Wednesday, December 4, 2024

Latest Posts

Bigg Boss: ಬಿಗ್‌ಬಾಸ್‌ನಿಂದ ಹೊರಬಂದಿದ್ದೇಕೆ ಎಂದು ವಿವರಿಸಿದ ಶೋಭಾ ಶೆಟ್ಟಿ

- Advertisement -

Bigg Boss: ನಟಿ ಶೋಭಾ ಶೆಟ್ಟಿ ಈ ಮೊದಲು ತೆಲುಗು ಬಿಗ್‌ಬಾಸ್‌ನಲ್ಲಿ ಸ್ಪರ್ಧಿಸಿ, ಫಿನಾಲೆ ತನಕ ತಲುಪುವುದಕ್ಕೆ ಒಂದೇ ರೌಂಡ್ ಬಾಕಿ ಇರುವಾಗ, ಹೊರಬಿದ್ದಿದ್ದರು. ಕನ್ನಡದಲ್ಲೂ ಅದೃಷ್ಟ ಪರೀಕ್ಷೆಗಿಳಿಯಲು ಕನ್ನಡ ಬಿಗ್‌ಬಾಸ್‌ಕ್ಕೆ ಬಂದಿದ್ದರು. ಆದರೆ ಬಿಗ್‌ಬಾಸ್‌ ಕನ್ನಡಕ್ಕೆ ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಬಂದು, ಎರಡೇ ವಾರಕ್ಕೆ ವಾಪಸ್ ಆಗಿದ್ದಾರೆ.

ತಾವಾಗಿಯೇ ಹೊರಹೋಗುತ್ತೇನೆ ಎಂದಿದ್ದಕ್ಕೆ ಶೋಭಾ ಶೆಟ್ಟಿಯವರನ್ನು ಬಿಗ್‌ಬಾಸ್‌ನಿಂದ ಹೊರ ಕಳುಹಿಸಲಾಗಿದ್ದು, ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿದ್ದಾರೆ.

‘ನನ್ನ ಪ್ರೀತಿಯ ಕನ್ನಡಿಗರೇ, ನನ್ನ ಬಿಗ್‌ಬಾಸ್ ಪಯಣ ಮುಗಿದಿದೆ. ಆಟದ ಮೇಲೆ ಗಮನ ಕೊಡಲು ಆರೋಗ್ಯ ಸಹಕರಿಸುತ್ತಿಲ್ಲ. ಮುನ್ನಡೆಯುವ ಆಸೆ ಇದ್ದರೂ, ದೇಹ ಬಿಡುತ್ತಿಲ್ಲ. ಯಾರನ್ನೂ ಯಾವುದನ್ನೂ ನಾನು ಹಗುರವಾಗಿ ತೆಗೆದುಕೊಂಡಿಲ್ಲ. ಜೀವನದ ಜವಾಬ್ದಾರಿಗಾಗಿ ಆರೋಗ್ಯವನ್ನು ಕಾಪಾಡಿಕೊಂಡು ಮುನ್ನಡೆಯುವ ಸಲುವಾಗಿ ನಾನು ಈ ನಿರ್ಧಾರ ತೆಗೆದುಕೊಂಡಿದ್ದೇನೆ.

ಇದೆಲ್ಲದರ ಮಧ್ಯೆ ನೀವು ತೋರಿಸಿದ ಪ್ರೀತಿ ಮತ್ತು ಬೆಂಬಲಕ್ಕೆ ನಾನು ಆಭಾರಿಯಾಗಿದ್ದೇನೆ. ತಿಳಿದೋ, ತಿಳಿಯದೆಯೋ ನನ್ನಿಂದ ಯಾರಿಗಾದರೂ ಬೇಸರವಾಗಿದ್ದರೆ, ದಯವಿಟ್ಟು ಕ್ಷಮಿಸಿ. ನನ್ನ ಜನರಿಗೆ, ಕಲರ್ಸ್ ಕನ್ನಡ ತಂಡಕ್ಕೆ ಮತ್ತು ಕಿಚ್ಚ ಸುದೀಪ್ ಸರ್‌ಗೆ ನಾನು ಧನ್ಯವಾದ ತಿಳಿಸುತ್ತೇನೆ.

ಹೊಸ ಹುರುಪಿನೊಂದಿಗೆ ನಿಮ್ಮನ್ನು ರಂಜಿಸಲು, ನಿಮ್ಮ ಪ್ರೀತಿಯನ್ನು ಮತ್ತೆ ಪಡೆಯಲು ಮತ್ತೊಂದು ರೂಪದಲ್ಲಿ ಮತ್ತೆ ಖಂಡಿತಾ ನಾನು ನಿಮ್ಮ ಮುಂದೆ ಬರುವೆ, ಇಂತಿ ನಿಮ್ಮ ಪ್ರೀತಿಯ ಶೋಭಾ ಶೆಟ್ಟಿ. ಎಂದು ಶೋಭಾ ಶೆಟ್ಟಿ ಪೋಸ್ಟ್ ಹಾಕಿದ್ದಾರೆ.

- Advertisement -

Latest Posts

Don't Miss