಸಲು ಸಲಕರಣೆ ಸಿಗದ ಅಲೆಮಾರಿಗಳು ಬೊಗಳಿದರೆ ಇತಿಹಾಸ ಬದಲಾಗುತ್ತಾ?’

About The Author