Bigg Boss News: ಬಿಗ್‌ಬಾಸ್ ಜರ್ನಿ ಮುಗಿಸಿ ಹೊರಬಂದಿರುವ ಗೌತಮಿ ಜಾಧವ್, ಕರ್ನಾಟಕ ಟಿವಿ ಸಂದರ್ಶನದಲ್ಲಿ ಮಾತನಾಡಿದ್ದಾರೆ.
ಬಿಗ್‌ಬಾಸ್ ಮನೆಯಲ್ಲಿ ಉಗ್ರಂ ಮಂಜು ಜೊತೆಗಿನ ಗೆಳೆತನದ ಬಗ್ಗೆ ಮಾತನಾಡಿರುವ ಗೌತಮಿ, ಮಂಜುಗೆ ಗೆಳೆತನದ ಬಗ್ಗೆ ಗೌರವವಿದೆ. ತುಂಬಾ ಕೇರ್ ಮಾಡ್ತಾರೆ. ಈ ವಿಚಾರದಿಂದ ಅವರು ನನಗೆ ಹತ್ತಿರವಾಗಿದ್ದಾರೆ ಎಂದು ಗೌತಮಿ ಹೇಳಿದ್ದಾರೆ.
ಇನ್ನು ಗೌತಮಿ ಮತ್ತು ಮಂಜು ಗೆಳೆತನ ನೋಡಿ ಹಲವರು ಅಫೇರ್ ಅನ್ನೋ ರೀತಿ ಟ್ರೋಲ್ ಮಾಡಿದ್ದರು. ಈ ಬಗ್ಗೆ ಸ್ಪಷ್ಟನೆ ನೀಡಿರುವ ಗೌತಮಿ, ನನ್ನ ಮತ್ತು ಮಂಜು ನಡುವೆ ಗೆಳೆತನ ಬಿಟ್ಟು ಬೇರೇನಿಲ್ಲ ಎಂದಿದ್ದಾರೆ. ಅಲ್ಲದೇ ಮಂಜು ಅವರ ಗೆಳೆತನವನ್ನು ನಾನೆಲ್ಲೂ ಮಿಸ್‌ಯ್ಯೂಸ್ ಮಾಡಿಕೊಂಡಿಲ್ಲ. ಹೊರಗೆ ಏನು ನಡೆಯುತ್ತದೆ ಎಂದು ನಮಗೆ ಗೊತ್ತಿರುವುದಿಲ್ಲ. ನಮ್ಮ ಕುಟುಂಬದವರು , ಅವರ ಕುಟುಂಬದವರು ಏನೇನು ಅನುಭವಿಸುತ್ತಾರೋ ಅದು ಅವರಿಗೇ ಗೊತ್ತು ಎಂದು ಗೌತಮಿ ಹೇಳಿದ್ದಾರೆ. ಈ ಬಗ್ಗೆ ಸಂಪೂರ್ಣ ಮಾಹಿತಿಗಾಗಿ ವೀಡಿಯೋ ನೋಡಿ.