Special Podcast: ದಿವಂಗತ ಅಧಿಕಾರಿ ಡಿ.ಕೆ.ರವಿ ಅವರ ಪತ್ನಿ ಮತ್ತು ಕಾಂಗ್ರೆಸ್ ನಾಯಕಿ ಕುಸುಮಾ ಅವರು ವಿಧವಾ ಜೀವನದ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.
ಸಮಾಜ ವಿಧವೆಯರನ್ನು, ಡಿವೋರ್ಸ್ ಪಡೆದವರನ್ನು ನೋಡುವ ರೀತಿಯೇ ಬೇರೆಯಾಗಿರುತ್ತದೆ. ವಿಧವೆಯರನ್ನು ಬೇರೆ ರೀತಿ ನೋಡಿದ್ರೆ, ಡಿವೋರ್ಸ್ ಪಡೆದವರನ್ನು ನೋಡುವ ರೀತಿಯೂ ಬೇರೆಯದ್ದೇ ಆಗಿರುತ್ತದೆ. ಡಿವೋರ್ಸ್ ಆದವರದ್ದಾದರೆ ಬೇರೆ ಬೇರೆ ಸಮಸ್ಯೆಯಿರುತ್ತದೆ. ಕಾರಣಾಂತರಗಳಿಂದ ಅವರವರೇ ಬೇರೆಯಾಗಿರುತ್ತಾರೆ. ಆದರೆ ವಿಧವೆಯರದ್ದು ಏನು ತಪ್ಪಿರುತ್ತದೆ.? ಆಯುಷ್ಯ ಇರುವಷ್ಟು ದಿನ ಪತಿ ಬದುಕಿರುತ್ತಾನೆ.
ಆದರೆ ಎಲ್ಲವೂ ಆಕೆಯ ಹಣೆಬರಹ, ಆಕೆಯ ಕಾಲ್ಗುಣ ಸರಿ ಇರಲಿಲ್ಲ, ಆಕೆಯನ್ನು ಮದುವೆಯಾಗಿದ್ದಕ್ಕೆ ಆತ ತೀರಿಹೋದ, ಎಂದೆಲ್ಲ ಹೇಳಿಬಿಡುತ್ತಾರೆ. ಇದನ್ನೆಲ್ಲ 1 ಹೆಣ್ಣು ಯಾವ ರೀತಿ ಸಹಿಸುತ್ತಾಳೆ..? ಇಂಥ ಸಮಾಜದಲ್ಲಿ ನಾವು ಬದುಕುತ್ತಿದ್ದೇವೆ ಎಂದು ಕುಸುಮಾ ಬೇಸರ ವ್ಯಕ್ತಪಡಿಸಿದ್ದಾರೆ.
ಶುಭಕಾರ್ಯಗಳಲ್ಲಿ ನಾಲ್ಕು ಜನ ಮುತ್ತೈದೆಯರು ಬನ್ನಿ ಎಂದು ಕರೆಯುತ್ತಾರೆ. ನಾನು ಹಿಂದೆ ಸರಿದುಬಿಡ್ತೀನಿ. ಯಾಕಂದ್ರೆ ನಾನು ಅಂಥ ವಾತಾವರಣದಲ್ಲಿ ಬೆಳೆದಿದ್ದೀನಿ. ತಾಯಿ ವಿಧವೆಯಾದಾಗ ಸ್ವಂತ ಮಗನ ಮದುವೆಯಲ್ಲಿ ಆಕೆಗೆ ಧಾರೆ ಎರೆಯುವ ಅವಕಾಶವಿರುವುದಿಲ್ಲ. ಅಂಥದ್ದರಲ್ಲಿ ನಾವೆಲ್ಲಾ ಯಾವ ಲೆಕ್ಕ ಎಂದು ಕುಸುಮಾ ಪ್ರಶ್ನಿಸಿದ್ದಾರೆ. ಸಂಪೂರ್ಣ ಸಂದರ್ಶನಕ್ಕಾಗಿ ವೀಡಿಯೋ ನೋಡಿ.




