Thursday, December 12, 2024

Latest Posts

Uttarakhand : ಬಿಪಿನ್ ರಾವತ್ ಸಹೋದರ ಬಿಜೆಪಿಗೆ ಸೇರ್ಪಡೆ..!

- Advertisement -

ಉತ್ತರಖಂಡ್ : ವಿಧಾನಸಭೆ ಚುನಾವಣೆಗೂ ಮುನ್ನವೇ ಜನರಲ್ ಬಿಪಿನ್ ರಾವತ್ ಸಹೋದರ(Brother of Rawat) ಬಿಜೆಪಿ ಪಕ್ಷಕ್ಕೆ(BJP party)ಸೇರ್ಪಡೆಯಾಗಿದ್ದಾರೆ. ಕೇಂದ್ರ ಚುನಾವಣಾ ಆಯೋಗವು ಚುನಾವಣೆ ದಿನಾಂಕವನ್ನು ನಿಗದಿ ಮಾಡಿದ್ದು, ಉತ್ತರಖಂಡ್ (Uttarakhand)70 ವಿಧಾನಸಭಾ ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ಚುನಾವಣೆ ನಡೆಸಲು ಕೇಂದ್ರ ಚುನಾವಣಾ ಆಯೋಗ(Central Election Commission)ಸಿದ್ಧತೆ ನಡೆಸಿದೆ. ಇತ್ತೀಚೆಗೆ ಸೇನಾ ಹೆಲಿಕಾಪ್ಟರ್ ಅಪಘಾತ(Military helicopter accident)ದಲ್ಲಿ ನಿಧನರಾದ ಬಿಪಿನ್ ರಾವತ್ ಅವರ ಸಹೋದರ ವಿಜಯ್ ರಾವತ್(Vijay Rawat) ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. ಬಿಜೆಪಿಗೆ ಸೇರ್ಪಡೆಗೊಂಡ ನಂತರ ಮಾಡಿದ ಕರ್ನಲ್ ವಿಜಯ ರಾವತ್ ನನ್ನ ತಂದೆ ಸೇನೆಯಿಂದ ನಿವೃತ್ತಿಯಾದ ನಂತರ ಬಿಜೆಪಿಯಲ್ಲಿ ಇದ್ದರು, ಈಗ ನಾನು ಸೇರ್ಪಡೆಗೊಂಡಿದ್ದೇನೆ. ಪ್ರಧಾನಿ ನರೇಂದ್ರ ಮೋದಿಯವರ ದೂರದೃಷ್ಟಿ ವಿಶೇಷವಾಗಿದೆ, ಅವರ ಕಾರ್ಯವೈಖರಿಯನ್ನು ಎಲ್ಲರೂ ಮೆಚ್ಚುತ್ತಾರೆ ಎಂದು ಉತ್ತರಖಂಡ್ ನ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಮಿ(Pushkar Singh Dhami) ನೇತೃತ್ವದಲ್ಲಿ ಬಿಜೆಪಿಗೆ ಸೇರ್ಪಡೆಯಾಗಿ ಮಾತನಾಡಿದರು. ಇನ್ನು ಜನವರಿ 21ರಿಂದ 28ರವರೆಗೆ ನಾಮಪತ್ರ ಸಲ್ಲಿಸಲು ಅವಕಾಶವಿರಲಿದ್ದು, ಜನವರಿ 29ರಂದು ನಾಮಪತ್ರ ಪರಿಶೀಲನೆ ನಡೆಯಲಿದೆ. ಜನವರಿ 31 ನಾಮಪತ್ರ ಹಿಂಪಡೆಯಲು ಕೊನೆಯ ದಿನಾಂಕವಾಗಿದೆ. ಉತ್ತರಖಂಡ್ ನ 70 ವಿಧಾನಸಭಾ ಕ್ಷೇತ್ರಗಳಿಗೆ ಫೆಬ್ರವರಿ 14 ರಂದು ಮತದಾನ ನಡೆಯಲಿದ್ದು ಮಾರ್ಚ್ 10ರಂದು ಫಲಿತಾಂಶ ಹೊರಬೀಳಲಿದೆ.

- Advertisement -

Latest Posts

Don't Miss