Thursday, December 12, 2024

Latest Posts

ನಟ ದರ್ಶನ್ ಮತ್ತು ವಿಜಯಲಕ್ಷ್ಮೀಗೆ ವಾರ್ನ್ ಮಾಡಿದ ಬಿಗ್‌ಬಾಸ್ ಜಗದೀಶ್

- Advertisement -

Sandalwood News: ನಟ ದರ್ಶನ್ ಮತ್ತು ಬಿಗ್‌ಬಾಸ್‌ನಲ್ಲಿ ಸ್ಪರ್ಧಿಯಾಗಿ ಭಾಗವಹಿಸಿದ್ದ ಲಾಯರ್ ಜಗದೀಶ್ ಜಗಳ ಇಂದು ನಿನ್ನೆಯದಲ್ಲ. ಹಲವು ತಿಂಗಳಿನದ್ದು. ಇದೀಗ ಮತ್ತೆ ಜಗದೀಶ್ ದರ್ಶನ್ ವಿರುದ್ಧ ಕಿಡಿಕಾರಿದ್ದು, ವಿಜಯಲಕ್ಷ್ಮೀ ಮತ್ತು ದರ್ಶನ್ ಇಬ್ಬರಿಗೂ ಜಗದೀಶ್ ವೀಡಿಯೋ ಮಾಡಿ ವಾರ್ನ್ ಮಾಡಿದ್ದಾರೆ.

ದರ್ಶನ್ ವಿರುದ್ಧ ಜಗದೀಶ್ ಹೇಳಿಕೆ ನೀಡಿರುವ ಕಾರಣ, ಜಗದೀಶ್ ಕುಟುಂಬಕ್ಕೆ ದರ್ಶನ್ ಫ್ಯಾನ್ಸ್ ಕೆಟ್ಟ ಪದ ಬಳಸಿ ಟೀಕೆ ಮಾಡಿದ್ದರು. ಈ ವಿರುದ್ಧ ಜಗದೀಶ್ ಪೊಲೀಸ್ ಠಾಣೆಯಲ್‌ಲಿ ದೂರು ದಾಖಲಿಸಿದ್ದರು. ದರ್ಶನ್ ಅಭಿಮಾನಿ ರಿಷಿ ಎಂಬಾತ ತನಗೆ ಹಲವು ಬಾರಿ ಕಾಲ್ ಮಾಡಿ, ತನ್ನ ಬಗ್ಗೆ ಮತ್ತು ಪತ್ನಿ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಾನೆ ಎಂದು ದೂರಿನಲ್ಲಿ ಹೇಳಿದ್ದರು. ಅಲ್ಲದೇ ದರ್ಶನ್ ಮತ್ತು ರಿಷಿಯಿಂದ ತಮಗೆ ರಕ್ಷಣೆ ಕೊಡಿಸಬೇಕು ಎಂದು ಹೇಳಿದ್ದರು.

ಅಲ್ಲದೇ, ದರ್ಶನ್‌ಗೆ ವಾರ್ನ್ ಮಾಡಿರುವ ಜಗದೀಶ್, ನೋಡಮ್ಮಾ ವಿಜಯಲಕ್ಷ್ಮೀ, ನಿನ್ನ ಗಂಡ ಯಾವನೋ ರಿಷಿ ಅನ್‌ನುವವನ ಕೈಲಿ ವೀಡಿಯೋ ಮಾಡ್ಸಿ ಹಾಕವ್ನೆ. ನಾನು ನಿನ್ನ ಬಗ್ಗೆ ಇಷ್ಟು ಚೆನ್ನಾಗಿ ಮಾತನಾಡುತ್ತಿರಬೇಕಾದ್ರೆ, ನಿನ್ನ ಗಂಡನ ಶಿಷ್ಯಂದ್ರು ನನ್ನ ಪ್ರೀತಿಸಿದವರ, ಮಕ್ಕಳ ಬಗ್ಗೆ ನೇಣು ಹಾಕ್ತೀನಿ, ಪಾಯ್ಸನ್ ಹಾಕ್ತೀನಿ ಅಂತ ಹೇಳಿದ್ರೆ, ಆ ವಾಯ್ಸ್ ಕೇಳಿದ್ರೆನೇ, ಜಗದೀಶ್ ಓರ್ವ ಬಾಹುಬಲಿಯಾಗುತ್ತಾನೆ.

ನನ್ನನ್ನು ಮುಟ್ಟುದ್ರೂ ಪರ್ವಾಗಿಲ್ಲಾ, ನಾನು ಪ್ರೀತಿ ಮಾಡುವವರನ್ನು ಮುಟ್ಟಿದರೆ, ನಾನು ಜಗದೀಶ್ ಆಗಲ್ಲ. ಬಾಹುಬಲಿನೇ. ಯಾಕಂದ್ರೆ ನಾನು ಪ್ರೀತಿ ಮಾಡುವವರ ವಿಚಾರ ಬಂದ್ರೆ, ನಾನು ಯಾವನ್ನು ಕೇರ್ ಮಾಡಲ್ಲ. ಅದು ಸ್ವತಃ ಮೇಲಿರುವ ಶಕ್ತಿಯಾದ್ರೂ ಕೂಡ ನನ್ನನ ಬಾಹುಬಲಿತನವನ್ನು ನಾನು ನೋಡಿಸೇ ನೋಡ್ಸ್ತೀನಿ ಎಂದು ಜಗದೀಶ್ ವಾರ್ನ್ ಮಾಡಿದ್ದಾರೆ.

- Advertisement -

Latest Posts

Don't Miss