Sunday, September 8, 2024

Latest Posts

ಲೋಕಸಭೆ ಎಲೆಕ್ಷನ್‌ಗಾಗಿ ಸಂಘಟನಾತ್ಮಕ ಜಿಲ್ಲೆಗಳ ಜಿಲ್ಲಾಧ್ಯಕ್ಷರನ್ನು ನೇಮಕ ಮಾಡಿದ ಬಿಜೆಪಿ

- Advertisement -

Political News: ಲೋಕಸಭಾ ಚುನಾವಣೆ ಹತ್ತಿರವಾಗಿದ್ದು, ಎಲ್ಲ ಪಕ್ಷಗಳು ಗೆಲುವಿಗಾಗಿ ಭರ್ಜರಿ ತಯಾರಿಯಲ್ಲಿದೆ. ಬಿಜೆಪಿ ಪಕ್ಷ ಸಂಘಟನಾತ್ಮಕ ಜಿಲ್ಲೆಗಳ ಜಿಲ್ಲಾ ಅಧ್ಯಕ್ಷರನ್ನು ನೇಮಕಗೊಳಿಸಿದೆ.

ಮೈಸೂರು ನಗರಕ್ಕೆ ಎಲ್.ನಾಗೇಂದ್ರ, ಮೈಸೂರು ಗ್ರಾಮಾಂತರಕ್ಕೆ ಎಲ್.ಆರ್.ಮಹದೇವ ಸ್ವಾಮಿ, ಚಾಮರಾಜನಗರಕ್ಕೆ ಸಿ.ಎಸ್.ನಿರಂಜನ್ ಕುಮಾರ್, ಮಂಡ್ಯಕ್ಕೆ ಇಂದ್ರೇಶ್ ಕುಮಾರ್, ಹಾಸನಕ್ಕೆ ಸಿದ್ದೇಶ್ ನಾಗೇಂದ್ರ, ಕೊಡಗು ಜಿಲ್ಲೆಗೆ ರವಿ ಕಾಳಪ್ಪ, ದಕ್ಷಿಣ ಕನ್ನಡಕ್ಕೆ ಸತೀಶ್ ಕುಂಪಲ, ಉಡುಪಿಗೆ ಕಿಶೋರ್ ಕುಂದಾಪುರ, ಚಿಕ್ಕಮಗಳೂರಿಗೆ ದೇವರಾಜ್‌ ಶೆಟ್ಟಿ, ಶಿವಮೊಗ್ಗಕ್ಕೆ ಟಿ.ಡಿ.ಮೇಘರಾಜ್, ಉತ್ತರಕನ್ನಡಕ್ಕೆ ಎನ್.ಎಸ್.ಹೆಗಡೆ, ಹಾವೇರಿಗೆ ಅರುಣ್ ಕುಮಾರ್ ಪೂಜಾರ್, ಹುಬ್ಬಳ್ಳಿ-ಧಾರವಾಡಕ್ಕೆ ತಿಪ್ಪಣ್ಣ ಮಜ್ಜಗಿ, ಧಾರವಾಡ ಗ್ರಾಮಾಂತರಕ್ಕೆ ನಿಂಗಪ್ಪ ಸುತ್ತಗಟ್ಟಿ, ಗದಗಕ್ಕೆ ರಾಜು ಕುರಡಗಿ, ಬೆಳಗಾವಿ ನಗರಕ್ಕೆ ಗೀತಾ ಸುತಾರ್, ಬೆಳಗಾವಿ ಗ್ರಾಮಾಂತರಕ್ಕೆ ಸುಭಾಷ್ ಪಾಟೀಲ್, ಚಿಕ್ಕೋಡಿಗೆ ಸತೀಶ್ ಅಪ್ಪಾಜಿಗೋಳ್, ಬಾಗಲಕೋಟೆಗೆ ಶಾಂತಗೌಡ ಪಾಟೀಲ್, ವಿಜಯಪುರಕ್ಕೆ ಆರ್.ಎಸ್.ಪಾಟೀಲ್, ಬೀದರ್ ಜಿಲ್ಲೆಗೆ ಸೋಮನಾಥ್ ಪಾಟೀಲ್, ಕಲಬುರಗಿ ನಗರಕ್ಕೆ ಚಂದ್ರಕಾಂತ್ ಪಾಟೀಲ್, ಕಲಬುರಗಿ ಗ್ರಾಮಾಂತರಕ್ಕೆ ಶಿವರಾಜ್ ಪಾಟೀಲ್ ರದ್ದೇವಾಡಿ, ಯಾದಗಿರಿ ಜಿಲ್ಲೆಗೆ ಅಮೀನ್ ರೆಡ್ಡಿ, ರಾಯಚೂರು ಜಿಲ್ಲೆಗೆ ಶಿವರಾಜ್ ಪಾಟೀಲ್, ಕೊಪ್ಪಳ ಜಿಲ್ಲೆಗೆ ನವೀನ್ ಗುಳಗಣ್ಣನವರ್, ಬಳ್ಳಾರಿಗೆ ಅನಿಲ್ ಕುಮಾರ್ ಮೋಕಾ, ವಿಜಯನಗರ ಜಿಲ್ಲೆಗೆ ಚೆನ್ನಬಸನಗೌಡ ಪಾಟೀಲ್, ದಾವಣಗೆರೆ ಜಿಲ್ಲೆಗೆ ರಾಜಶೇಖರ್, ಚಿತ್ರದುರ್ಗ ಜಿಲ್ಲೆಗೆ ಎ.ಮುರಳಿ, ತುಮಕೂರು ಜಿಲ್ಲೆಗೆ ಎಸ್.ರವಿಶಂಕರ್, ಮಧುಗಿರಿ ಜಿಲ್ಲೆಗೆ ಬಿ.ಸಿ.ಹನುಮಂತೇಗೌಡ, ರಾಮನಗರ ಜಿಲ್ಲೆಗೆ ಆನಂದಸ್ವಾಮಿ, ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ರಾಮಕೃಷ್ಣಪ್ಪ, ಚಿಕ್ಕಬಳ್ಳಾಪುರ ಜಿಲ್ಲೆಗೆ ರಾಮಲಿಂಗಪ್ಪ, ಕೋಲಾರ ಜಿಲ್ಲೆಗೆ ಕೆ.ಎನ್.ವೇಣುಗೋಪಾಲ್, ಬೆಂಗಳೂರು ಉತ್ತರಕ್ಕೆ ಎಸ್.ಹರೀಶ್, ಬೆಂಗಳೂರು ದಕ್ಷಿಣಕ್ಕೆ ಸಿ.ಕೆ.ರಾಮಮೂರ್ತಿ, ಬೆಂಗಳೂರು ಕೇಂದ್ರಕ್ಕೆ ಸಪ್ತಗಿರಿಗೌಡ ಅವರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ.

55 ವರ್ಷದ ಕಾಂಗ್ರೆಸ್ ನಂಟು ತೊರೆದು ಶಿವಸೇನೆ ಸೇರಿದ ಮಿಲಿಂದ್ ದಿಯೋರಾ

ಪೂಜೆ ಮುಗಿಸಿ ಬರುತ್ತಿದ್ದ ಬಿಜೆಪಿ ಶಾಸಕ ರಾಜೇಶ್ ನಾಯ್ಕ್‌ಗೆ ಕಾರು ಡಿಕ್ಕಿ

ಪಂಚೆ-ಶಲ್ಯ ಧರಿಸಿ ಪೊಂಗಲ್‌ ಸೆಲೆಬ್ರೇಟ್ ಮಾಡಿದ ಪಿಎಂ ಮೋದಿ: ಹಾಡು ಹಾಡಿದ ಬಾಲಕಿಗೆ ಶಾಲು ಗಿಫ್ಟ್

- Advertisement -

Latest Posts

Don't Miss